ವಿಕ್ಷನರಿ:ಸಹಾಯ

ವಿಕ್ಷನರಿದಿಂದ
  • en: This is the community discussion page. See Project:Bot policy for bot flag requests.
  • kn; please

ಹೊಸ ಪದಗಳನ್ನು ಸೇರಿಸುವ ಪರಿ[ಸಂಪಾದಿಸಿ]

ಹೊಸ ಪದಗಳನ್ನು ವಿಕ್ಷನರಿಗೆ ಸೇರಿಸುವುದು ಬಹಳ ಸುಲಭ. ಯಾವುದಾದರೂ ಪುಟದಲ್ಲಿ ಎಡಪಟ್ಟಿಯಲ್ಲಿರುವ ಇಲ್ಲವೇ ಮುಖ್ಯ ಪುಟದಲ್ಲಿರುವ ಹುಡುಕುಪಟ್ಟಿಯಲ್ಲಿ ನೀವು ಸೇರಿಸಬೇಕೆಂದಿರುವ ಪದವನ್ನು ಬರೆದು ಗುಂಡಿಯನ್ನು ಒತ್ತಿ. ಆಗ ಕಾಣಿಸುವ ಪುಟದಲ್ಲಿ ಯಾವುದಾದರೂ ಕೆಂಪುಕೊಂಡಿಯನ್ನು ಒತ್ತಿದರೆ ಹೊಸ ಪದವನ್ನು ಸೇರಿಸುವ ಪರದೆ ತೆಗೆದುಕೊಳ್ಳುತ್ತದೆ. ನೀವು ಸೇರಿಸುವ ಹೊಸ ಪದಗಳು ಕನ್ನಡದವು ಇಲ್ಲವೇ ಇಂಗ್ಲೀಷಿನವು ಆಗಿರಬೇಕು. ಕನ್ನಡ ಮತ್ತು ಇಂಗ್ಲೀಷ್ ಪದಗಳನ್ನು ಈ ಯೋಜನೆಯಲ್ಲಿ ಕೆಳಕಂಡ ಮಾದರಿಗೆ ಹೊಂದುವಂತೆಯೇ ಸೇರಿಸಿ ಎಂದು ಕೇಳಿಕೊಳ್ಳುತ್ತೇವೆ.

ಕನ್ನಡ ಪದಗಳ ಪುಟಗಳಿಗೆ ಮಾದರಿ[ಸಂಪಾದಿಸಿ]

