ಚರ್ಚೆಪುಟ:ಮುಖ್ಯ ಪುಟ

Page contents not supported in other languages.
ವಿಷಯ ಸೇರಿಸಿ
ವಿಕ್ಷನರಿದಿಂದ

ಈ ತಾಣದ ಮೇಲ್ವಿಚಾರಕರು (admins) ಯಾರು? ಅವರೊಡನೆ ಚರ್ಚಿಸುವ ಆಸೆ.[ಸಂಪಾದಿಸಿ]

ಕನ್ನಡ ವಿಕ್ಷನರಿಯನ್ನು ಸರಿಯಾಗಿ ಬೆಳೆಸಿಕೊಂಡು ಹೋಗಲು ನನಗೆ ಸ್ವಲ್ಪ ಮಾರ್ಗದರ್ಶನ ಬೇಕು. ಈ ವಿಕ್ಷನರಿಯನ್ನು ಕನ್ನಡದಲ್ಲಿ ಹೊಸ ಪದಗಳನ್ನು ಹುಟ್ಟಿಸುವುದಕ್ಕೆ ಒಂದು ತಾಣವನ್ನಾಗಿ ಮಾರ್ಪಡಿಸುವ ಹಿರಿದಾದ ಯೋಜನೆಯ ರೂಪುರೇಷೆಗಳನ್ನು ಈಗ ತಯಾರಿಸುತ್ತಿದ್ದೇನೆ. ಈ ತಾಣದ ಮೇಲ್ವಿಚಾರಕರು (admins) ಯಾರು? ಅವರೊಡನೆ ಚರ್ಚಿಸುವ ಆಸೆ. --ಕಿರಣ ೦೬:೧೧, ೬ ಜೂನ್ ೨೦೦೯ (UTC)

Invite to WikiConference India 2011[ಸಂಪಾದಿಸಿ]


Hi ಮುಖ್ಯ ಪುಟ,

The First WikiConference India is being organized in Mumbai and will take place on 18-20 November 2011.
You can see our Official website, the Facebook event and our Scholarship form.


But the activities start now with the 100 day long WikiOutreach.

As you are part of WikiMedia India community we invite you to be there for conference and share your experience. Thank you for your contributions.

We look forward to see you at Mumbai on 18-20 November 2011


Please forward to relevant folks in the community. If you want the bot to do the job please sign up at [೧] --Naveenpf ೦೫:೧೯, ೬ ಆಗಸ್ಟ್ ೨೦೧೧ (UTC)

ದಿನದ ಪದ[ಸಂಪಾದಿಸಿ]

ಈಗಿರುವ "ದಿನದ ಪದ" ನಿಜವಾಗಿ ದಿನಕ್ಕೊಂದು ಪದವಾಗಿರದೇ ಸಂಚಿಕೆಯಾಗಿದೆ. ಪ್ರತಿದಿನವೂ ಒಂದೊಂದು ಪದವನ್ನು ದಿನದ ಪದವಾಗಿ ಆಯ್ಕೆಮಾಡದಿದ್ದಲ್ಲಿ ಮುಖಪುಟ ಹಾಳಾಗುವ ಅಪಾಯವಿದ್ದದ್ದರಿಂದ ಈ ರೀತಿಯಾಗಿ ವಿನ್ಯಾಸಗೊಳಿಸಿದ್ದೆ. ಈಗ ವಿಕ್ಷನರಿಯಲ್ಲಿ ನಿಯವಿತವಾಗಿ ಹೆಚ್ಚು ಹೆಚ್ಚು ಕೆಲಸಗಳು ನೆಡೆಯುತ್ತಿರುವುದರಿಂದ ದಿನದಪದವನ್ನು ನಿಜವಾದ "ದಿನಕ್ಕೊಂದು ಪದ"ವಾಗಿ ಮಾರ್ಪಡಿಸಲು ಸಕಾಲ. ಈ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ. -- -- ತೇಜಸ್ / ಚರ್ಚೆ/ ೧೫:೫೨, ೧೧ ಮೇ ೨೦೧೨ (UTC)

