ಸಮವಸರಣ

ವಿಕ್ಷನರಿದಿಂದ

Samvasra 1 ಸಮವಸರಣ ತೀರ್ಥಂಕರರಿಗೆ ಕೇವಲ ಜ್ಞಾನ ಪ್ರಾಪ್ತಿಯಾದಾಗ ದೇವೇಂದ್ರನ ಅಣತಿಯಂತೆ ಕುಬೇರನು ದೇವಶಿಲ್ಪಿ ಗಳ ಮೂಲಕ ನಿರ್ಮಿಸುವ ಮಂಟಪವೇ ಸಮವಸರಣ. ಭೂಮಿಯಿಂದ ಐದುಸಾವಿರ ಬಿಲ್ ಅಳತೆಯ ಎತ್ತರದಲ್ಲಿರುವ ಸಮವಸರಣ ವನ್ನು ಆಕಾಶದಲ್ಲಿ ನಿರ್ಮಿಸಿರಬಹುದು ಎನ್ನುವುದು ವಿದ್ವಾಂಸರ ವಾದ. ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಿರ್ಮಿಸಲಾದ ಸಮವಸರಣದ ಚಿತ್ರವಿದು ಜೈನ ಸಾಹಿತ್ಯದಲ್ಲಿ ಜೈನಾಗಮ ಗಳಿಂದ ಹಿಡಿದು ಇತ್ತೀಚಿನ ಕೃತಿಗಳವರೆಗೂ. ಕ್ರಿಸ್ತಪೂರ್ವದಲ್ಲಿಿ ಲಭ್ಯವಿರುವ ದಾಖಲೆಗಳಿಂದ ಪ್ರಾರಂಭವಾಗಿ ಜೈನ ಧರ್ಮದ ಸಾಹಿತಿಗಳಾದ ಪಂಪ, ರನ್ನ, ಜನ್ನ, ಹರಿಹರ,ರಾಘವಾಂಕ,ರತ್ನಾಕರ ವರ್ಣಿ, ಅತ್ತಿಮಬ್ಬೆ ,ಇತ್ತೀಚಿನ ಪ್ರಖ್ಯಾತ ಸಾಹಿತಿಗಳಾದ ಹಂ.ಪ.ನಾಗರಾಜಯ್ಯ, ವರೆಗೂ ಸಮವಸರಣದ ಬಗ್ಗೆ ಬರೆಯದ ಸಾಹಿತಿಗಳು ಸಿಗಲಿಕ್ಕಿಲ್ಲ ಅಷ್ಟು ವಿಸ್ತೃತವಾಗಿದೆ ಸಮವಸರಣದ ವ್ಯಾಪ್ತಿ. Samosarana Mysore 8 ಭೂಮಿಗಳು ಮೂರು ಪೀಠಗಳು , ಒಂದು ಗಂಧ ಕುಟಿ. ಗಂಧ ಕುಟಿಯ ಮೇಲೆ ಸಿಂಹ ಪೀಠ . ಸಿಂಹ ಪೀಠದ ಮೇಲೆ ಸಹಸ್ರ ದಳದ ಕಮಲ. ಈ ಕಮಲದ ಮೇಲೆ ತೀರ್ಥಂಕರರು ಮೂರು ಅಂಗುಲ ಬಿಟ್ಟು ಅಂದರೆ ಕಮಲಕ್ಕೆ ತಾಗಿಯೂ ತಾಗದಂತೆ ಕುಳಿತಿರುತ್ತಾರೆ.


8 ಭೂಮಿಗಳು 3 ಪೀಠ 4 ಕೋಟೆಗಳನ್ನು ಒಳಗೊಂಡ ಸಮವಸರಣ ರಚನೆಯ ವರ್ಣನೆ ಕಲ್ಪನೆಗನಿಲುಕದ್ದುುಕ

ಸಮವಸರಣ ಭೂಮಿಗಳ ವಿವರ[ಸಂಪಾದಿಸಿ]

  1. ಪ್ರಸಾದ ಚೈತ್ಯ ಭೂಮಿ
  2. ಜಲ ಕಾತಿಕ ಭೂಮಿ
  3. ಲತಾ ಭೂಮಿ
  4. ಉಪವನ ಭೂಮಿ
  5. ಧ್ವಜ ಭೂಮಿ
  6. ಕಲ್ಪವೃಕ್ಷ ಭೂಮಿ
  7. ಭವನ ಭೂಮಿ
  8. ತ್ರಿಭುವನ ಗಣ ಭೂಮಿ

ಇಲ್ಲಿ ಬರುವ ಕೋಟೆಗಳ ವಿವರ[ಸಂಪಾದಿಸಿ]

ಸಮವಸರಣದಂತಹ ಬೃಹತ್ ರಚನೆಯನ್ನು ರಕ್ಷಣೆಯ ದೃಷ್ಟಿಯಿಂದ ಈ ಕೋಟೆಯ ನಿರ್ಮಾಣವನ್ನು ಕುಬೇರನು ಮಾಡಿಸಿರಬಹುದು.

