ವಾ
ಗೋಚರ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ವಾ
- ಆಪ,ವಾರಿ,ಸಲಿಲ,ಕಮಲ,ಜಲ,ಪಯ,ಕೀಲಾಲ,ಅಮೃತ,ಜೀವನ,ಭುವನ,ವನ,ಕಬಂಧ,ಉದಕ,ಪಾಥ,ಪುಷ್ಕರ,ಸರ್ವತೋಮುಖ,ಅಂಭ,ಅರ್ಣ,ತೋಯ,ಪಾನೀಯ,ನೀರ,ಕ್ಷೀರ,ಅಂಬು,ಶಂಬರ,ಮೇಘಪುಷ್ಪ,ಘನರಸ, (ಈ ೨೭ ನೀರಿನ ಹೆಸರುಗಳು)
- ವಾ - ಕೂಡದು; (ನಿಷೇಧ)
=ಪ್ರಯೋಗ
[ಸಂಪಾದಿಸಿ]ಗಸಣಿಯಿಲ್ಲಲೆ ನಿನಗೆ ಸಪ್ತ
ವ್ಯಸನದಲಿ ನಿನ್ನನುಜ ತನುಜರ
ಮುಸುಡಧರ್ಮದಲಿರದಲೇ ವೈದಿಕ ವಿಧಾನದಲಿ |
ಸಸಿನವೇ ನಿನ್ನರಿತ ಖಳರಿಗೆ
ಹುಸಿಕರಿಗೆ ಡಂಬಕರಿಗಜ್ಞರಿ
ಗುಸುರುವಾ ನಿನ್ನಂತರಂಗವನೆಂದನಾ ಮುನಿಪ || ೩೨ ||
- ಪದವಿಭಾಗ-ಅರ್ಥ:ಗಸಣಿಯಿಲ್ಲಲೆ (ತೊಂದರೆ) ನಿನಗೆ ಸಪ್ತವ್ಯಸನದಲಿ(ಏಳು ಬಗೆಯ ಕೆಟ್ಟಹವ್ಯಾಸ- ಸ್ತ್ರೀ, ಅಕ್ಷ, ಮೃಗಯ, ಪಾನ, ವಾಕ್ಪಾರುಷ್ಯ, ದಂಡಪಾರುಷ್ಯ ಮತ್ತು ಅರ್ಥದೂಷಣೆ ಎಂಬ ಏಳು ಬಗೆಯ ಗೀಳು, ದುರಭ್ಯಾಸ) ನಿನ್ನ+ ಅನುಜ ತನುಜರ (ತಮ್ಮಂದಿರು ಮತ್ತು ಮಕ್ಕಳ) ಮುಸುಡ ಧರ್ಮದಲಿರದಲೇ (ಮುಖದಾಕ್ಷಿಣ್ಯದ ಧರ್ಮದಲ್ಲಿ ಇರದೆ ಇರುವೆಯಲ್ಲವೇ) ವೈದಿಕ ವಿಧಾನದಲಿ ಸಸಿನವೇ(ನೇರ; ಸರಿಹೊಂದುವ; ಯುಕ್ತವಾಗಿದೆಯೇ?) ನಿನ್ನ+ ಅರಿತ(ಪರಿಚಿತ) ಖಳರಿಗೆ ಹುಸಿಕರಿಗೆ(ಸುಳ್ಳುಬುರಕರು) ಡಂಬಕರಿಗೆ (ತಮಗಿಲ್ಲದ ಗುಣವನ್ನು ಇದೆ ಎಂದು ತೋರಿಸಿಕೊಂಡು ಜಂಬಪಡುವವರು)+ ಅಜ್ಞರಿಗೆ(ದಡ್ಡರಿಗೆ) ಉಸುರುವಾ(ಉಸುರು- ಹೇಳು,ವಾ- ಕೂಡದು) ನಿನ್ನಂತರಂಗವನು+ ಎಂದನು+ ಆ ಮುನಿಪ. [೧]
ಅನುವಾದ
[ಸಂಪಾದಿಸಿ]- English: [[ ]], en:
ಉಲ್ಲೇಖ
[ಸಂಪಾದಿಸಿ]- ↑ [ಕುಮಾರವ್ಯಾಸ ಭಾರತ/ಸಟೀಕಾ (೧.ಸಭಾಪರ್ವ::ಸಂಧಿ-೧)]