ಹಾರಿಗೆ ಬಸದಿ

ವಿಕ್ಷನರಿ ಇಂದ
Jump to navigation Jump to search

ನೇಮಿನಾಥ ತೀರ್ಥಂಕರರ 

ಸೀಮೆ ಬಸದಿ ಹಾರಿಗೆ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕು ಮಲೆನಾಡಿನ ತವರೂರು ಇಲ್ಲಿನ ಶರಾವತಿ ಹಿನ್ನೀರು ಪ್ರದೇಶದ ಕರೂರು-ಬಾರಂಗಿ ಹೋಬಳಿಯ ಹಾರಿಗೆ ಬಸದಿಯ ಒಂದು ಸಣ್ಣ ಪರಿಚಯ *ಜೈ ಜಿನೇಂದ್ರ* ಹಾರಿಗೆ ಬಸದಿಯ ಇತಿಹಾಸ ಗಮನಿಸಬೇಕಾದರೆ ಇಲ್ಲಿ ಯಾವುದೇ ಇತಿಹಾಸದ ಉಲ್ಲೇಖಗಳು ದೊರೆತಿಲ್ಲ. ಬಸದಿಯು ಸೀಮೆ ಬಸದಿಯಾಗಿದ್ದು ಈ ಬಸದಿಯ ವ್ಯಾಪ್ತಿಗೆ ಸುಮಾರು 800 ಜೈನ ಕುಟುಂಬಗಳು ಬರುತ್ತವೆ .ಆ ಕುಟುಂಬಗಳು ಈಗ ಸಾವಿರದ ಗಡಿ ದಾಟಿವೆ. ಬಸದಿ ವ್ಯಾಪ್ತಿಯಲ್ಲಿ ಬರುವ ಕುಟುಂಬಗಳ ಹಿನ್ನೆಲೆಯನ್ನು ಗಮನಿಸಿದರೆ ಇವರಲ್ಲಿ ಹೆಚ್ಚಿನವರು ಗೇರುಸೊಪ್ಪ, ಕಾನೂರು ಭಾಗದಿಂದ ವಲಸೆ ಬಂದವರಾದರೆ ಕೆಲವರು ಶರಾವತಿ ಡ್ಯಾಮ್ ನಿರ್ಮಾಣದಿಂದ ನಿರಾಶ್ರಿತರಾದವರು. ಈ ವಿಷಯಗಳನ್ನೆಲ್ಲಾ ಗಮನಿಸಿದಾಗ ಮತ್ತು ಇಲ್ಲಿ ಪಂಚಕಲ್ಯಾಣವಾದ ಮೂರ್ತಿಗಳು ಅಂದರೆ   ನೂರಾರು ವರ್ಷಗಳ ಕಾಲ ದಿನವೂ ಅಭಿಷೇಕ ಮಾಡುವುದರಿಂದ ಸವಕಳಿ ಉಂಟಾಗುತ್ತವೆ. ಹೀಗೆ  ಕಳೆದ 40 ವರ್ಷಗಳ ಹಿಂದೆ ಈ ಬಸದಿಯನ್ನು ಜೀರ್ಣೋದ್ಧಾರ ಮಾಡಿ ಹೊಸ ಮೂರ್ತಿಯನ್ನು ಪಂಚಕಲ್ಯಾಣ ಮಾಡಿ ಪ್ರತಿಷ್ಠಾಪಿಸಲಾಗಿದೆ. ಇದರಿಂದ ತಿಳಿಯುವುದೇನೆಂದರೆ ಈ ಬಸದಿಯು ಸುಮಾರು 600ಕ್ಕೂ ಹೆಚ್ಚು ವರ್ಷ ಹಿಂದಿನದು. ಅಂದಹಾಗೆ ಈ ಬಸದಿಯು ಮೂಡಬಿದರೆ ಮಠದ ವ್ಯಾಪ್ತಿಗೆ ಸೇರಿದ ಬಸದಿಯಾಗಿದ್ದು ಇಲ್ಲಿ ಮೂಡುಬಿದರೆ ಜೈನಮಠದಲ್ಲಿ  ಕಾಣುವ ಹಾಗೆ ಕಾವಿ ಚಿತ್ರವನ್ನು ಈ ಬಸದಿಯ ಸುತ್ತಲಿನ ಗೋಡೆಗಳ ಮೇಲೆ ಕಾಣಬಹುದು. ಕಾವಿ ಚಿತ್ರವನ್ನು ರಚಿಸುವಾಗ ಪ್ರಕೃತಿದತ್ತವಾಗಿ ಸಿಗುವ ಕಾವಿ ಬಣ್ಣವನ್ನು ಗೋಡೆಗೆ ಲೇಪಿಸಿ ನಂತರ ಕೊರೆದು ತೆಗೆದು ತೆಳುವಾದ ಉಬ್ಬು ಬರುವಂತೆ ಚಿತ್ರಿಸಲಾಗುತ್ತದೆ ಇಲ್ಲಿ ಗೋಡೆಯ ಮೇಲ್ಭಾಗದಲ್ಲಿ ಕಾಣುವ ತೋರಣದ ಸಾಲು ಕೆಲವು ವೃತ್ತಾಕಾರದ ಚಿತ್ರಗಳು ಈ ಶೈಲಿಯಲ್ಲಿದ್ದು, ಕೆಲವೊಂದನ್ನು ಮರು ಚಿತ್ರಿಸಿರುವುದು ಸ್ಪಷ್ಟವಾಗಿ ಕಾಣುತ್ತದೆ.  40 ವರ್ಷಗಳ ಹಿಂದೆ ಪಂಚಕಲ್ಯಾಣ ನಡೆದಾಗ ಇದನ್ನು ಮರು ಚಿತ್ರಿಸಲಾಗಿದೆ ಎಂದು ಇಲ್ಲಿಯ ಬಸದಿಯ ವ್ಯವಸ್ಥಾಪಕರು ಹೇಳುತ್ತಾರೆ. ಈ ಚಿತ್ರಗಳು ವಿಶೇಷವಾಗಿದ್ದು ತುಂಬಾ ಅಪರೂಪದವು.  ಶ್ರೀ ನೇಮಿನಾಥ ಸ್ವಾಮಿಯ  ಬಸದಿಯು ಅಚ್ಚುಕಟ್ಟಾಗಿ ಸುಂದರವಾಗಿದ್ದು ಮೂಡುಬಿದಿರೆಯ ಸಾವಿರ ಕಂಬದ ಬಸದಿಗೆ ಇದ್ದ ಹಾಗೆಯೇ ಲ್ಯಾಟರೈಟ್ ಕಲ್ಲಿನಿಂದ ಕಟ್ಟಿದ ಸುತ್ತಲಿನ ಗೋಡೆ  ಇದ್ದು ಇದು ಮೂಡಬಿದ್ರೆ ಸ್ಥಾಪನೆಯ ಸಮಕಾಲೀನ ಬಸದಿ ಇರಬಹುದು ಎನ್ನುವುದು ತಜ್ಞರ ಅಭಿಪ್ರಾಯ ಇಲ್ಲಿ  ಚಂದ್ರ ಶಾಲೆಯನ್ನು ಇತ್ತೀಚಿಗೆ ನವೀಕರಿಸಲಾಗಿದೆ. ಹಾಗೆಯೇ ಮಾನಸ್ತಂಭ ವನ್ನು ನಿಲ್ಲಿಸಿದ್ದು ಸದ್ಯದಲ್ಲಿಯೇ ಪಂಚಕಲ್ಯಾಣ ನಡೆಸುವ ತಯಾರಿಯಲ್ಲಿದ್ದಾರೆ ವ್ಯವಸ್ಥಾಪಕರು.ಸಾಧ್ಯವಾದರೆ ಪ್ರಕೃತಿ ಸೌಂದರ್ಯದ ಮಡಿಲಿನಲ್ಲಿರುವ ಸುಂದರ ಜಿನ ಮಂದಿರಕ್ಕೆ  ಒಮ್ಮೆ ಭೇಟಿ ನೀಡಎಂ