  • ದೂಳಿಕೋಟೆ. ಇದು ಮೊದಲ ಕೋಟೆಯಾದರೂ ಜೈನ ಗ್ರಂಥಗಳು ಮೊದಲನೆ ಕೋಟೆಯೆಂದು ಇದನ್ನು ಉಲ್ಲೇಖಿಸಿಲ್ಲ . ಸಮವಸರಣದ ಹೊರ ಭಾಗದಲ್ಲಿ ಕಂಡುಬರುವ ಕೋಟೆಯಾಗಿದೆ ಮುತ್ತು ಮಾಣಿಕ್ಯಗಳ ದೂಳಿನಿಂದ ನಿರ್ಮಾಣವಾದ ಕೋಟೆ ಅತ್ಯಂತ ಸುಂದರ ನಯನ ಮನೋಹರವಾದ ಹೊಳಪಿನಿಂದ ಕೂಡಿದ ಕೋಟೆ ಇದಾಗಿದೆ
  • ಮೊದಲನೆಯ ಕೋಟೆ . ಲತಾ ಭೂಮಿಯನ್ನು ದಾಟಿದ ತಕ್ಷಣ ಉಪವನ ಭೂಮಿಗೆ ಅಂಟಿಕೊಂಡಿರುವ ಈ ಕೋಟೆಯು ಬೆಳ್ಳಿಯಿಂದ ನಿರ್ಮಿತವಾದ ಅತ್ಯಂತ ಸುಂದರವಾದ ಕೋಟೆ ಇದಾಗಿದೆ
  • ಎರಡನೆಯ ಕೋಟೆ. ಇದು ಧ್ವಜ ಭೂಮಿಗೆ ಅಂಟಿಕೊಂಡಿರುವ ಕೋಟೆಯಾಗಿದ್ದು ಬಂಗಾರದಿಂದ ನಿರ್ಮಿಸಲ್ಪಟ್ಟ ಕೋಟೆ
  • ಮೂರನೆಯ ಕೋಟೆ. ಇದು ಸ್ಪಟಿಕ ಕೋಟೆ ವಜ್ರದ ತಳಪಾಯದಿಂದ ಕೂಡಿದ ಈ ಕೋಟೆಯು ಭವನ ಭೂಮಿಯ ಅಂತ್ಯದಲ್ಲಿ ಧ್ವಜ ಭೂಮಿಗೆ ಮೇಲ್ಭಾಗದಲ್ಲಿ ಇರುವ ಕೋಟೆಯಾಗಿದೆ.

ತ್ರಿಪಿಟಕಗಳು[ಸಂಪಾದಿಸಿ]

  1. ಮೊದಲನೆಯ ಪೀಠ. ವಜ್ರವೈಡೂರ್ಯ ಗಳಿಂದ ನಿರ್ಮಿತ ವಾಗಿರುತ್ತದೆ
  2. ಎರಡನೆಯ ಪೀಠ.ಬಂಗಾರದಿಂದ ನಿರ್ಮಿತವಾದ ಈ ಪೀಠದಮೇಲೆ ಅಷ್ಟಮಂಗಳಗಳನ್ನು ಇಡಲಾಗಿರುತ್ತದೆ
  3. ಮೂರನೆಯ ಪೀಠ.ನವರತ್ನ ಗಳಿಂದ ನಿರ್ಮಿಸಲ್ಪಟ್ಟ ಈ ಪೀಠದಮೇಲೆ ರತ್ನಗಳ ಬಂಗಾರದ ವಜ್ರ ವೈಡೂರ್ಯದ ರಾಶಿಯನ್ನು ಸುರಿಯಲಾಗಿರುತ್ತದೆ

ಈ ಪೀಟಗಳ ನಂತರ ಬರುವುದೇ ಗಂಧ ಕುಟಿ. ಗಂಧ ಕೋಟಿಯ ಮೇಲೆ ಸಿಂಹ ಪೀಠ. ನಾಲ್ಕೂ ದಿಕ್ಕಿಗೆ ಮುಖ ಮಾಡಿ ಕುಳಿತಿರುವ ಸಿಂಹಗಳು ಮಧ್ಯದಲ್ಲಿ ಸಾವಿರದ ಕಮಲದ ಮೇಲೆ ತೀರ್ಥಂಕರರು ಮೂರು ಅಂಗುಲ ಬಿಟ್ಟು ಕಮಲಕ್ಕೆ ತಾಗಿಯೂ ತಾಗದಂತೆ ಕುಳಿತಿರುತ್ತಾರೆ.

