ವರ್ಗ:ಕನ್ನಡದ ಜನಪದ ಪದಗಳು

ವಿಕ್ಷನರಿ ಇಂದ
Jump to navigation Jump to search

ಕನ್ನಡ[ಸಂಪಾದಿಸಿ]

ಅಂತರು

 1. ಮೆಟ್ಟಿಲು

ಕನ್ನಡ[ಸಂಪಾದಿಸಿ]

ಅಣಮಣ್ಣೆ

 1. ಸಿದ್ದತೆ, ಕೂಡಿಸಿ

ಕನ್ನಡ[ಸಂಪಾದಿಸಿ]

ಅಟ್ಟೆ

 1. ಚಪ್ಪಲಿಗೆ ಕೆಳಭಾಗಕ್ಕೆ ಹಾಕುವ ಚರ್ಮ, sole

ಕನ್ನಡ[ಸಂಪಾದಿಸಿ]

ಅಟಕಾಯಿಸು

 1. ಬೆದರಿಸು

ಕನ್ನಡ[ಸಂಪಾದಿಸಿ]

ಆಟಕೋಟ್ಲೆ

 1. ತೊಂದರೆ

ಕನ್ನಡ[ಸಂಪಾದಿಸಿ]

ಆಗೂಕಾಗ್ದು

 1. ಸಾದ್ಯವಿಲ್ಲ, ಅವಕಾಶವಿರಬಾರದು, ಆಗಬಾರದು

ಕನ್ನಡ[ಸಂಪಾದಿಸಿ]

ಆಗಾತ್ಯಗಾರ

 1. ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೆದರಿಸುವವ

ಕನ್ನಡ[ಸಂಪಾದಿಸಿ]

ಆತಾವಿಗಂಟ

 1. ಅಲ್ಲಿಯ ತನಕ

ಕನ್ನಡ[ಸಂಪಾದಿಸಿ]

ಅಚ್ಚಿ

 1. ತಾಯಿ

ಕನ್ನಡ[ಸಂಪಾದಿಸಿ]

ಅಚ್ಚಿನ ಮನುಷ್ಯ

 1. ಬಲಶಾಲಿ

ಕನ್ನಡ[ಸಂಪಾದಿಸಿ]

ಅಚ್ಚು

 1. ಚೌಕಾಕಾರದ ಬೆಲ್ಲ

ಕನ್ನಡ[ಸಂಪಾದಿಸಿ]

ಅದ್ದೂರಿ

 1. ವೈಭವ

ಕನ್ನಡ[ಸಂಪಾದಿಸಿ]

ಅದ್ದರಿಸು

 1. ಗದರಿಸು

ಕನ್ನಡ[ಸಂಪಾದಿಸಿ]

ಅಗಡುತನ

 1. ತುಂಟತನ

ಕನ್ನಡ[ಸಂಪಾದಿಸಿ]

ಅಗಳು

 1. ಬೆಂದ ಅಕ್ಕಿಯ ಕಾಳು, ಅನ್ನದ ಕಾಳು, ಅನ್ನದ ಚೂರು

ಕನ್ನಡ[ಸಂಪಾದಿಸಿ]

ಅಗಚು

 1. ಬೇರೆ ಮಾಡು, ವಿಂಗಡಿಸು, ಭೇದಭಾವ ತೋರು

ಕನ್ನಡ[ಸಂಪಾದಿಸಿ]

ಅಗನಿ

 1. ಅಗಣಿ, ಅಗಳಿ, ಕದವನ್ನು ಭದ್ರಪಡಿಸುವ ಬೆಣೆ

ಕನ್ನಡ[ಸಂಪಾದಿಸಿ]

ಅಗ್ಗಳ

 1. ದೊಡ್ಡವ

ಕನ್ನಡ[ಸಂಪಾದಿಸಿ]

ಅಹಿ

 1. ಸರ್ಪ

ಕನ್ನಡ[ಸಂಪಾದಿಸಿ]

ಐಕ್ಳು

 1. ಹೈಕಳು, ಸಣ್ಣ ಮಕ್ಕಳು, ಪಿಳ್ಳೆ ಪಿಚಕ

ಕನ್ನಡ[ಸಂಪಾದಿಸಿ]

ಅಜ

 1. ಬ್ರಹ್ಮ

ಕನ್ನಡ[ಸಂಪಾದಿಸಿ]

ಅಜ್ಜು

 1. ಅದ್ದು, to dip

ಕನ್ನಡ[ಸಂಪಾದಿಸಿ]

ಅಕ್ಕಡಕು

 1. ಹತ್ಕಡಕು, ಹತ್ತಕಡಕು, ಕಡಕು, ಗಂಡಸರ ಕಿವಿಯ ಆಭರಣ

ಕನ್ನಡ[ಸಂಪಾದಿಸಿ]

ಅಕ್ಕಳಿಸಿ

 1. ತುಂಬಿ, ಉಕ್ಕಿ

ಕನ್ನಡ[ಸಂಪಾದಿಸಿ]

ಅಕ್ಕರಗಾನ

 1. ಅಕ್ಕರೆಯ ಸುರಿಮಳೆ, ಅಕ್ಕರೆ ಕಾರುವಿಕೆ, ಪ್ರೀತಿ ವಾತ್ಸಲ್ಯಗಳ ಹೆಚ್ಚುಗಾರಿಕೆಯ ಪ್ರದರ್ಶನ

ಕನ್ನಡ[ಸಂಪಾದಿಸಿ]

ಅಕ್ಕು

 1. ಆಗಲಿ, ಹಾಗೇ ಆಗಲಿ

ಕನ್ನಡ[ಸಂಪಾದಿಸಿ]

ಅಲವಂಗ

 1. ಹಲವಂಗ, ಹಲವು ತರ, ನಾನಾರೀತಿ, ಹ್ಯಾಗೆಹ್ಯಾಗೋ

ಕನ್ನಡ[ಸಂಪಾದಿಸಿ]

ಅಲೆಬಲೆ ಚೆನ್ನಿ

 1. ಬರೀ ಮಾತಿನ ಬೇಡಗಿ, ಅವತಾರಗೆಟ್ಟವಳು

ಕನ್ನಡ[ಸಂಪಾದಿಸಿ]

ಅಮೇಧ್ಯ

 1. ಹೇಸಿಗೆ

ಕನ್ನಡ[ಸಂಪಾದಿಸಿ]

ಅಮಗ

 1. ಅನುಕೂಲ ಕಾಲ, ಹಬ್ಬದ ದಿನ

ಕನ್ನಡ[ಸಂಪಾದಿಸಿ]

ಅಮ್ಮರಿಸು

 1. ಶೇಕರಿಸು, ಹದಮಾಡು

ಕನ್ನಡ[ಸಂಪಾದಿಸಿ]

ಅಮ್ಮಿ

 1. ಹೆಣ್ಣನ್ನು ಸಂಬೋದಿಸುವ ಮಾತು, ಅಮ್ಮಣ್ಣಿ

ಕನ್ನಡ[ಸಂಪಾದಿಸಿ]

ಅನಕಿ

 1. ಜಿಪುಣಿ

ಕನ್ನಡ[ಸಂಪಾದಿಸಿ]

ಅನ್ನೇಕಾರ

 1. ಅನ್ಯಾಯಗಾರ, ಅನ್ಯಾಯ ಮಾಡಿದವನು

ಕನ್ನಡ[ಸಂಪಾದಿಸಿ]

ಅನ್ನಿಗ

 1. ಬೇರೆಯವ, ಹೆರವ

ಕನ್ನಡ[ಸಂಪಾದಿಸಿ]

ಅನ್ನಿಗರು

 1. ಬೇರೆಯವರು, ಹೆರರು, ಪರರು

ಕನ್ನಡ[ಸಂಪಾದಿಸಿ]

ಅನುಕರು

 1. ಬಾಯಿರುಚಿ ಉಳ್ಳವರು, ಊಟದಲ್ಲಿ ಆಸೆಬುರುಕರು, ಊಟ ಮಾಡುವಾಗ ಕೈ, ತಣಿಗೆಗಳನ್ನು ನೆಕ್ಕುವವರು

ಕನ್ನಡ[ಸಂಪಾದಿಸಿ]

ಅಪಾದ

 1. ಅಪವಾದ

ಕನ್ನಡ[ಸಂಪಾದಿಸಿ]

ಅಪರಂಜಿ ಗಟ್ಟಿ

 1. ಶುದ್ಧ ಚಿನ್ನದ ಗಟ್ಟಿ

ಕನ್ನಡ[ಸಂಪಾದಿಸಿ]

ಅಪ್ಪಂತೋರು

 1. ಅಪ್ಪಂಥವರು, ದೊಡ್ಡೋರು, ಘನ ವ್ಯಕ್ತಿ/ಗಳು

ಕನ್ನಡ[ಸಂಪಾದಿಸಿ]

ಅಪ್ಪಟಗಾತಿ

 1. ಶುದ್ಧ ಹೇಳುವಳು, ನೀತ ಹೇಳುವಳು, ನೀತಿ ನೇಮದ ಬಗ್ಗೆ ಸಲಹೆ ಕೊಡುವವಳು

ಕನ್ನಡ[ಸಂಪಾದಿಸಿ]

ಅಪ್ಪಚ್ಚಿ

 1. ರೊಟ್ಟಿ, ಎರೆಯಪ್ಪ

ಕನ್ನಡ[ಸಂಪಾದಿಸಿ]

ಅಪ್ಪರ

 1. ಅಪ್ಪಾರ, ಅಪಾರ, ಹೆಚ್ಚು

ಕನ್ನಡ[ಸಂಪಾದಿಸಿ]