ತೇಜಸ್ ಅವರೇ, ಒಳ್ಳೆಯ ಅನಿಸಿಕೆ :-) ನನಗೂ ಒಪ್ಪಿಗೆ.
೧) ಇದನ್ನು ತನ್ನತಾನೇ ನಡೆಯುವ ಹಮ್ಮುಗೆಯನ್ನಾಗಿ ಮಾಡಬಹುದೇ ? (Automated script?) ಇದರ ಬಗ್ಗೆ ತುಸು ತಿಳಿಸಿಕೊಡಿ. - ಪ್ರಶಾಂತ ಸೊರಟೂರ
ಪ್ರಶಾಂತ್ ಅವರೇ, ದಿನದ ಪದವು ಈ ರೀತಿ ಕಾರ್ಯನಿರ್ವಹಿಸುತ್ತದೆ.
೧. ವಿಕ್ಷನರಿಯ ಬಳಕೆದಾರರು (ಅಥವಾ ಸಂದರ್ಶಕರು) ಅವರಿಗೆ ಹಿಡಿಸಿದ ಪದವನ್ನು ದಿನದ ಪದವಾಗಿ ಆಯ್ಕೆಮಾಡಲೆಂದು "ಕಾರಣ"ದೊಂದಿಗೆ ನಾಮಕರಣ ಸಲ್ಲಿಸುತ್ತಾರೆ (Nomination).
೨. ಈ ಪಟ್ಟಿಯಿಂದ ನಿರ್ವಾಹಕನು ದಿನಕ್ಕೊಂದು ಪದವನ್ನು "ದಿನದ ಪದ"ವಾಗಿ ಆಯ್ಕೆಮಾಡುತ್ತಾನೆ (Selection).
೩.ಬಳಕೆದಾರರಿಗೆ ಹಳೆಯ ಪದಗಳನ್ನೂ ನೋಡುವ ಅವಕಾಶವಿರುತ್ತದೆ (archive).
ನಾಮಕರಣ ಮತ್ತು ಆಯ್ಕೆ ಪ್ರಕ್ರಿಯೆಗಳಿಗೆ ಮಾನವನ ಕಾರ್ಯ ಬೇಕಾಗಿರುವುದರಿಂದ ಇದನ್ನು ತಾನೇ ಹೊಮ್ಮುವಂತೆ ಮಾಡಲು ಸಾಧ್ಯವಿಲ್ಲ. ತೆಲುಗು ವಿಕ್ಷನರಿಗೆಂದು ಈ ರೀತಿಯ ಮಾದರಿಯನ್ನು (Template) ಸಿದ್ಧಪಡಿಸಿದ್ದೇನೆ. ದಯವಿಟ್ಟು ಇದನ್ನೊಂಮ್ಮೆ ನೋಡಿ ಕನ್ನಡಕ್ಕೆ ಹೇಗೆ ಅಳವಡಿಸಬಹುದೆಂಬುದರ ಬಗ್ಗೆ ಸಲಹೆಗಳನ್ನು ನೀಡಿ. -- ತೇಜಸ್ / ಚರ್ಚೆ/ ೦೫:೪೧, ೧೨ ಮೇ ೨೦೧೨ (UTC)
ತೇಜಸ್ ಅವರೇ, ತಿಳಿಸಿಕೊಟ್ಟಿದ್ದಕ್ಕೆ ನನ್ನಿ/ಧನ್ಯವಾದಗಳು. ನನಗೆ ತೆಲುಗು ಗೊತ್ತಿಲ್ಲ ಆದುದರಿಂದ ನೀವು ತೋರಿದ ಪುಟ ಮಾದರಿಯ ಬಗ್ಗೆ ಹೆಚ್ಚೇನು ಹೇಳಲಾರೆ. ನಿಮಗೆ ಸರಿಯೆನಿಸದರೆ ಅದನ್ನೆ ಮೊದಲು ಬಳಸಲು ತೊಡಗಬಹುದು. ಆಮೇಲೆ ಬೇಕಾದರೆ ಮಾರ್ಪಡಿಸಿಕೊಳ್ಳೋಣ.- ಪ್ರಶಾಂತ ಸೊರಟೂರ