ಕನ್ನಡ-ಕನ್ನಡ ಶಬ್ದಕೋಶಕ್ಕೆ ಹೊಸ ಪದವನ್ನು ಸೇರಿಸುವಾಗ ಈ ಕೆಳಗಿನ ಮಾದರಿಯನ್ನು ಬಳಸಿಕೊಳ್ಳಿ. "ನಾಮಪದ", "ಕ್ರಿಯಾಪದ" ಮತ್ತು "ವಿಶೇಷಣ" - ಇವುಗಳಲ್ಲಿ ನಿಮ್ಮ ಪದಕ್ಕೆ ಸರಿಹೊಂದುವುದನ್ನು ಮಾತ್ರ ಕಾಣಿಸುವಂತೆ ಮಾಡಿ. ಸರಿಹೊಂದುವ ತಲೆಬರಹದ ಅಡಿಯಲ್ಲಿ ಕನ್ನಡದಲ್ಲಿ ಅರ್ಥವನ್ನು ಬರೆಯಿರಿ. ಒಂದಕ್ಕಿಂತ ಹೆಚ್ಚಿನ ಅರ್ಥವಿದ್ದರೆ ಇನ್ನೊಂದು # ಚಿಹ್ನೆಯನ್ನು ಸಾಲಿನ ಮೊದಲಿಗೆ ಹಾಕಿಕೊಂಡು ಬರೆಯಿರಿ. ಒಂದೇ ಅರ್ಥ ಕೊಡುವ ಎಲ್ಲಾ ಪದಗಳನ್ನೂ ಒಂದೇ ಬುಲೆಟ್ಟಿನಲ್ಲಿ ಬರೆಯಿರಿ. ಇದು ಬಹಳ ಮುಖ್ಯ. ನೀವು ಅರ್ಥದಲ್ಲಿ ಕೊಡುವ ಮುಖ್ಯವಾದ ಕನ್ನಡದ ಪದಗಳನ್ನು [[ ಈ ಆವರಣಗಳೊಳಗೆ ]] ಬರೆಯಿರಿ (ಇದರಿಂದ ವಿಕ್ಷನರಿಯು ಆಯಾ ಹೆಸರಿನ ಪದಗಳ ಹೊಸ ಪುಟಗಳನ್ನು ತಾನಾಗಿ ತಾನೇ ತಯಾರಿಸುತ್ತದೆ). ನೀವು ಸೇರಿಸುವ ಪದದ ಬಳಕೆಯನ್ನು ಕೊಡುವುದು ಬಹಳ ಮುಖ್ಯ. ಪದದ ಹುಟ್ಟು ಹೇಗಾಯಿತು ಎಂಬುದನ್ನು ಕೂಡ ಬರೆಯಿರಿ. ಆ ಪದವು ನಿಮಗೆ ಎಲ್ಲಿ ಸಿಕ್ಕಿತು ಎನ್ನುವುದರ ಬಗ್ಗೆ (ಎಂದರೆ ಪದದ ಮೂಲದ ಬಗ್ಗೆ) ತಿಳಿದಿದ್ದರೆ ಅದನ್ನು ಕೂಡ ಬರೆಯಿರಿ. ತುಂಬಲಾರದ ಇಲ್ಲವೇ ಬೇಡವಾದ ತಲೆಬರಹಗಳನ್ನು ತೆಗೆದುಹಾಕಿ. ಈ ಎಲ್ಲಾ ಮಾಹಿತಿಯನ್ನು ಹಾಕಲಾಗದಿದ್ದರೆ ನಿಮಗಾದಷ್ಟು ಮಾಹಿತಿಯನ್ನು ಹಾಕಿ. ಮಿಕ್ಕಿದ್ದನ್ನು ಬೇರೆಯವರು ಹಾಕುತ್ತಾರೆ! ಕನ್ನಡದ ಪದಗಳಿಗೆ ಇಂಗ್ಲೀಷ್ ಅನುವಾದವನ್ನು ಕೂಡ ತಪ್ಪದೆ ಕೊಡಿ. ಇಂಗ್ಲೀಷ್ ಅನುವಾದದ ಪದಗಳಿಗೆ ಕನ್ನಡ ವಿಕ್ಷನರಿ ಮತ್ತು ಇಂಗ್ಲೀಷ್ ವಿಕ್ಷನರಿ - ಎರಡು ಕೊಂಡಿಗಳನ್ನೂ ಕೊಡಿ (ಕೆಳಗಿನ ಮಾದರಿಯಂತೆ). ಒಂದಕ್ಕಿಂತ ಹೆಚ್ಚು ಪದವಿಭಾಗಗಳಲ್ಲಿ ಬಳಕೆಯಾಗುತ್ತಿರುವ ಪದಗಳ ಎಲ್ಲಾ ಪದವಿಭಾಗಗಳೂ ಆಯಾ ಪುಟದಲ್ಲಿ ಇರಬೇಕೆಂಬುದು ಗುರಿ (ಉದಾ: ಇಳಿ ಎನ್ನುವುದು ಗುಣಪದವೂ ಆಗಿದೆ, ಕ್ರಿಯಾಪದವೂ ಆಗಿದೆ). ಬೇರೆಬೇರೆ ಪದವಿಭಾಗವನ್ನು ಹೆಚ್ಚು-ಕಡಿಮೆ ಬೇರೆಬೇರೆ ಪದಗಳಂತೆಯೇ ಎಣಿಸಿ ಅವುಗಳ ಅರ್ಥವನ್ನೂ, ಇಂಗ್ಲೀಷಿನ ಅನುವಾದವನ್ನೂ, ಮಿಕ್ಕೆಲ್ಲ ವಿವರಗಳನ್ನೂ ಬೇರೆಬೇರೆಯಾಗಿಯೇ ಕೊಡಿ.