ಅಪ್ಪಿಗೆ

 1. ಹೊಲಿಗೆ, ತ್ಯಾಪೆ

ಕನ್ನಡ[ಸಂಪಾದಿಸಿ]

ಅರಣೆ

 1. ಓತಿಕ್ಯಾತ

ಕನ್ನಡ[ಸಂಪಾದಿಸಿ]

ಅರಬೆಡಗು

 1. ಅರ್ಧಂಬರ್ಧ ಬೆಡಗು, ಅರೆಬರೆ ಬಿನ್ನಾಣ

ಕನ್ನಡ[ಸಂಪಾದಿಸಿ]

ಅರಕಲು

 1. ಹರಕಲು, ಹರಿದು ಹೋಗಿರುವ

ಕನ್ನಡ[ಸಂಪಾದಿಸಿ]

ಅರವಟ್ಟಿಗೆ

 1. ಬಾಯಾರಿದವರಿಗೆ ಧರ್ಮಾರ್ಥವಾಗಿ ನೀರು ಕೊಡುವ ಜಾಗ

ಕನ್ನಡ[ಸಂಪಾದಿಸಿ]

ಅರೆ

 1. ತೆಯ್ಯಿ

ಕನ್ನಡ[ಸಂಪಾದಿಸಿ]

ಅರೆ

 1. ಉಜ್ಜು, ಪುಡಿಮಾಡು

ಕನ್ನಡ[ಸಂಪಾದಿಸಿ]

ಅರೆ ಬರೆ

 1. ಅರ್ಧಂಬರ್ಧ

ಕನ್ನಡ[ಸಂಪಾದಿಸಿ]

ಅರೆಕಲ್ಲು

 1. ಆರೆಕಲ್ಲು, ಹಾರೆಕಲ್ಲು, ಬಂಡೆಕಲ್ಲು, ಬಂಡೆ

ಕನ್ನಡ[ಸಂಪಾದಿಸಿ]

ಅರಿ

 1. ಭತ್ತ ರಾಗಿಗಳನ್ನು ಕೊಯ್ದು ಹಾಕಿದ ಸಣ್ಣ ಸಣ್ಣ ಗುಡ್ಡೆಗಳು

ಕನ್ನಡ[ಸಂಪಾದಿಸಿ]

ಅರಿಲು

 1. ನಕ್ಷತ್ರ, ಚುಕ್ಕಿ

ಕನ್ನಡ[ಸಂಪಾದಿಸಿ]

ಅರ್ತಿ

 1. ಪ್ರೀತಿ, ಆಸೆ

ಕನ್ನಡ[ಸಂಪಾದಿಸಿ]

ಅರುಗು

 1. ಪಕ್ಕ

ಕನ್ನಡ[ಸಂಪಾದಿಸಿ]

ಅರುವೆ

 1. ಅರಿವೆ, ಅರವಿ, ಬಟ್ಟೆ, cloth, dress, worn out dress

ಕನ್ನಡ[ಸಂಪಾದಿಸಿ]

ಅಸಡ್ಡಾಳು

 1. ತಿರಸ್ಕಾರ, ಕ್ಷುದ್ರ, ನಿಕೃಷ್ಟ

ಕನ್ನಡ[ಸಂಪಾದಿಸಿ]

ಅಸಾಸುರ

 1. ಅಸಹಾಯ ಶೂರ, ಪರಾಕ್ರಮಿ

ಕನ್ನಡ[ಸಂಪಾದಿಸಿ]

ಅಸೆದಾನ

 1. ಹಸೆದಾನ, ಬ್ರಹ್ಮ ಗಂಟು

ಕನ್ನಡ[ಸಂಪಾದಿಸಿ]

ಅಸಿರು

 1. ಹಸಿರು, ಪಚ್ಚೆ

ಕನ್ನಡ[ಸಂಪಾದಿಸಿ]

ಅವುಟು

 1. ಸಣ್ಣ ಪಿರಂಗಿ

ಕನ್ನಡ[ಸಂಪಾದಿಸಿ]

ಬೇಳುಗರಿ

 1. ಬೇಳುಗರೆವುದು, ಬೊಬ್ಬಿಡುವುದು

ಕನ್ನಡ[ಸಂಪಾದಿಸಿ]

ಬೇಗಡೆ

 1. ಹೊಳಪು, ತಗಡು

ಕನ್ನಡ[ಸಂಪಾದಿಸಿ]

ಬೇಹಾರ

 1. ವ್ಯವಹಾರ

ಕನ್ನಡ[ಸಂಪಾದಿಸಿ]

ಬೇತೂರಿ

 1. ಉಪಾಯಗಾರ್ತಿ, ಚತುರೆ, ಬೇತುರಿ

ಕನ್ನಡ[ಸಂಪಾದಿಸಿ]

ಬೀಡಿಕೆ

 1. ಬೀಡುಬಿಟ್ಟ, ವಿಶ್ರಾಂತಿ

ಕನ್ನಡ[ಸಂಪಾದಿಸಿ]

ಬೀಳು

 1. ಬಳ್ಳಿ, ಲತೆ

ಕನ್ನಡ[ಸಂಪಾದಿಸಿ]

ಬೀರೇಕೆ

 1. ಹೆಚ್ಚುಗಾರಿಕೆಗೆ, ಸಾಮರ್ಥ್ಯ ಪ್ರದರ್ಶಿಸಲು, ಜಂಬಕ್ಕೆ, to show off, to flaunt

ಕನ್ನಡ[ಸಂಪಾದಿಸಿ]

ಬೀರು

 1. ಚೆಲ್ಲು, ಹರಡು

ಕನ್ನಡ[ಸಂಪಾದಿಸಿ]

ಬೀಸಾಲೆ

 1. ಎಳೆದುಬಿಡುವುದು

ಕನ್ನಡ[ಸಂಪಾದಿಸಿ]

ಬೋಡು

 1. ಹಲ್ಲಿಲ್ಲದ್

ಕನ್ನಡ[ಸಂಪಾದಿಸಿ]

ಬೋಂದು ಗಿಡ

 1. ಕಾಫಿ ಗಿಡ

ಕನ್ನಡ[ಸಂಪಾದಿಸಿ]

ಬೋಕಿ

 1. ಒಡಕು ಪಾತ್ರೆ, ಬಕ್ಕರೆ

ಕನ್ನಡ[ಸಂಪಾದಿಸಿ]

ಬೋನ

 1. ಅನ್ನ

ಕನ್ನಡ[ಸಂಪಾದಿಸಿ]

ಬೋಣಿ

 1. ಮೊದಲು ಮಾರುವಿಕೆ, ದಿನದ ಚೊಚ್ಚಲ ವ್ಯಾಪಾರ

ಕನ್ನಡ[ಸಂಪಾದಿಸಿ]

ಬೋರೆ

 1. ಎತ್ತರವಾದ ಪ್ರದೇಶ, ದಿಣ್ಣೆ

ಕನ್ನಡ[ಸಂಪಾದಿಸಿ]

ಬೂಟಕ

 1. ಮೋಸಗಾರ

ಕನ್ನಡ[ಸಂಪಾದಿಸಿ]

ಬೂಸಿ

 1. ಪುಸಿ, ಹುಸಿ, ಸುಳ್ಳು

ಕನ್ನಡ[ಸಂಪಾದಿಸಿ]

ಬಡ್ಡು

 1. ದಡ್ಡ, ನಿಷ್ಪ್ರಯೋಜಕ ಮನುಷ್ಯ

ಕನ್ನಡ[ಸಂಪಾದಿಸಿ]

ಬಡಾಯ

 1. ಬಡಾಯಿ, ಜಂಬ, ಬಡಿವಾರ, ಒಣಹೆಮ್ಮೆ, ಡೌಲು, ಬೆಡಗು

ಕನ್ನಡ[ಸಂಪಾದಿಸಿ]

ಬಡಬಡಿಸು

 1. ಅಸ್ಪಷ್ಟವಾಗಿ ಮಾತಾಡು, ತೊದಲು

ಕನ್ನಡ[ಸಂಪಾದಿಸಿ]

ಬಡಿಗೆ

 1. ಕೋಲು

ಕನ್ನಡ[ಸಂಪಾದಿಸಿ]

ಬಳ್ಳೂವ

 1. ನರಿ

ಕನ್ನಡ[ಸಂಪಾದಿಸಿ]

ಬಳ್ಳ

 1. ಮೂರು ಪಡಿ, ಒಂದು ಅಳತೆಯ ಸಾಧನ

ಕನ್ನಡ[ಸಂಪಾದಿಸಿ]

ಬಂಡ

 1. ದ್ರವ್ಯ ವಸ್ತು

ಕನ್ನಡ[ಸಂಪಾದಿಸಿ]

ಬಂಡಾರಿಸು

 1. ಕೆಲಸಕ್ಕೆಬಾರದಾಗು

ಕನ್ನಡ[ಸಂಪಾದಿಸಿ]

ಬಂಡಗೇಡು

 1. spoiled integrity

ಕನ್ನಡ[ಸಂಪಾದಿಸಿ]

ಬಂಡಗೆಟ್ಟ

 1. with spoiled integrity

ಕನ್ನಡ[ಸಂಪಾದಿಸಿ]

ಬಂಗದ ಕೂಳು

 1. ಹಂಗಿನ ಅನ್ನ

ಕನ್ನಡ[ಸಂಪಾದಿಸಿ]

ಬಂಗು

 1. ಮೈ ಮೇಲಿನ ಚರ್ಮ ಕಂದು ಬಣ್ಣಕ್ಕೆ ತಿರುಗುವ ಒಂದು ಬಗೆಯ ಚರ್ಮ ರೋಗ

ಕನ್ನಡ[ಸಂಪಾದಿಸಿ]

ಬಣ್ಣ

 1. ಸೀರೆ

ಕನ್ನಡ[ಸಂಪಾದಿಸಿ]

ಬಣವಿ

 1. ಹುಲ್ಲಿನ ಮೇದೆ

ಕನ್ನಡ[ಸಂಪಾದಿಸಿ]

ಬಟ್ಟ ತಲೆ

 1. ದುಂಡು ತಲೆ

ಕನ್ನಡ[ಸಂಪಾದಿಸಿ]

ಬಟ್ಟಾಣಿ ಮುಖ

 1. ದುಂಡು ಮುಖ

ಕನ್ನಡ[ಸಂಪಾದಿಸಿ]

ಬಟ್ಟು

 1. ವೃತ್ತಾಕಾರದ, ಹಣೆಯ ಮೇಲಿನ ಬೊಟ್ಟು

ಕನ್ನಡ[ಸಂಪಾದಿಸಿ]

ಬಾಡಬಕ್ಕಿ

 1. ಹೆಚ್ಚು ಮಾಂಸ ತಿನ್ನುವವಳು, one who relishes non-vegetarian food

ಕನ್ನಡ[ಸಂಪಾದಿಸಿ]

ಬಾಡು

 1. ಮಾಂಸ

ಕನ್ನಡ[ಸಂಪಾದಿಸಿ]

ಬಾಣಸಿಗೆ

 1. ಅಡಿಗೆ ಮಾಡುವವ, ಭಟ್ಟ

ಕನ್ನಡ[ಸಂಪಾದಿಸಿ]

ಬಾಣೆ

 1. ಬಾ ಹೆಣ್ಣೆ!, ಹೆಂಗಸರು ತಮಗಿಂತ ಕಿರಿಯ ಹೆಂಗಸರನ್ನು ಅಥವಾ ಹೆಣ್ಣುಮಕ್ಕಳನ್ನು ಕರೆಯುವ ರೀತಿ

ಕನ್ನಡ[ಸಂಪಾದಿಸಿ]

ಬಾಮಗೇಡಿ

 1. ಅಂದಗೇಡಿ

ಕನ್ನಡ[ಸಂಪಾದಿಸಿ]

ಬಾನ

 1. ಬೋನ, ಅನ್ನ, ಧ್ಯಾನ ತುಂಬಿದ ಮಡಕೆಯ ಸಾಲು

ಕನ್ನಡ[ಸಂಪಾದಿಸಿ]

ಬಾನಿ

 1. ಪಾನಿ, ಬಾವಿಯಿಂದ ನೀರೆತ್ತುವ ಸಾಧನ, ಅಗಲವಾದ ಬಾಯುಳ್ಳ ಪಾತ್ರೆ

ಕನ್ನಡ[ಸಂಪಾದಿಸಿ]

ಬಾರ್ಸು

 1. ಬಾರಿಸು, ಹೊಡೆ

ಕನ್ನಡ[ಸಂಪಾದಿಸಿ]

ಬಾರು

 1. ಪಟ್ಟೆ, ದಪ್ಪ ಪಟ್ಟೆ
  ರಮೇಶನ ಅಪ್ಪ ಬಾಸುಂಡೆ ಬರೋ ಹಾಗೆ ಬಾರೆಳೆದರು (=ಪಟ್ಟಿ/ಕೋಲಿನಿಂದ ಹೊಡೆದರು)

ಕನ್ನಡ[ಸಂಪಾದಿಸಿ]

ಬಾಯ್ಮಾತು

 1. ಬಾಯಿನ ಬರಿ ಮಾತು, ಕೃತಿಯಲ್ಲಿಲ್ಲದ ಮಾತು, ಬರಿಯ ಉಪಚಾರಕ್ಕೆಂದ ಆಡಲಾಗುವ ಮಾತು

ಕನ್ನಡ[ಸಂಪಾದಿಸಿ]

ಬಚ್ಚು

 1. ಬಡಕಲು

ಕನ್ನಡ[ಸಂಪಾದಿಸಿ]

ಬದ್ದವರು

 1. ಬದುಕಿ ಬಾಳಿದವರು

ಕನ್ನಡ[ಸಂಪಾದಿಸಿ]

ಬಗ್ಡ

 1. ಬಗ್ಗಡ, ಸಗಣಿಯನ್ನು ನೀರಿನಲ್ಲಿ ಕಲಕಿದ ನೀರು

ಕನ್ನಡ[ಸಂಪಾದಿಸಿ]

ಬಗಲು

 1. ಕಂಕಳು, ಪಕ್ಕ

ಕನ್ನಡ[ಸಂಪಾದಿಸಿ]

ಬಗಸು

 1. ಬಯಸು

ಕನ್ನಡ[ಸಂಪಾದಿಸಿ]

ಬಗ್ಗನೆ

 1. ಬೇಗನೆ, ಭುಗಿಲ್ ಎಂದು

ಕನ್ನಡ[ಸಂಪಾದಿಸಿ]

ಬಗ್ತಲೆ

 1. ಬಕ್ತಲೆ, ಬೈತಲೆ, crop (As of hair)

ಕನ್ನಡ[ಸಂಪಾದಿಸಿ]

ಬಕ್ಕ ತಲೆ

 1. ಬೊಕ್ಕು ತಲೆ, ಬೊಕ್ ತಲೆ, ಬೋಳ ತಲೆ

ಕನ್ನಡ[ಸಂಪಾದಿಸಿ]

ಬಕ್ಕರೆ

 1. ಒಡೆದ ಮಡಕೆಯ ಚೂರು

ಕನ್ನಡ[ಸಂಪಾದಿಸಿ]

ಬಲೊಪ್ಪಾರ

 1. ಹೆಚ್ಚಿನ ದೊಡ್ಡಸ್ತಿಕೆ

ಕನ್ನಡ[ಸಂಪಾದಿಸಿ]

ಬಲುಬದ್ದ

 1. ಹೆಚ್ಚು ಬದ್ಧ

ಕನ್ನಡ[ಸಂಪಾದಿಸಿ]

ಬರಡು

 1. ಬಂಜೆ, ಫಲವಿಲ್ಲದ್ದು, ಗೊಡ್ಡು

ಕನ್ನಡ[ಸಂಪಾದಿಸಿ]

ಬರದು

 1. ಬಾರದು, won't comeback

ಕನ್ನಡ[ಸಂಪಾದಿಸಿ]

ಬರಲು

 1. ಪೊರಕೆ, ಕಸಬರಿಕೆ

ಕನ್ನಡ[ಸಂಪಾದಿಸಿ]

ಬರ್ಕತ್ತು

 1. ಏಳ್ಗೆ, ಏಳಿಗೆ

ಕನ್ನಡ[ಸಂಪಾದಿಸಿ]

ಬಸೆ

 1. ನೆಣ, ಕೊಬ್ಬು

ಕನ್ನಡ[ಸಂಪಾದಿಸಿ]

ಬಸಿ

 1. ನೀರಿಳಿಸು

ಕನ್ನಡ[ಸಂಪಾದಿಸಿ]

ಬಸ್ತಿ

 1. ಬಸದಿ, ವಸತಿ, ವಟಾರ

ಕನ್ನಡ[ಸಂಪಾದಿಸಿ]

ಬವ

 1. ಬವಕೆ, ಬಯಕೆ

ಕನ್ನಡ[ಸಂಪಾದಿಸಿ]

ಬವರ

 1. ಯುದ್ಧ, ಜಗಳ

ಕನ್ನಡ[ಸಂಪಾದಿಸಿ]

ಬಯ್ರಿಗೆ

 1. ರಂಧ್ರ ಮಾಡಲು ಉಪಯೋಗಿಸುವ ಸಾಧನ

ಕನ್ನಡ[ಸಂಪಾದಿಸಿ]

ಬೆಳ್ಳಂದು

 1. ಬಿಳಿದಾದದ್ದು, ಶುಭ್ರವಾದದ್ದು

ಕನ್ನಡ[ಸಂಪಾದಿಸಿ]

ಬೆಳ್ಳಿವಾರ

 1. ಶುಕ್ರವಾರ, friday

ಕನ್ನಡ[ಸಂಪಾದಿಸಿ]

ಬೆಂಟಿ ಬೆಂಟಿ

 1. ಚುಚ್ಚಿ ಚುಚ್ಚಿ

ಕನ್ನಡ[ಸಂಪಾದಿಸಿ]

ಬೆಣೆ

 1. ಮರದ ಸಣ್ಣ ಗೂಟ

ಕನ್ನಡ[ಸಂಪಾದಿಸಿ]

ಬೆಟ್ಟಾಡು

 1. ಬೆಂಟಾಡು, ಕೆದಕು

ಕನ್ನಡ[ಸಂಪಾದಿಸಿ]

ಬೆಚ್ಕು

 1. ಬೆದರಿಕೆ

ಕನ್ನಡ[ಸಂಪಾದಿಸಿ]

ಬೆದೆ

 1. ಬಿತ್ತನೆಗೆ ತಕ್ಕ ಸಮಯ

ಕನ್ನಡ[ಸಂಪಾದಿಸಿ]

ಬೆನಕ

 1. ಗಣೇಶ

ಕನ್ನಡ[ಸಂಪಾದಿಸಿ]

ಬೆಪ್ಪತಕ್ಕಡಿ

 1. ದಡ್ಡ

ಕನ್ನಡ[ಸಂಪಾದಿಸಿ]

ಬೆರಿ

 1. ಸ್ವಪ್ರತಿಷ್ಠೆ ತೋರು, ತನ್ನ ಬಗ್ಗೆ ದೊಡ್ಡದಾಗಿ ಹೇಳಿಕೊಳ್ಳು

ಕನ್ನಡ[ಸಂಪಾದಿಸಿ]