ತೀರ್ಥಂಕರರ ಮೇಲೆ 3 ಕೋಣೆಗಳಿದ್ದು ಅದನ್ನ ಆಗಮಗಳಲ್ಲಿ ಮುಕ್ಕೊಡೆ ಎಂದು ಬಣ್ಣಿಸಿದ್ದಾರೆ ಅದರ ಮೇಲೆ ಕಲ್ಪರುಕ್ಷ ತೀರ್ಥಂಕರರಿಗೆ ಪುಷ್ಪಕ ವಿಮಾನ ಗಳ ಮುಖಾಂತರ ಬಂದು ಪುಷ್ಪವೃಷ್ಟಿ ಮಾಡುತ್ತಿರುತ್ತಾರೆ

ಕೇವಲ ಜ್ಞಾನಿಯಾದ ನಂತರ ತೀರ್ಥಂಕರನು ಬೋಧನೆ ಮಾಡಲು ಕುಬೇರನಿಂದ ರಚಿತವಾದ ಮಂಟಪ ವಾದ ಸಮವಸರಣ ದಲ್ಲಿ ತೀರ್ಥಂಕರರು ಕುಳಿತು ಓಂಕಾರ ಧ್ವನಿಯ ಮುಖಾಂತರ ಆಚಾರ್ಯರ ಸಿದ್ಧಪುರುಷರ ಮುನಿಗಳ ಗಣದರರ ಪ್ರಶ್ನೆಗಳಿಗೆ ಉತ್ತರಿಸುತ್ತಾರೆ

ಭಾರತ ದೇಶದ ಅತ್ಯಂತ ಹಲವಾರು ಸಮವಸರಣದ ಹಲವಾರು ಪ್ರತಿಕೃತಿಗಳನ್ನು ನಿರ್ಮಿಸಲಾಗಿದೆ

ಜೈನರಲ್ಲಿ ಪಂಚಕಲ್ಯಾಣಗಳು ನಡೆದಾಗ ಅಂದರೆ ಬಸದಿಯಲ್ಲಿ ತೀರ್ಥಂಕರರನ್ನು ಪ್ರತಿಷ್ಠಾಪಿಸುವ ಮುನ್ನ ಮೂರ್ತಿಯನ್ನೇ ತೀರ್ಥಂಕರರು ಎಂದು ಭಾವಿಸಿ ಅವರ ಜೀವನವನ್ನು ಮರುಸೃಷ್ಟಿಸಿ ಸಮಯದಲ್ಲಿ ಸಮವಸರಣ ದಲ್ಲಿ ವಿರಾಜಮಾನರಾದ ಬಸದಿಯಲ್ಲಿ ತೀರ್ಥಂಕರರ ಪ್ರತಿಬಿಂಬವನ್ನು ಪ್ರತಿಷ್ಠಾಪಿಸಲಾಗುತ್ತದೆ. ಈ ಸಂದರ್ಭಗಳಲ್ಲಿ ಸಮವಸರಣವನ್ನು ನಿರ್ಮಿಸಲಾಗುತ್ತದೆ.

ಫೆಬ್ರವರಿ 2019 ರಲ್ಲಿ ಧರ್ಮಸ್ಥಳದಲ್ಲಿ ನಡೆದ ಮಹಾಮಸ್ತಕಾಭಿಷೇಕ ದಲ್ಲಿ ಬೃಹತ್ ಸಮವಸರಣವನ್ನು ನಿರ್ಮಿಸಲಾಗಿತ್ತುು ವೀರೇಂದ್ರ ಹೆಗ್ಗಡೆಯವರ ಕಲ್ಪನೆಯಂತೆ ಹೇಮಾವತಿ ಅಮ್ಮನವರ ಮಾರ್ಗದರ್ಶನದಲ್ಲಿ ಖ್ಯಾತ ಚಿತ್ರ ಮತ್ತು ಶಿಲ್ಪ ಚಿತ್ತಾ ಜಿನೇಂದ್ರ ಎಂ ಎಂ ರವರು ನಿರ್ಮಿಸಿದ್ದರು.

ಉಲ್ಲೇಖಗಳು[ಸಂಪಾದಿಸಿ]

  1. https://books.google.co.in/books?id=vZmSAwAAQBAJ&pg=PT44&dq=%E0%B2%86%E0%B2%A6%E0%B2%BF%E0%B2%AA%E0%B3%81%E0%B2%B0%E0%B2%BE%E0%B2%A3&hl=kn&sa=X&ved=0ahUKEwismf28mJvjAhUJPI8KHQdKBKIQ6AEIKjAB#v=onepage&q=%E0%B2%86%E0%B2%A6%E0%B2%BF%E0%B2%AA%E0%B3%81%E0%B2%B0%E0%B2%BE%E0%B2%A3&f=false
  2. https://www.prajavani.net/article/%E0%B2%8F%E0%B2%A8%E0%B3%81-%E0%B2%B0%E0%B2%AE%E0%B3%8D%E0%B2%AF-%E0%B2%B8%E0%B3%8C%E0%B2%AE%E0%B3%8D%E0%B2%AF-%E0%B2%B8%E0%B2%AE%E0%B2%B5%E0%B2%B8%E0%B2%B0%E0%B2%A3
  3. https://kn.m.wikipedia.org/wiki/%E0%B2%AD%E0%B2%B0%E0%B2%A4%E0%B3%87%E0%B2%B6_%E0%B2%B5%E0%B3%88%E0%B2%AD%E0%B2%B5


ಅನುವಾದ[ಸಂಪಾದಿಸಿ]

  • English: [[ ]], en:
"https://kn.wiktionary.org/w/index.php?title=ಸಮವಸರಣ&oldid=658791" ಇಂದ ಪಡೆಯಲ್ಪಟ್ಟಿದೆ