ಕ್ರಿಯಾಪದಗಳಿಗೆ ಈ ಕೋಡನ್ನು ಬಳಸಿ[ಸಂಪಾದಿಸಿ]

==ಕನ್ನಡ==
===ಕ್ರಿಯಾಪದ===
'''{{BASEPAGENAME}}'''
# [[ಅರ್ಥ]], [[ಅರ್ಥ]]
#: '''ಉದಾಹರಣೆಯಪದ''' ಬಳಸುವ ಒಂದು ವಾಕ್ಯ
====ಅನುವಾದ====
* English: [[englishword]], [[:en:englishword]]

ಎತ್ತುಗೆ: "ಎಳೆದುಕೊಂಡು ಹೋಗು" ಎಂಬ ಜೋಡು ಪದಕ್ಕೆ ಮೇಲಿನ ಕೋಡನ್ನು ಈ ರೀತಿ ಬದಲಿಸಿ.

==ಕನ್ನಡ==
===ಕ್ರಿಯಾಪದ===
'''ಎಳೆದುಕೊಂಡು ಹೋಗು'''
# ________________
====ಅನುವಾದ====
* English: [[ravish]], [[:en:ravish]]
[[ವರ್ಗ:ಕ್ರಿಯಾಪದಗಳು]]
[[ವರ್ಗ:ಕನ್ನಡದ ಬೇರಿನ ಪದಗಳು]]

ಗುಣಪದಗಳಿಗೆ ಈ ಕೋಡನ್ನು ಬಳಸಿ[ಸಂಪಾದಿಸಿ]

==ಕನ್ನಡ==
===ಗುಣಪದ===
'''{{BASEPAGENAME}}'''
# [[ಅರ್ಥ]], [[ಅರ್ಥ]]
#: '''ಉದಾಹರಣೆಯಪದ''' ಬಳಸುವ ಒಂದು ವಾಕ್ಯ
====ಅನುವಾದ====
* English: [[englishword]], [[:en:englishword]]

ಎತ್ತುಗೆ: "ಕೆಂಚು" ಎಂಬ ಗುಣಪದಕ್ಕೆ ಮೇಲಿನ ಕೋಡನ್ನು ಈ ರೀತಿ ಬದಲಿಸಿ.

==ಕನ್ನಡ==
===ಗುಣಪದ===
'''ಕೆಂಚು'''
# ________________
#: '''ಕೆಂಚು''' ಕೂದಲು
====ಅನುವಾದ====
* English: [[reddish]], [[:en:reddish]]
[[ವರ್ಗ:ಗುಣಪದಗಳು]]
[[ವರ್ಗ:ಕನ್ನಡದ ಬೇರಿನ ಪದಗಳು]]

ನಾಮಪದಗಳಿಗೆ ಈ ಕೋಡನ್ನು ಬಳಸಿ[ಸಂಪಾದಿಸಿ]

==ಕನ್ನಡ==
===ನಾಮಪದ===
'''{{BASEPAGENAME}}'''
# [[ಅರ್ಥ]], [[ಅರ್ಥ]]
#: '''ಉದಾಹರಣೆಯಪದ''' ಬಳಸುವ ಒಂದು ವಾಕ್ಯ
====ಅನುವಾದ====
* English: [[englishword]], [[:en:englishword]]

ಎತ್ತುಗೆ: "ಪತ್ತುಗೆ" ಎಂಬ ನಾಮಪದಕ್ಕೆ ಮೇಲಿನ ಕೋಡನ್ನು ಈ ರೀತಿ ಬದಲಿಸಿ. 

==ಕನ್ನಡ==
===ನಾಮಪದ===
'''ಪತ್ತುಗೆ'''
# ___________ 
#: '''ಪತ್ತುಗೆ'''ಗೆಡು
====ಅನುವಾದ====
* English: 
# [[reference]], [[:en:reference]]
# [[relation]], [[:en:relation]]
[[ವರ್ಗ:ನಾಮಪದಗಳು]]
[[ವರ್ಗ:ಕನ್ನಡದ ಬೇರಿನ ಪದಗಳು]]


ಕ್ಷಪಿತ# ನಾಶಪಟ್ಟ

ಇಂಗ್ಲೀಷಿನ ಪದಗಳ ಪುಟಗಳಿಗೆ ಮಾದರಿ[ಸಂಪಾದಿಸಿ]