ಬೆರಿಯ ಬೆರಿಯ

 1. ತಾನೇ ಹೊಗಳಿಕೊಳ್ಳುವಿಕೆಯ ಪರಮಾವಧಿ ಘಟ್ಟ

ಕನ್ನಡ[ಸಂಪಾದಿಸಿ]

ಬೆಸನ

 1. ಹೆರಿಗೆ

ಕನ್ನಡ[ಸಂಪಾದಿಸಿ]

ಭೋಷ

 1. ಗೌರವ

ಕನ್ನಡ[ಸಂಪಾದಿಸಿ]

ಭೂರಿ

 1. ಅಪಾರ, ಬಹಳ

ಕನ್ನಡ[ಸಂಪಾದಿಸಿ]

ಭಂಡಾಚಾರ

 1. ಭಂಡಾಟ

ಕನ್ನಡ[ಸಂಪಾದಿಸಿ]

ಭಾಂಡ

 1. ಭಾಂಡಲಿ, ಕೊಡ, ಪಾತ್ರೆ

ಕನ್ನಡ[ಸಂಪಾದಿಸಿ]

ಭೌಮವಾರ

 1. ಮಂಗಳವಾರ, Tuesday

ಕನ್ನಡ[ಸಂಪಾದಿಸಿ]

ಬಿಡಿಸು

 1. ಬಿಚ್ಚು, untie, unlock

ಕನ್ನಡ[ಸಂಪಾದಿಸಿ]

ಬಿಂಗಿಯಂತೆ

 1. ತರಾವರಿ, ಹ್ಯಾಗೆಹ್ಯಾಗೋ

ಕನ್ನಡ[ಸಂಪಾದಿಸಿ]

ಬಿಲ್ಲಾಣ

 1. ಬಿನ್ನಾಣ

ಕನ್ನಡ[ಸಂಪಾದಿಸಿ]

ಬಿಮ್ಮನಸೆ

 1. ಬಸುರಿ, ಗರ್ಭಿಣಿ

ಕನ್ನಡ[ಸಂಪಾದಿಸಿ]

ಬಿರೇಕೆ

 1. ಬೀರೇಕೆ, ಜಂಬಕ್ಕೆ

ಕನ್ನಡ[ಸಂಪಾದಿಸಿ]

ಬಿಸಾಟ

 1. ಬಿಸಾಡಿದಂತೆ, ನಿರ್ಲಕ್ಷ

ಕನ್ನಡ[ಸಂಪಾದಿಸಿ]

ಬಿತ್ತಾರಿ

 1. ಯಜಮಾನಿ

ಕನ್ನಡ[ಸಂಪಾದಿಸಿ]

ಬೊಡ್ಡು

 1. ಮೊಂಡು

ಕನ್ನಡ[ಸಂಪಾದಿಸಿ]

ಬೊಂದಿ

 1. ಶರೀರ

ಕನ್ನಡ[ಸಂಪಾದಿಸಿ]

ಬೊಟ್ಟು

 1. ತೊಟ್ಟು, ಹನಿ, ಬೆರಳು

ಕನ್ನಡ[ಸಂಪಾದಿಸಿ]

ಬೊಬ್ಬೆ

 1. ಆರ್ಭಟ

ಕನ್ನಡ[ಸಂಪಾದಿಸಿ]

ಬೊಗ್ಗು

 1. ಶನೀಶ್ವರ, ಶನೇಶ್ಚರ, Saturn God

ಕನ್ನಡ[ಸಂಪಾದಿಸಿ]

ಬೊಗ್ಗುವಾರ

 1. ಶನಿವಾರ, saturday

ಕನ್ನಡ[ಸಂಪಾದಿಸಿ]

ಬೊಕ್ಕೆ

 1. ಗುಳ್ಳೆ, ಮೊಡವೆ, ಮೊಡಪೊಕ್ಕೆ

ಕನ್ನಡ[ಸಂಪಾದಿಸಿ]

ಬೊಕ್ತೆಲೆ

 1. ಬೊಕ್ಕತಲೆ, ಬೋಳಾದ ತಲೆ

ಕನ್ನಡ[ಸಂಪಾದಿಸಿ]

ಬ್ರಾಂತು

 1. ಭ್ರಾಂತಿ

ಕನ್ನಡ[ಸಂಪಾದಿಸಿ]

ಬುಡಮುಟ್ಟ

 1. ಬುಡದಿಂದ

ಕನ್ನಡ[ಸಂಪಾದಿಸಿ]

ಬುಂಡೆ

 1. ಬುರುಡೆ, ತಲೆಯ ಅಸ್ಥಿ, ತಲೆ

ಕನ್ನಡ[ಸಂಪಾದಿಸಿ]

ಬುಟೇದಾರಿ

 1. ಹೂವಿನ ಕಸೂತಿಯಿಂದ ಅಲಂಕಾರವಾಗಿರುವ

ಕನ್ನಡ[ಸಂಪಾದಿಸಿ]

ಬುಗುಡಿ

 1. ಹೆಂಗಸರ ಕಿವಿಯ ಆಭರಣ

ಕನ್ನಡ[ಸಂಪಾದಿಸಿ]

ಬುಕ್ಕಕ್ಕ

 1. ಮುಖ ಊದಿಸಿಕೊಂಡವಳು

ಕನ್ನಡ[ಸಂಪಾದಿಸಿ]

ಬುಕ್ಲಿ

 1. ಕೆನ್ನೆ ಊದಿಕೊಂಡಿರುವುದು, ಬುಕ್ಕಲ ರೋಗ

ಕನ್ನಡ[ಸಂಪಾದಿಸಿ]

ಚೀಣಿಮೀನು

 1. ಕೆಂಪು ಮೀನು

ಕನ್ನಡ[ಸಂಪಾದಿಸಿ]

ಚೀಕ್ರ ಗುಡ್ಲು

 1. ತುಂಬಿದ ಮಕ್ಕಳಿರುವ ಗುಡಿಸಲು/ಮನೆ

ಕನ್ನಡ[ಸಂಪಾದಿಸಿ]

ಚೀಕು

 1. ತೀರಾ ಚಿಕ್ಕದು, ಕಂದಿರುವ ಕಾಳು

ಕನ್ನಡ[ಸಂಪಾದಿಸಿ]

ಚೀಲಿ

 1. ಬೆಕ್ಕು, ಕೊತ್ತಿ, ಸೀಬಿ

ಕನ್ನಡ[ಸಂಪಾದಿಸಿ]

ಚೋಟು

 1. ಹೆಬ್ಬಟ್ಟಿಗೆ ಪಕ್ಕದ ತೋರು ಬೆರಳಿಗು ಇರುವ ಅಂತರ

ಕನ್ನಡ[ಸಂಪಾದಿಸಿ]

ಚಂದರ ಗಾವಿ

 1. ಕೆಂಪು ಬಣ್ಣದ ಸೀರೆ

ಕನ್ನಡ[ಸಂಪಾದಿಸಿ]

ಚಂದುಳ್ಳಿ

 1. ಸಹಜ ಸುಂದರವಾದ, ಅಲಂಕಾರಪೂರ್ಣ,
  ಚಂದುಳ್ಳಿ ಚೆಲುವೆ, ಚೆಲುವಾಂತ ಚೆನ್ನಿಗ

ಕನ್ನಡ[ಸಂಪಾದಿಸಿ]

ಚಟ್ಟ

 1. ಹೆಣ ಹೊತ್ತುಕೊಂಡು ಹೋಗುವ ಸಾಧನ

ಕನ್ನಡ[ಸಂಪಾದಿಸಿ]

ಚಾಳಿ

 1. ನಡತೆ, ಅಭ್ಯಾಸ

ಕನ್ನಡ[ಸಂಪಾದಿಸಿ]

ಚಾಷ್ಟಿ

 1. ಚೇಷ್ಟೆ

ಕನ್ನಡ[ಸಂಪಾದಿಸಿ]

ಚಾಜ್‍ಗಾರ

 1. ಷೋಕಿಲಾಲ, ನೀಟು-ನಿಗಟು ಮಾಡುವವನು, ಇತರರ ಕಣ್ಣಿಗೆ ಚೆನ್ನಾಗಿ ಕಾಣಿಸಿಕೊಳ್ಳಬೇಕೆಂಬ ಹುಚ್ಚು ಇರುವವನು, a dude

ಕನ್ನಡ[ಸಂಪಾದಿಸಿ]

ಚಾಕರ

 1. ಸೇವಕ

ಕನ್ನಡ[ಸಂಪಾದಿಸಿ]

ಚಾಕ್ರಿ

 1. ಸೇವೆ, ಕೆಲಸ, ಗುಲಮಿತನ, ಗುಲಮಗಿರಿ

ಕನ್ನಡ[ಸಂಪಾದಿಸಿ]

ಚಾವಡಿ

 1. ಮಂಟಪ, ಗುಡಿ

ಕನ್ನಡ[ಸಂಪಾದಿಸಿ]

ಚಕ್ಕಳ

 1. ಹಕ್ಕಳೆ, ಚರ್ಮದ ಒಣಗಿದ ಪರೆ, ಪಕಳೆ

ಕನ್ನಡ[ಸಂಪಾದಿಸಿ]

ಚಕ್ಕಂದ

 1. ವಿನೋದ, ಕುಶಾನ, ನೋಟಬೇಟ

ಕನ್ನಡ[ಸಂಪಾದಿಸಿ]

ಚಕ್ರಬಾಯಿ

 1. ಸಕ್ರೆಬಾಯಿ, ಸಕ್ಕರೆ ಬಾಯಿ, ಸವಿಸವಿಯಾಗಿ ಮಾತಾಡುವಿಕೆ ಗೊತ್ತಿರುವ ವ್ಯಕ್ತಿತ್ವ

ಕನ್ನಡ[ಸಂಪಾದಿಸಿ]

