ವಿಕ್ಷನರಿ:Username policy

ವಿಕ್ಷನರಿದಿಂದ

ಹಾಯ್ ಗೆಳೆಯರೇ,

ನಾನು ಸಿದ್ದಾರೂಡ ಗ್ರಾಮ ಪಂಚಾಯತ ಮದಭಾವಿ

   ಕರ್ನಾಟಕ ರಾಜ್ಯದ ಬಾಗಲಕೋಟೆ ಜಿಲ್ಲೆ ಉದಯವಾಗಿದ್ದು ಅದಕ್ಕೂ ಮುಂಚೆ ಬಿಜಾಪೂರದ ಜಿಲ್ಲೆಗೆ ಸೇರ್ಪಡೆಯಾಗಿತ್ತು. ನಂತರ ಬಾಗಲಕೋಟ ಹೊಸ ಜಿಲ್ಲೆಯನ್ನಾಗಿ ರಚಿಸಲಾಯಿತು. 

ಬಾಗಲಕೋಟ ಜಿಲ್ಲೆಯ ಆರು ತಾಲೂಕುಗಳನ್ನು ಒಳಗೊಂಡಿದೆ ಅದರಲ್ಲಿ ಮುಧೋಳ ತಾಲೂಕಿನ ಒಂದಾಗಿರುತ್ತದೆ. ರಾಜ್ಯಗಳ ಪುನರವಿಂಗಡನೆ ಆಗುವ ಮೊದಲು ಈ ಪ್ರದೇಶವು ಬಾಂಚಿ ರಾಜ್ಯದ ಭಾಗವಾಗಿತ್ತು. ಬಾಗಲಕೋಟ ಜಿಲ್ಲೆಯ ಪ್ರೇಕ್ಷಣಿಯ ಸ್ಥಳಗಿಂದ ಹಾಗೂ ಫಲವತ್ತದ ನೀರಾವರಿ ಜಮೀನುಗಳನ್ನು ಹೊಂದಿದೆ ಹಾಗೂ ಕಬ್ಬಿನ ಕಾರ್ಖಾನೆಗಳಗೆ ಹೆಸರುವಾಸಿಯಾಗಿದೆ. ಮುಧೋಳ ತಾಲೂಕು 25 ಗ್ರಾಮ ಪಂಚಾಯತಿಗಳನ್ನು ಒಳಗೊಂಡಿದ್ದು ಅದರಲ್ಲಿ ಮದಭಾವಿ ಗ್ರಾಮ ಪಂಚಾಯತಿಯು ಒಂದು. ಇದು ಮುಧೋಳದಿಂದ ಪಶ್ಚಿಮ ದಿಕ್ಕಿನಲ್ಲಿ ಬರುತ್ತದೆ. ಜಿಲ್ಲಾ ಕೇಂದ್ರದಿಂದ 90 ಕಿ.ಮೀ. ದೂರದಲ್ಲಿ ಹಾಗೂ ತಾಲೂಕ ಕೇಂದ್ರದಿಂದ 28 ಕಿ.ಮೀ ದೂರದಲ್ಲಿದೆ. ಗ್ರಾಮ ಪಂಚಾಯತಿಗಳು ಬರುವದಕಿಂತ ಮೊದಲು ಮದಭಾವಿ ಪಂಚಾಯತಿ ವ್ಯಾಪ್ತಿಯ ಹಳ್ಳಿಗಳ ಆಡಳಿತವನ್ನು ಮೊದಲು ಗೌಡರು ನಡೆಸಿಕೊಂಡು ಬಂದರು. ನಂತರ ಗ್ರೂಪ್ ಮಂಚಾಯತಿಯಾಗಿ ಮದಭಾವಿ ಹಾಗೂ ಮಂಡಲ ಪಂಚಾಯತಿಯಾಗಿ ಕೆಸರಕೊಪ್ಪ ವ್ಯವಸ್ಥೆಗಳ ಬದಲಾದ ಹಾಗೆ ಅವುಗಳನ್ನು ಬದಲಾಯಿಸಲಾಯಿತು. ನಂತರ 93ನೇ ತಿದ್ದುಪಡಿ ಪ್ರಕಾರ ಮದಭಾವಿ ಗ್ರಾಮ ಪಂಚಾಯತಿಯಾಗಿ ಪರಿವರ್ತಿಸಲಾಯಿತು. ಮದಭಾವಿ ಗ್ರಾಮ ಪಂಚಾಯತಿ 3 ಜನವಸತಿ ಪ್ರದೇಶಗಳನ್ನು ಒಳಗೊಂಡಿದ್ದು 7834 ಜನಸಂಖ್ಯೆ ಹಾಗೂ 1498 ಕುಟುಂಬಗಳನ್ನು ಹೊಂದಿದೆ.