ಇಂಗ್ಲೀಷ್-ಕನ್ನಡ ಶಬ್ದಕೋಶಕ್ಕೆ ಹೊಸ ಪದವನ್ನು ಸೇರಿಸುವಾಗ ಈ ಕೆಳಗಿನ ಮಾದರಿಯನ್ನು ಬಳಸಿಕೊಳ್ಳಿ. ಇಂಗ್ಲೀಷ್ ಪದಗಳ ಮೊದಲ ಅಕ್ಷರವನ್ನು lower-case ನಲ್ಲೇ ಇಡಲು ಮರೆಯದಿರಿ. "ನಾಮಪದ", "ಕ್ರಿಯಾಪದ" ಮತ್ತು "ವಿಶೇಷಣ" - ಇವುಗಳಲ್ಲಿ ನಿಮ್ಮ ಪದಕ್ಕೆ ಸರಿಹೊಂದುವುದನ್ನು ಮಾತ್ರ ಕಾಣಿಸುವಂತೆ ಮಾಡಿ. ಸರಿಹೊಂದುವ ತಲೆಬರಹದ ಅಡಿಯಲ್ಲಿ ಕನ್ನಡದಲ್ಲಿ ಅರ್ಥವನ್ನು ಇಲ್ಲವೇ ಸಮಾನಾರ್ಥಕ ಪದವನ್ನು ಬರೆಯಿರಿ. ಒಂದಕ್ಕಿಂತ ಹೆಚ್ಚಿನ ಅರ್ಥವಿದ್ದರೆ ಇನ್ನೊಂದು # ಚಿಹ್ನೆಯನ್ನು ಸಾಲಿನ ಮೊದಲಿಗೆ ಹಾಕಿಕೊಂಡು ಬರೆಯಿರಿ. ಒಂದೇ ಅರ್ಥ ಕೊಡುವ ಎಲ್ಲಾ ಪದಗಳನ್ನೂ ಒಂದೇ ಬುಲೆಟ್ಟಿನಲ್ಲಿ ಬರೆಯಿರಿ. ಇದು ಬಹಳ ಮುಖ್ಯ. ಇಂಗ್ಲೀಷ್ ಪದಗಳಿಗೆ ನೀವು ಕೊಡುವ ಪ್ರತಿಯೊಂದು ಕನ್ನಡದ ಪದವನ್ನೂ [[ಈ ಆವರಣಗಳೊಳಗೆ]] ಬರೆಯಿರಿ. ಇದರಿಂದ ಆ ಪದಗಳಿಗೆ ಹೊಸದೊಂದು ಪುಟವನ್ನು ವಿಕ್ಷನರಿ ತಾನಾಗಿಯೇ ಕಟ್ಟುತ್ತದೆ, ಇಲ್ಲವೇ ಈಗಾಗಲೇ ಇದ್ದರೆ ಆ ಪುಟಕ್ಕೆ ಕೊಂಡಿಯನ್ನು ಇರಿಸುತ್ತದೆ.

ಕ್ರಿಯಾಪದಗಳಿಗೆ ಈ ಕೋಡನ್ನು ಬಳಸಿ[ಸಂಪಾದಿಸಿ]

==ಇಂಗ್ಲೀಷ್==
===ಕ್ರಿಯಾಪದ===
'''{{BASEPAGENAME}}'''
# [[ಅರ್ಥ]], [[ಅರ್ಥ]]

ಎತ್ತುಗೆ: "ravish" ಎಂಬ ಕ್ರಿಯಾಪದಕ್ಕೆ ಮೇಲಿನ ಕೋಡನ್ನು ಈ ರೀತಿ ಬದಲಿಸಿ.

==ಇಂಗ್ಲೀಷ್==
===ಕ್ರಿಯಾಪದ===
'''ravish'''
# [[ಎಳೆದುಕೊಂಡು ಹೋಗು]]
# [[ಹಿಗ್ಗಿಸು]], [[ಸೊಗಸುಪಡಿಸು]]

ಗುಣಪದಗಳಿಗೆ ಈ ಕೋಡನ್ನು ಬಳಸಿ[ಸಂಪಾದಿಸಿ]

==ಇಂಗ್ಲೀಷ್==
===ಗುಣಪದ===
'''{{BASEPAGENAME}}'''
# [[ಅರ್ಥ]], [[ಅರ್ಥ]]

ಎತ್ತುಗೆ: "raucous" ಎಂಬ ಗುಣಪದಕ್ಕೆ ಮೇಲಿನ ಕೋಡನ್ನು ಈ ರೀತಿ ಬದಲಿಸಿ.