ಚಂಚಗಾರ

 1. ಸಂಚಕಾರ

ಕನ್ನಡ[ಸಂಪಾದಿಸಿ]

ಚರಪು

 1. ದೇವರ ನೈವೇದ್ಯ, ರಾಸಯನ, ಎಡೆ

ಕನ್ನಡ[ಸಂಪಾದಿಸಿ]

ಚರಿಗೆ

 1. ಚೌರಿಗೆ, ಚಂಬು, ಚೆಂಬು, ಚೊಂಬು

ಕನ್ನಡ[ಸಂಪಾದಿಸಿ]

ಚೆಳ್ಳ ನೀರು

 1. ಚೊಳ್ ನೀರು, ತಿಳಿ ಸಾರು, ನೀರು-ನಿಕ್ಕಟ್ಟು ಸಾರು, ನೀರಿನಂತೆ ತೆಳ್ಳಗಿರುವ ಸಾರು

ಕನ್ನಡ[ಸಂಪಾದಿಸಿ]

ಚೆಂಬು

 1. ಚಂಬು, ಚೊಂಬು, ತಾಮ್ರದ ಸಣ್ಣ ಪಾತ್ರೆ

ಕನ್ನಡ[ಸಂಪಾದಿಸಿ]

ಚೆಂಗಾಟ

 1. ಚೆಲ್ಲಾಟ

ಕನ್ನಡ[ಸಂಪಾದಿಸಿ]

ಚೆಂಗಲ್ಲು

 1. ಇಟ್ಟಿಗೆ, ಕೆಂಪು ಕಲ್ಲು

ಕನ್ನಡ[ಸಂಪಾದಿಸಿ]

ಚೆಟ್ಟಿ

 1. ಮಣ್ಣಿನ ಸಣ್ಣ ಪಾತ್ರೆ

ಕನ್ನಡ[ಸಂಪಾದಿಸಿ]

ಚೆಲ್ಲಿ

 1. ವಯ್ಯಾರಿ, ಚೆಂಗಾಬಿಂಗಿ ಹೆಣ್ಣು

ಕನ್ನಡ[ಸಂಪಾದಿಸಿ]

ಚಿಂದಿ

 1. ಹರಿದು ಜೂಲು ಜೂಲಾದ ಬಟ್ಟೆ

ಕನ್ನಡ[ಸಂಪಾದಿಸಿ]

ಚಿಂಪಿಗ

 1. ಬಟ್ಟೆ ಹೊಲಿಯುವವ

ಕನ್ನಡ[ಸಂಪಾದಿಸಿ]

ಚಿಣಿಚಿಗೆ

 1. ಅಳಿಲು, ಅಣಿಲು

ಕನ್ನಡ[ಸಂಪಾದಿಸಿ]

ಚಿಣಿಮಿಣಿಕಿ

 1. ಒಂದು ಕಡೆ ನಿಲ್ಲದ ಜೀವದವಳು

ಕನ್ನಡ[ಸಂಪಾದಿಸಿ]

ಚಿಟ್ಟ

 1. ಚಿಕ್ಕ, ಸಣ್ಣ

ಕನ್ನಡ[ಸಂಪಾದಿಸಿ]

ಚಿಟ್ಟಳ್ಳು

 1. ಚಿಕ್ಕ ಹರಳು, ಹರಳಿನ ಒಂದು ಬಗೆ

ಕನ್ನಡ[ಸಂಪಾದಿಸಿ]

ಚಿಟ್ಟು

 1. ತಲೆ ಬಿಸಿಯಾಗು, ಸಿಟ್ಟು/ಆವೇಶದಿಂದ ಏನೂ ಯೊಚನೆ ಮಾಡದಂತೆ ಆಗುವುದು, ॑: ತಲೆ ಚಿಟ್ಟು ಹಿಡಿ

ಕನ್ನಡ[ಸಂಪಾದಿಸಿ]

ಚಿಗರೆಲೆ

 1. ಚಿಗುರಾದ ವೀಳ್ಯದ ಎಲೆ

ಕನ್ನಡ[ಸಂಪಾದಿಸಿ]

ಚಿಗತುಕೊ

 1. ಚಿಗರಿಕೊಳ್ಳು, ಬೆಳೆಯು

ಕನ್ನಡ[ಸಂಪಾದಿಸಿ]

ಚಿಕ್ಕೊಂಡು

 1. ಜಿಗಿದುಕೊಂಡು

ಕನ್ನಡ[ಸಂಪಾದಿಸಿ]

ಚಿಲಕ

 1. ಬಾಗಿಲಿಗೆ ಹಾಕುವ ಅಗಳಿ

ಕನ್ನಡ[ಸಂಪಾದಿಸಿ]

ಚಿನ್ನವರಕೆ

 1. ಹೊಂಬಣ್ಣದ ಮಡಿಕೆ

ಕನ್ನಡ[ಸಂಪಾದಿಸಿ]

ಚಿನ್ನಿವಾರ

 1. ಚಿನ್ನ ಬೆಳ್ಳಿ ಕೆಲಸದವ, ಅಕ್ಕಸಾಲಿ

ಕನ್ನಡ[ಸಂಪಾದಿಸಿ]

ಚೊಳ್ನ

 1. ಚಲ್ಲಣ, ಚಡ್ಡಿ, ನಿಕ್ಕರ್

ಕನ್ನಡ[ಸಂಪಾದಿಸಿ]

ಚೊಗಟ

 1. ಚೊಕ್ಕಟ, ಅಚ್ಚುಗಟ್ಟು

ಕನ್ನಡ[ಸಂಪಾದಿಸಿ]

ಚೊಕ್ಕ

 1. ಶುದ್ಧ, ಮನೋಹರ, clean, neat

ಕನ್ನಡ[ಸಂಪಾದಿಸಿ]

ಚೊಕ್ಕಟಗಾತಿ

 1. ಪರಿಶುದ್ಧವಾಗಿ ಇರುವವಳು

ಕನ್ನಡ[ಸಂಪಾದಿಸಿ]

ದೋಳು

 1. ದೋಣು, ದೋಲು, ಡೊಲು, ಒಂದು ಬಗೆಯ ಚರ್ಮವಾದ್ಯ

ಕನ್ನಡ[ಸಂಪಾದಿಸಿ]

ದೋಣು

 1. ಮಗುಚಿದ ದೋಣಿಯಂತಿರುವ ಕಿಬ್ಬೊಟ್ಟೆ, ॑: ದೋಣು ತುಂಬಿತು

ಕನ್ನಡ[ಸಂಪಾದಿಸಿ]

ದೋಮೆ

 1. ಸೊಳ್ಳೆ

ಕನ್ನಡ[ಸಂಪಾದಿಸಿ]

ದಡಂಬಡಿಕೆ

 1. ಉದ್ರೇಕ, ಜೋರು

ಕನ್ನಡ[ಸಂಪಾದಿಸಿ]

ದಡೆ

 1. ೧೦ ಸೇರಿನ ತೂಕ

ಕನ್ನಡ[ಸಂಪಾದಿಸಿ]

ದಡಿ

 1. ಮರದ ಕೋಲು, ದೊಣ್ಣೆ

ಕನ್ನಡ[ಸಂಪಾದಿಸಿ]

ದಡ್ರ ಬುಡ್ರ

 1. ಆತುರಗಾರತನ, ಒರಟು ಒರಟಾದ ನಡವಳಿಕೆ

ಕನ್ನಡ[ಸಂಪಾದಿಸಿ]

ದಳೆದುಕೊ

 1. ಹೊಲಿದುಕೊಳ್ಳು

ಕನ್ನಡ[ಸಂಪಾದಿಸಿ]

ದಂಡೆ

 1. ಹತ್ತಿರ

ಕನ್ನಡ[ಸಂಪಾದಿಸಿ]

ದಂಡಿಗೆ

 1. ಪಲ್ಲಕ್ಕಿ

ಕನ್ನಡ[ಸಂಪಾದಿಸಿ]

ದಂಟು

 1. ಸೊಪ್ಪಿನ ಕಾಂಡ ಭಾಗ, stem of a plant

ಕನ್ನಡ[ಸಂಪಾದಿಸಿ]

ದಂಬ

 1. ಡಿಂಬ, ದೇಹ

ಕನ್ನಡ[ಸಂಪಾದಿಸಿ]

ದಂದ್ರಾಳಿ

 1. ದಂಧರಾಳಿ, ಹಿಡಿತವಿಲ್ಲದ ಕೈಯವಳು, ದುಂದು ವೆಚ್ಚ ಮಾಡುವವಳು, ಹೊಣೆಗಾರಿಕೆ ಅರಿಯದ ಹೆಂಗಸು

ಕನ್ನಡ[ಸಂಪಾದಿಸಿ]

ದಟ್ಟಿ

 1. ನಡುವಿಗೆ ಸುತ್ತುವ ಬಟ್ಟೆ, ಸಣ್ಣ ಪಂಚೆ

ಕನ್ನಡ[ಸಂಪಾದಿಸಿ]

ದಾಳಾದೂಳಿ

 1. ಸೂರೆಹೋಗುವುದು

ಕನ್ನಡ[ಸಂಪಾದಿಸಿ]

ದಾಂಡಿಗದಡಿ

 1. ಹೆಚ್ಚು ಒರಟಾಗಿ ಬಲವಾಗಿರುವವನು

ಕನ್ನಡ[ಸಂಪಾದಿಸಿ]

ದಾಟಗಾಲ

 1. ದಾಪುಗಾಲ

ಕನ್ನಡ[ಸಂಪಾದಿಸಿ]