ಪ್ರಶಾಂತರೇ, ಮೊದಲು ಕೆಲವು ವಿಷಯಗಳ ಬಗ್ಗೆ ನಾವು ಎಚ್ಚರವಹಿಸಬೇಕು. ಈ ಮಾದರಿಯನ್ನು ಅಳವಡಿಸಿಕೊಂಡರೆ ಅದನ್ನು ಸೂಕ್ತ ನಿರ್ವಹಣೆ ಮಾಡಬೇಕಾಗುತ್ತದೆ. ಈ ಬಗ್ಗೆ ಆವಶ್ಯವಿರುವ ಸಹಾಯ ಪುಟಗಳನ್ನು ಬರೆಯುತ್ತೇನೆ. ನಿರ್ವಹಣೆಯು ಕೆಳಗಿನ ಕೆಲಸಗಳನ್ನೊಳಗೊಂಡಿತುತ್ತದೆ.
೧. ದಿನಕ್ಕೊಂದು ಪದವನ್ನು ಆಯ್ಕೆಮಾಡುವುದು. (ಹಲವು ದಿನಗಳ ಪದವನ್ನು ಮುಂಗಡವಾಗಿ ಆಯ್ಕೆ ಮಾಡುವುದು ಸಾಧ್ಯ)
೨. ತಿಂಗಳಿಗೊಮ್ಮೆ "ತಿಂಗಳ ಪುಟ" ರಚನೆ. (ಸಿದ್ಧ ಮಾದರಿಯನ್ನು ಉಪಯೋಗಿಸಿ ಮಾಡಬಹುದಾಸ ಸುಲಭವಾದ ಕೆಲಸ).
ಈ ನಿರ್ವಹಣಾಕೆಲಸದಲ್ಲಿ ವ್ಯತ್ಯಯವಾದರೆ ಮುಖಪುಟ ಹಾಳಾಗುತ್ತದೆ. ಆದುದರಿಂದ ಈ ಕೆಲಸಗಳು ಅಡ್ಡಿಯಿಲ್ಲದೆ ನಿಯತವಾಗಿ ನೆಡೆಯಲು ಸಾಧ್ಯವೆಂದು ವಿಕ್ಷನರಿ ಸಂಪಾದಕರ ಸಮುದಾಯದಿಂದ ಆಶ್ವಾಸನೆ ದೊರೆತ ನಂತರ ಮುಂದುವರೆಯೋಣವೆಂದು ನನ್ನ ಅಭಿಪ್ರಾಯ. -- ತೇಜಸ್ / ಚರ್ಚೆ/ ೦೮:೩೨, ೧೨ ಮೇ ೨೦೧೨ (UTC)
ಸರಿ. - ಪ್ರಶಾಂತ ಸೊರಟೂರ
ಪ್ರಶಾಂತ ಅವರೇ, ಈ ವಿಷಯದ ಬಗ್ಗೆ ಪ್ರಕಟನೆ ನಿಡಿ ೪ ದಿನಗಳು ಕಳೆದರೂ ನಿಮ್ಮನ್ನುಳಿದು ಬೇರಾರೂ ಈ ವಿಷಯವಾಗಿ ಆಸಕ್ತಿ ತೋರಿಲ್ಲ. ಕನಿಷ್ಟ ೩ ಜನರಾದರೂ ತಮ್ಮ ಒಪ್ಪಿಗೆ ನೀಡಿ ಇದರ ನಿರ್ವಹಣೆಯಲ್ಲಿ ಪಾಲ್ಗೊಳ್ಳುವ ಬಗ್ಗೆ ಭರವಸೆಯಿತ್ತಿದ್ದರೆ ನಾವು ಯಾವುದೇ ಸಂದೇಹವಿಲ್ಲದ ಮುಂದುವರೆಯಬಹುದಿತ್ತು. ಸಧ್ಯಕ್ಕೆ "ದಿನದ ಪದ"ವನ್ನು ಈಗಿರುವಂತೆಯೇ ಉಳಿಸಿಕೊಳ್ಳೋಣ. -- ತೇಜಸ್ / ಚರ್ಚೆ/ ೧೮:೪೦, ೧೪ ಮೇ ೨೦೧೨ (UTC)
ಈ ವಿಷಯವಾಗಿ ಮುಂದಿನ ಚರ್ಚೆಯನ್ನು ಅರಳಿ ಕಟ್ಟೆಯಲ್ಲಿ ಮುಂದುವರೆಸೋಣ. -- ತೇಜಸ್ / ಚರ್ಚೆ/ ೦೩:೪೬, ೧೬ ಮೇ ೨೦೧೨ (UTC)
ಇದರ ಬಗ್ಗೆ ಏನು ತೀರ್ಮಾನ ಆಯ್ತು ಕೊನೆಗೆ? --Sandeepkambi (talk) ೧೮:೦೩, ೨೫ ಆಗಸ್ಟ್ ೨೦೧೨ (UTC)