==ಇಂಗ್ಲೀಷ್==
===ಗುಣಪದ===
'''raucous'''
# [[ಒರಟು]], [[ಗಡುಸು]]


ramanu kadige hodanu

ಈ ಜಾಗದಲ್ಲಿ ಬರೆಯಲ್ಪಟ್ಟದ್ದು ವಿಕೀಕರಣ ಆಗುವುದಿಲ್ಲ

ನಾಮಪದಗಳಿಗೆ ಈ ಕೋಡನ್ನು ಬಳಸಿ[ಸಂಪಾದಿಸಿ]

==ಇಂಗ್ಲೀಷ್==
===ನಾಮಪದ===
'''{{BASEPAGENAME}}'''
# [[ಅರ್ಥ]], [[ಅರ್ಥ]]

ಎತ್ತುಗೆ: "reference" ಎಂಬ ನಾಮಪದಕ್ಕೆ ಮೇಲಿನ ಕೋಡನ್ನು ಈ ರೀತಿ ಬದಲಿಸಿ.

==ಇಂಗ್ಲೀಷ್==
===ನಾಮಪದ===
'''reference'''
# [[ಎತ್ತುಗೆ]]
# [[ಪತ್ತುಗೆ]], [[ತತ್ತು]]
# [[ಪಳಗಿಕೆಯ ಹೇಳಿಕೆ]]

ವರ್ಗಗಳನ್ನು ಸೇರಿಸುವುದು[ಸಂಪಾದಿಸಿ]

ನೀವು ಸೇರಿಸಿದ ಕನ್ನಡದ ಪದಗಳಿಗೆ ವರ್ಗಗಳನ್ನು ಕೊಡಿ. ಉದಾಹರಣೆಗೆ ಇಳಿ ಪುಟವನ್ನು ನೋಡಿ. ಉದಾಹರಣೆಗೆ -

ವರ್ಗವನ್ನು ಸೂಚಿಸಲೇಬೇಕು ಎಂದೇನಿಲ್ಲ. ಆದರೆ ಸೂಚಿಸುವುದರಿಂದ ಕನ್ನಡ ವಿಕ್ಷನರಿಯನ್ನು ಬಳಸುವುದು ಮತ್ತಷ್ಟು ಸುಲಭವಾಗುತ್ತದೆ. ಉದಾಹರಣೆಗೆ, "ನಾಮಪದಗಳು" ಎಂಬ ವರ್ಗವನ್ನು ಸೇರಿಸುವುದಕ್ಕೆ ಪುಟದ ಕೊನೆಯಲ್ಲಿ [[ವರ್ಗ:ನಾಮಪದಗಳು]] ಎಂದು ಬರೆಯಿರಿ. ಒಂದು ಪದವು ಒಂದಕ್ಕಿಂತ ಹೆಚ್ಚು ವರ್ಗಗಳಿಗೆ ಸೇರಬಹುದು.

ಪ್ರಯೋಗ ಮಾಡಬೇಕೆ?[ಸಂಪಾದಿಸಿ]

  • ವಿಕ್ಷನರಿಯಲ್ಲಿ ಸಂಪಾದನೆ ಮಾಡುವುದನ್ನು ಕಲಿಯಲು ಪ್ರಯೋಗ ಪುಟವನ್ನು ಉಪಯೋಗಿಸಿಕೊಳ್ಳಿ.. ಪ್ರಯೋಗಗಳಿಗೆ ನೇರವಾಗಿ ವಿಕ್ಷನರಿಗೆ ಪುಟಗಳನ್ನು ಸೇರಿಸಬೇಡಿ.
  • ವಿಕ್ಷನರಿಯಲ್ಲಿ ಪುಟ ವಿನ್ಯಾಸ ಕುರಿತಾದ ಹೆಚ್ಚಿನ ಸಹಾಯ ಮಾಹಿತಿ ಈ ಪುಟದಲ್ಲೂ ಇದೆ: ವಿಕಿ ಸಹಾಯ