ದಾವಳಿ

 1. ಉಣ್ಣೆ ವಸ್ತ್ರ

ಕನ್ನಡ[ಸಂಪಾದಿಸಿ]

ದಾವಣಿ

 1. ದನಗಳನ್ನು ಸಾಲಾಗಿ ಕಟ್ಟು/ವ ಜಾಗ, ಹಗ್ಗ

ಕನ್ನಡ[ಸಂಪಾದಿಸಿ]

ದಬ್ಬಣ

 1. ದಬ್ಬಳ, ದಪ್ಪ ಸೂಜಿ, ಗೋಣಿ ಚೀಲ ಮುಂತಾದವುಗಳನ್ನು ಹೊಲಿಯಲು ಬಳಸುವ ಸೂಜಿ

ಕನ್ನಡ[ಸಂಪಾದಿಸಿ]

ದದ್ದು

 1. ಒಡಕು, ಬಿರುಕು ಬಿಟ್ಟಿರುವುದು

ಕನ್ನಡ[ಸಂಪಾದಿಸಿ]

ದದ್ದು

 1. ಸೂಲು ಬಿಟ್ಟಿರುವುದು, ಬಿರುಕು ಬಿಟ್ಟಿರುವುದು, ಒಡೆದಿರುವುದು

ಕನ್ನಡ[ಸಂಪಾದಿಸಿ]

ದಗಡಿ

 1. ದಾಂಡಿಗ, ದಡೂತಿ ಆಸಾಮಿ

ಕನ್ನಡ[ಸಂಪಾದಿಸಿ]

ದಗರಿ

 1. ಪಕ್ಕೆಲುಬು, ಪಕ್ಕೆಮೂಳೆ, ribcage

ಕನ್ನಡ[ಸಂಪಾದಿಸಿ]

ದನುವು

 1. ದಣಿವು, ದಣು, ದನು, ಬಳಲಿಕೆ, ಆಸರು, ಆಯಾಸ

ಕನ್ನಡ[ಸಂಪಾದಿಸಿ]

ದಪ್ಪಾಗೆ

 1. ಜಾಸ್ತಿಯಾಗಿ

ಕನ್ನಡ[ಸಂಪಾದಿಸಿ]

ದಪ್ಪಸ್ತಾನ

 1. ದೊಡ್ಡಸ್ತಿಕೆ, ಶ್ರೀಮಂತಿಕೆ, ದಪ್ಪಸ್ಥಾನ, ದೊಡ್ಡ ಸ್ಥಾನ

ಕನ್ನಡ[ಸಂಪಾದಿಸಿ]

ದರವೇಸಿ

 1. ಸೋಮಾರಿ,

ಕನ್ನಡ[ಸಂಪಾದಿಸಿ]

ದಿಂಡುಗದ ಮೆಳೆ

 1. ಒಂದು ಜಾತಿಯ ಸಣ್ಣದಾದ ಕಾಡು ಮರ

ಕನ್ನಡ[ಸಂಪಾದಿಸಿ]

ದವನ

 1. ಜವನ, ಸುವಾಸನೆಯ ಗಿಡ

ಕನ್ನಡ[ಸಂಪಾದಿಸಿ]

ದವತಿ

 1. ದೋತಿ, ಬಟ್ಟೆ

ಕನ್ನಡ[ಸಂಪಾದಿಸಿ]

ದವುತಿ

 1. ಮಸಿ ಮಡಿಕೆ

ಕನ್ನಡ[ಸಂಪಾದಿಸಿ]

ದೆಬ್ಬೆ

 1. ಬೊಂಬಿನ ಸಣ್ಣ ಸಣ್ಣ ಭಾಗಗಳು

ಕನ್ನಡ[ಸಂಪಾದಿಸಿ]

ದಿಳ್ಳಿ

 1. ದೆಹಲಿ

ಕನ್ನಡ[ಸಂಪಾದಿಸಿ]

ದಿಮ್ಮಿ

 1. ಮರದ ದೊಡ್ಡ ದೊಡ್ಡ ಭಾಗಗಳು, ॑: ಮರದ ದಿಮ್ಮಿ

ಕನ್ನಡ[ಸಂಪಾದಿಸಿ]

ದಿನಂಪರ್ತಿ

 1. ದಿನಂಪ್ರತಿ, ಪ್ರತಿದಿನ, ಪ್ರತಿ ಹಗಲು

ಕನ್ನಡ[ಸಂಪಾದಿಸಿ]

ದೊಡ್ಡಿ

 1. ಒಕ್ಕಲು, ॑: ದನದ ದೊಡ್ಡಿ

ಕನ್ನಡ[ಸಂಪಾದಿಸಿ]

ದೊಳ್ಳು

 1. ಡೊಳ್ಳು, ಬೊಜ್ಜು

ಕನ್ನಡ[ಸಂಪಾದಿಸಿ]

ದೊಂಬಿ

 1. ಜಗಳ

ಕನ್ನಡ[ಸಂಪಾದಿಸಿ]

ದೊಂದಿ

 1. ಪಂಜು

ಕನ್ನಡ[ಸಂಪಾದಿಸಿ]

ದೊಂಕಳಾಟ

 1. ಡೊಂಕಲಾದ ಆಟ, ನೇರವಲ್ಲದ ಕೆಲಸಕಾರ್ಯ, ಕ್ರಮವಿಲ್ಲದಿರುವಿಕೆ

ಕನ್ನಡ[ಸಂಪಾದಿಸಿ]

ದೊಣೆ

 1. ಕೊಳ

ಕನ್ನಡ[ಸಂಪಾದಿಸಿ]

ದೊಗರದೊಟ್ಟೆ

 1. ಬಾನಿಹೊಟ್ಟೆ, ದೊಡ್ದಹೊಟ್ಟೆ

ಕನ್ನಡ[ಸಂಪಾದಿಸಿ]

ದ್ರಾಬೆ

 1. ಬುದ್ದಿಹೀನ, ಹೆಡ್ಡ, ದಾಸ (ಬೈಗುಳ)

ಕನ್ನಡ[ಸಂಪಾದಿಸಿ]

ದುಡ

 1. ದೃಡ, ಗಟ್ಟಿಮನಸ್ಸು, ॑: ದುಡವಂತೆ

ಕನ್ನಡ[ಸಂಪಾದಿಸಿ]

ದುಡವಂತೆ

 1. ದೃಡವಂತೆ, ಸ್ಥಿರಮನಸ್ಸು ಉಳ್ಳವಳು, ಪತಿವ್ರತೆ

ಕನ್ನಡ[ಸಂಪಾದಿಸಿ]

ದುಡಿಲು

 1. ಪರಿಶ್ರಮ, ವೃತ್ತಿ

ಕನ್ನಡ[ಸಂಪಾದಿಸಿ]

ದುಂಡಿ

 1. ಮೈ ಕೈ ತುಂಬಿಕೊಂಡಿರುವವಳು, ದುಂಡಾಗಿ ಇರುವವಳು

ಕನ್ನಡ[ಸಂಪಾದಿಸಿ]

ದುಗ್ಗಾಣೆ

 1. ಎರಡು ಕಾಸುಗಳ ನಾಣ್ಯ

ಕನ್ನಡ[ಸಂಪಾದಿಸಿ]

ದುಹಿ

 1. ದ್ವೇಷ, ದುಷ್ಟತನ

ಕನ್ನಡ[ಸಂಪಾದಿಸಿ]

ದುಪಟಿ

 1. ಬಟ್ಟೆ, ದುಪ್ಪಟ, ಹೊದಿಕೆ

ಕನ್ನಡ[ಸಂಪಾದಿಸಿ]

ದುಸ್ತು

 1. ಬಟ್ಟೆ

ಕನ್ನಡ[ಸಂಪಾದಿಸಿ]

ದ್ಯಾವಾಂಗ

 1. ದೇವಾಂಗ, ರೇಷ್ಮೆ ಬಟ್ಟೆ

ಕನ್ನಡ[ಸಂಪಾದಿಸಿ]

ಎಡಾಣಿ

 1. ಜಾಮೀನು ನಿಲ್ಲುವಿಕೆ, ಮಧ್ಯಸ್ಥಿಕೆಯ ಪರಿಪಾಟಲು

ಕನ್ನಡ[ಸಂಪಾದಿಸಿ]

ಎಡಾಗಲು

 1. ಎಡ ಹಗಲು, ಸಂಜೆ ಸುಮಾರು ಮೂರು ಗಂಟೆಯ ಸಮಯ

ಕನ್ನಡ[ಸಂಪಾದಿಸಿ]

ಎಡಚರೆ

 1. ಎಡಗಡೆ, ಎಡಭಾಗದಲ್ಲಿ

ಕನ್ನಡ[ಸಂಪಾದಿಸಿ]

ಎಡಗಾಲ

 1. ಅಕಾಲ, ಕಾಲವಲ್ಲದ ಕಾಲ

ಕನ್ನಡ[ಸಂಪಾದಿಸಿ]

ಎಡವಟ್ಟ

 1. ಕೆಲಸಕ್ಕೆ ಬಾರದವ

ಕನ್ನಡ[ಸಂಪಾದಿಸಿ]

ಎಡವಟ್ಟು

 1. ಹೆಡ್ಡತನ, ಮೂರ್ಖತನ

ಕನ್ನಡ[ಸಂಪಾದಿಸಿ]

ಎಡೆ

 1. ಸಂದಿ, ಎರಡು ವಸ್ತುಗಳ ನಡುವಣ ಜಾಗ, ದೇವರ ಪೂಜೆಗೆಂದು (ಸಾಮಗ್ರಿಗಳ ಜತೆಗೆ) ಮೀಸಲಿಟ್ಟ ಆಹಾರ ಪದಾರ್ಥಗಳು

