ವರ್ಗ:ಎರವಲು ಪದಗಳು
Jump to navigation
Jump to search
ಈ ವರ್ಗದ ಪದಗಳ ಪರಿ[ಸಂಪಾದಿಸಿ]
ಈ ವರ್ಗದ ಪದಗಳು ಕನ್ನಡವಲ್ಲದ ಬೇರೆ ನುಡಿಗಳಲ್ಲಿ ಹುಟ್ಟಿ ಕನ್ನಡಕ್ಕೆ ತಕ್ಕ ಮಾರ್ಪಾಡುಗಳ ನಂತರ (ಇಲ್ಲವೇ ಒಮ್ಮೊಮ್ಮೆ ಹಾಗೆಯೇ) ಕನ್ನಡಕ್ಕೆ ಸೇರಿರುತ್ತವೆ. ಹಲವು ಎರವಲು ಪದಗಳಿಗೆ ಕನ್ನಡದ ಒಟ್ಟುಗಳು (ಪ್ರತ್ಯಯಗಳು) ಇಲ್ಲವೇ ಪದಗಳು ಸೇರಿರುತ್ತವೆ. ಉದಾಹರಣೆಗೆ ದಯವಿಟ್ಟು ಎನ್ನುವ ಪದವು ಸಂಸ್ಕೃತದ ದಯೆ ಎಂಬ ಪದಕ್ಕೆ ಕನ್ನಡದ ಇಟ್ಟು ಎಂಬ ಪದವು ಸೇರಿ ಆಗಿದೆ. ಯಾವ ಪದಗಳಿಗೆ ಕನ್ನಡವಲ್ಲದ ಬೇರೆ ನುಡಿಗಳ ಪದಗಳು ಸೇರಿರುತ್ತವೋ ಅವುಗಳನ್ನೆಲ್ಲ ಎರವಲು ಪದಗಳು ಎಂದು ಕರೆಯುವುದು ರೂಢಿ. ಹಾಗೆಯೇ ಸರ್ವಕಾಲಿಕ ಎಂಬ ಪದವು ಸಂಸ್ಕೃತದಿಂದ ನೇರವಾಗಿ ಕನ್ನಡಕ್ಕೆ (ಯಾವುದೆ ಮಾರ್ಪಾಡಿಲ್ಲದೆ) ಸೇರಿರುತ್ತದೆ. ಇಂತಹ ಪದಗಳನ್ನೂ ಎರವಲು ಪದಗಳು ಎಂದು ಕರೆಯುವುದು ರೂಢಿ.