ಕನ್ನಡ[ಸಂಪಾದಿಸಿ]

ಎಡುಕ್ಲು

 1. ಇಕ್ಕಟ್ಟಾದ ಸ್ಥಳ

ಕನ್ನಡ[ಸಂಪಾದಿಸಿ]

ಎಂಜಲು

 1. ಉಂಡ ಜಾಗ, ಮೈಲಿಗೆ, ಊತಮಾಡಿದ ತಟ್ಟೆಯಲ್ಲಿ ಉಳಿದದ್ದು

ಕನ್ನಡ[ಸಂಪಾದಿಸಿ]

ಎಣೆ

 1. ನೆಪ, ನೆವ

ಕನ್ನಡ[ಸಂಪಾದಿಸಿ]

ಎಟಕು

 1. ಸಾಕಾಗು

ಕನ್ನಡ[ಸಂಪಾದಿಸಿ]

ಎಬ್ಬಿಬ್ಬಗಾರ

 1. ಬಡಾಯ ಕೊಚ್ಚುವವ, ಎಲ್ಲವನ್ನು ಉತ್ಪ್ರೇಕ್ಷಿಸುವವ

ಕನ್ನಡ[ಸಂಪಾದಿಸಿ]

ಯಾಮಾರು

 1. ಎಚ್ಚರ ತಪ್ಪು, ಏಮಾರು
  ಯಾಮಾರ ಬೇಡ

ಕನ್ನಡ[ಸಂಪಾದಿಸಿ]

ಎದಾಲು

 1. ಎದೆಯ ಹಾಲು, ಮಕ್ಕಳ ತಾಯಂದಿರ ಮೊಲೆಹಾಲು

ಕನ್ನಡ[ಸಂಪಾದಿಸಿ]

ಎದೆಗುದಿ

 1. ತಳಮಳ, ವ್ಯಥೆ

ಕನ್ನಡ[ಸಂಪಾದಿಸಿ]

ಎಕ್ಕಾಸ

 1. ಪ್ರಯಾಸ, ಬಹಳ ಕಷ್ಟ

ಕನ್ನಡ[ಸಂಪಾದಿಸಿ]

ಎಕ್ಕುಟ್ಟಿ ಹೋಗು

 1. ಹಾಳಾಗಿ ಹೋಗು, ನಾಶವಾಗಿ ಹೋಗು, ಮನೆಯ ಅಂಗಳದಲ್ಲಿ ಎಕ್ಕದ ಗಿಡ ಹುಟ್ಟಿ ಮನೆ/ವಂಶ ನಾಶವಾಗಲಿ

ಕನ್ನಡ[ಸಂಪಾದಿಸಿ]

ಎಲ್ಮಡಗ್ಲಿ

 1. ಎಲ್ಲಿ ಮಡಗಲಿ?, ಎಲ್ಲಿಡಲಿ? ॑: ನಂದು ಎಲ್ಮಡಗ್ಲಿ ಅಂತ ಬಂದ್’ಬಿಡ್ತಾನೆ

ಕನ್ನಡ[ಸಂಪಾದಿಸಿ]

ಎಲು

 1. ಎಲ, ಎಲುಬು, ಮೂಳೆ

ಕನ್ನಡ[ಸಂಪಾದಿಸಿ]

ಎರೇ ಹೊಲ

 1. ಕಪ್ಪು ಮಣ್ಣಿನ ಹೊಲ

ಕನ್ನಡ[ಸಂಪಾದಿಸಿ]

ಎರಬಾಳು

 1. ಹೆರಬಾಳು, ಪರಾವಲಂಬಿ ಬದುಕು, ಬೇರೆಯವರನ್ನು ಆಶ್ರಯಿಸಿ ಬದುಕಬೇಕಾದ ಸ್ಥಿತಿ

ಕನ್ನಡ[ಸಂಪಾದಿಸಿ]

ಎರವು

 1. ಕೈಗಡ, ಸಾಲ

ಕನ್ನಡ[ಸಂಪಾದಿಸಿ]

ಎರವು

 1. ಸಾಲ

ಕನ್ನಡ[ಸಂಪಾದಿಸಿ]

ಎರೆ

 1. ದಾನ ಮಾಡು, ಅರ್ಪಿಸು

ಕನ್ನಡ[ಸಂಪಾದಿಸಿ]

ಎಸರು

 1. ಸಾರು, ಉದಕ

ಕನ್ನಡ[ಸಂಪಾದಿಸಿ]

ಗೇದುಣ್ಣು

 1. ದುಡಿದು ಉಣ್ಣು

ಕನ್ನಡ[ಸಂಪಾದಿಸಿ]

ಗೀಕನ

 1. ಪೆಟ್ಟು, ಏಟು

ಕನ್ನಡ[ಸಂಪಾದಿಸಿ]

ಗೋಳಿ

 1. ಆಲದ ಮರ

ಕನ್ನಡ[ಸಂಪಾದಿಸಿ]

ಗೋಣಿ

 1. ನಾರಿನ ತಟ್ಟು, ಚೀಲ

ಕನ್ನಡ[ಸಂಪಾದಿಸಿ]

ಗೋಟಡಕೆ

 1. ಬಲಿತ ಹಾಗೂ ಹಲ್ಲಿಗೆ ಸವೆಯದ ಅಡಕೆ

ಕನ್ನಡ[ಸಂಪಾದಿಸಿ]

ಗೋಟು

 1. ಕಳಪೆ, ಹುಣಿಸೆ ಹಣ್ಣಿನ ಸಣ್ಣ ಚೀಕು

ಕನ್ನಡ[ಸಂಪಾದಿಸಿ]

ಗೋಟು

 1. ಮೊರದ ಒಂದು ಮೂಲೆ

ಕನ್ನಡ[ಸಂಪಾದಿಸಿ]

ಗೋಮು

 1. ಸಾವಿರಕಾಲಿನ ಜರಿ

ಕನ್ನಡ[ಸಂಪಾದಿಸಿ]

ಗೋನಿ

 1. ಗೋಣಿಚೀಲ, ನಾರಿನ ಕಟ್ಟು

ಕನ್ನಡ[ಸಂಪಾದಿಸಿ]

ಗೋರು

 1. ಕೈಯಿಂದ ಬಾಚು, ಬಳಿ, ಒಂದೆಡೆಗೆ ಕೂಡಿಸು

ಕನ್ನಡ[ಸಂಪಾದಿಸಿ]

ಗೂಡೆ

 1. ಗೂನು

ಕನ್ನಡ[ಸಂಪಾದಿಸಿ]

ಗೂಳಿ

 1. ಕೊಬ್ಬಿದ ಎತ್ತು, ಹೋರಿ

ಕನ್ನಡ[ಸಂಪಾದಿಸಿ]

ಗೂಟ

 1. ಮರದ ದಡಿ, ಮರದ ಬೆಣೆ

ಕನ್ನಡ[ಸಂಪಾದಿಸಿ]

ಗೂದೆ

 1. pistula

ಕನ್ನಡ[ಸಂಪಾದಿಸಿ]

ಗಡವ

 1. ದಪ್ಪಗೆ ಇರುವ ಗಂಡು ಮಂಗ

ಕನ್ನಡ[ಸಂಪಾದಿಸಿ]

ಗಡವಿಲ್ಲ

 1. ಗಡವು ಇಲ್ಲದೆ, ತಡವಿಲ್ಲದೆ, notime, in no time, without anytime

ಕನ್ನಡ[ಸಂಪಾದಿಸಿ]

ಗಡಿಗೆ

 1. ಕೊಡ, ನೀರು ತರುವ ಮಣ್ಣಿನ ಪಾತ್ರೆ

ಕನ್ನಡ[ಸಂಪಾದಿಸಿ]

ಗಳ

 1. ಬಿದಿರಿನ ನೀಳ ಕೋಲು, bamboo, ಬಂಬ್

ಕನ್ನಡ[ಸಂಪಾದಿಸಿ]

ಗಂಡೈಕಳು

 1. ಗಂಡು ಹೈಕಳು, ಗಂಡು ಹುಡುಗರು

ಕನ್ನಡ[ಸಂಪಾದಿಸಿ]

ಗಂಟಗಲ ಮೋರೆ

 1. ಗಂಟು ಹಾಕಿಕೊಂಡಿರುವ ಮುಖ

ಕನ್ನಡ[ಸಂಪಾದಿಸಿ]

ಗಂದದುಡಿ

 1. ಗಂಧದ ಹುಡಿ

ಕನ್ನಡ[ಸಂಪಾದಿಸಿ]

ಗಂಗಳ

 1. ಊಟ ಮಾಡುವ ತಟ್ಟೆ, ತಣಿಗೆ, ತಾಟು, ತಳಿಗೆ

ಕನ್ನಡ[ಸಂಪಾದಿಸಿ]

ಗಂಗರ

 1. ಗಗ್ಗರ, ಗೆಜ್ಜೆ

ಕನ್ನಡ[ಸಂಪಾದಿಸಿ]

ಗಂಹರ

 1. ಕೃತ್ರಿಮ, ಕಪಟ

ಕನ್ನಡ[ಸಂಪಾದಿಸಿ]

ಗಂಜೀಪು

 1. ಇಸ್ಪೀಟು

ಕನ್ನಡ[ಸಂಪಾದಿಸಿ]

ಗಟ್ಟ

 1. ಘಟ್ಟ, ಬೆಟ್ಟಗುಡ್ಡಗಳ ಪ್ರದೇಶ

ಕನ್ನಡ[ಸಂಪಾದಿಸಿ]

ಗಟ್ಟಿಸು

 1. ಹೊಡೆಯು

ಕನ್ನಡ[ಸಂಪಾದಿಸಿ]

ಗಾಗಿ

 1. ಏನೂ ಅರಿಯದವಳು, ಪೆದ್ದಿ, ದಡ್ಡಿ

ಕನ್ನಡ[ಸಂಪಾದಿಸಿ]

ಗಾಲಿ

 1. ಗಾಡಿಯ ಚಕ್ರ, a wheel

ಕನ್ನಡ[ಸಂಪಾದಿಸಿ]

ಗಾಸಿ

 1. ತೊಂದರೆ, ಉಪದ್ರವ, ಗಾಯ

ಕನ್ನಡ[ಸಂಪಾದಿಸಿ]

ಗಭಸ್ತಿ

 1. ಕಾಂತಿ

ಕನ್ನಡ[ಸಂಪಾದಿಸಿ]

ಗದ್ಗೆ

 1. ಗದ್ದುಗೆ, ಪೀಠ

ಕನ್ನಡ[ಸಂಪಾದಿಸಿ]

ಗದ್ಯಾಣ

 1. ಚಿನ್ನದ ಒಂದು ನಾಣ್ಯ

ಕನ್ನಡ[ಸಂಪಾದಿಸಿ]

ಗಜಗಂಟು

 1. ಕಗ್ಗಂಟು, ಆನೆಯಷ್ಟು ದಪ್ಪ ಗಂಟು, ಗೋಜಲು

ಕನ್ನಡ[ಸಂಪಾದಿಸಿ]

ಗಲೀತ

 1. ಏಟು

ಕನ್ನಡ[ಸಂಪಾದಿಸಿ]

ಗಮಲ

 1. ಸುವಾಸನೆ, ಪರಿಮಳ

ಕನ್ನಡ[ಸಂಪಾದಿಸಿ]

ಗನ್ನ

 1. ಮೋಸ, ಕನ್ನ

ಕನ್ನಡ[ಸಂಪಾದಿಸಿ]

ಗಸಣಿ

 1. ತೊಂದರೆ

ಕನ್ನಡ[ಸಂಪಾದಿಸಿ]

ಗಸಿ

 1. ಎಣ್ಣೆ ಅಥವಾ ಬೆಣ್ಣೆಯ ಉಳಿದ ಚರಟ

ಕನ್ನಡ[ಸಂಪಾದಿಸಿ]

ಗವಲಿಗಶೆಟ್ಟಿ

 1. ಬಟ್ಟೆ ನೇಯುವವನು

ಕನ್ನಡ[ಸಂಪಾದಿಸಿ]

ಗವಸಣಿಗೆ

 1. ಹೊದಿಕೆ, ಮುಸುಕು

ಕನ್ನಡ[ಸಂಪಾದಿಸಿ]

ಗವಿ

 1. ಗುಹೆ

ಕನ್ನಡ[ಸಂಪಾದಿಸಿ]

ಗವುಳಿ

 1. ಹಲ್ಲಿ

ಕನ್ನಡ[ಸಂಪಾದಿಸಿ]

ಗವ್ಯ

 1. ಹಾಲು ಮೊಸರು ಮೊದಲಾದವು, any of milk products

ಕನ್ನಡ[ಸಂಪಾದಿಸಿ]

ಗೆಡ್ಡೆ

 1. ಗಡ್ಡೆ, ಗೆಣಸು

ಕನ್ನಡ[ಸಂಪಾದಿಸಿ]

ಗೆಣೆನೇಗಿಲು

 1. ಸವೆದುಹೋದ ನೇಗಿಲು

ಕನ್ನಡ[ಸಂಪಾದಿಸಿ]

ಗೆಳಮೆ

 1. ಗೆಳೆತನ

ಕನ್ನಡ[ಸಂಪಾದಿಸಿ]

ತುಡಿತ

 1. ಸ್ಪಂದನ

ಕನ್ನಡ[ಸಂಪಾದಿಸಿ]

ಗೆಪ್ಪೆ

 1. ಗುಪ್ಪೆ, ರಾಶಿ

ಕನ್ನಡ[ಸಂಪಾದಿಸಿ]

ಗೆರಸೆ

 1. ಮೊರ

ಕನ್ನಡ[ಸಂಪಾದಿಸಿ]

ಗೆರೆ ಎಳೆ

 1. draw a line

ಕನ್ನಡ[ಸಂಪಾದಿಸಿ]

ಗಿಡ್ಡ

 1. ಕುಳ್ಳ, ಚಿಕ್ಕ

ಕನ್ನಡ[ಸಂಪಾದಿಸಿ]

ಗಿಡ್ಡಿ

 1. ಕುಳ್ಳಿ, ಕುಬ್ಜ ವಾಗಿರುವವಳು

ಕನ್ನಡ[ಸಂಪಾದಿಸಿ]

ಗಿಡ

 1. ಸಸ್ಯ

ಕನ್ನಡ[ಸಂಪಾದಿಸಿ]

ಗಿಡದಿರಬೇಕು

 1. ತುಂಬಿರಬೇಕು

ಕನ್ನಡ[ಸಂಪಾದಿಸಿ]

ಗಿಡಗುದ್ದಲಿ

 1. ಚಿಕ್ಕ ಗುದ್ದಲಿ

ಕನ್ನಡ[ಸಂಪಾದಿಸಿ]

ಗಿಂಬಳ

 1. ಲಂಚ

ಕನ್ನಡ[ಸಂಪಾದಿಸಿ]

ಗಿಣ್ಣು

 1. ಗೆಣ್ಣು, ಕಬ್ಬು, ಬಿದಿರು ಮೊದಲಾದವುಗಳಲ್ಲಿರುವ ಭಾಗಗಳ ಗಂಟು, ಸಂಧು

ಕನ್ನಡ[ಸಂಪಾದಿಸಿ]

ಗಿಜರ್ ಗಣ್ಣು

 1. ಕಿಸರು ಗಣ್ಣು, ತೊಳೆಯದ ಕಣ್ಣು, ಗಿಜರೆ ಕಣ್ಣು, ಕೀಸರು ಕಣ್ಣು

ಕನ್ನಡ[ಸಂಪಾದಿಸಿ]

ಗಿಲಕಿ

 1. ಗಣ ಗಣ ಸದ್ದು ಮಾಡುವ ಮಕ್ಕಳ ಆಟಿಕೆ ಸಾಮಾನು

ಕನ್ನಡ[ಸಂಪಾದಿಸಿ]

ಗಿಲಿಗಿಲಿ

 1. ಕ್ರಿಯಾತ್ಮಕವಾಗಿರು, ಲವಲವಿಕೆಯಲ್ಲಿರು

ಕನ್ನಡ[ಸಂಪಾದಿಸಿ]

ಗಿರಿಗಿಟ್ಟೆ

 1. ಗಿರಿಗಿರಿ ಶಬ್ದ ಮಾಡುವ ಮಕ್ಕಳ ಆಟದ ಸಾಮಾನು

ಕನ್ನಡ[ಸಂಪಾದಿಸಿ]

ಗೊಡ್ಡು

 1. ಬಂಜೆ

ಕನ್ನಡ[ಸಂಪಾದಿಸಿ]

ಗೊಡವೆ

 1. ಸಂಬಂಧ, ಸಂಪರ್ಕ

ಕನ್ನಡ[ಸಂಪಾದಿಸಿ]

ಗೊಂಡಗರ

 1. ಕೊಂಬು ಬರದ ಕರು

ಕನ್ನಡ[ಸಂಪಾದಿಸಿ]

ಗೊಂಡೆ

 1. ಹೂವಿನ ಕುಚ್ಚು

ಕನ್ನಡ[ಸಂಪಾದಿಸಿ]

ಗೊಂಗಡಿ

 1. ಕಂಬಳಿ

ಕನ್ನಡ[ಸಂಪಾದಿಸಿ]

ಗೊಣ್ಣೆ

 1. ಸಿಂಬಳ, ಮೂಗಿನಿಂದ ಒಸರುವ ಜಲ

ಕನ್ನಡ[ಸಂಪಾದಿಸಿ]

ಗೊಟ್ಟಕೆರೆ

 1. ಬತ್ತಿದ ಕೆರೆ

ಕನ್ನಡ[ಸಂಪಾದಿಸಿ]

ಗೊಟ್ಟು

 1. ದುರ್ಲಭ

ಕನ್ನಡ[ಸಂಪಾದಿಸಿ]

ಗೊಬ್ಬು

 1. ಗಬ್ಬು, ಹೊಲಸು

ಕನ್ನಡ[ಸಂಪಾದಿಸಿ]

ಗೊದ್ದ

 1. ಕರಿ ಬಣ್ಣದ ದೊಡ್ಡ ಕಟ್ಟಿರುವೆ

ಕನ್ನಡ[ಸಂಪಾದಿಸಿ]

ಗೊಜ್ಜುಬಟ್ಟೆ

 1. ಮಕ್ಕಳ ಕಕ್ಕಸ್ಸು/ಇಸ್ಸಿ ಸೀಟಿದ ಬಟ್ಟೆ

ಕನ್ನಡ[ಸಂಪಾದಿಸಿ]

ಗೊಲಸು

 1. ಒಂದು ಬಗೆಯ ಆಭರಣ

ಕನ್ನಡ[ಸಂಪಾದಿಸಿ]

ಗೊನೆ

 1. ಹಣ್ಣಿನ ತೆನೆ, ಗೊಂಚಲು

ಕನ್ನಡ[ಸಂಪಾದಿಸಿ]

ಗೊಪ್ಪೆ

 1. ಹುಲ್ಲಿನ ಸಣ್ಣ ರಾಶಿ

ಕನ್ನಡ[ಸಂಪಾದಿಸಿ]

ಗೊಪ್ಪೆ

 1. ಮಳೆಯಿಂದ ನೆನೆಯದಂತೆ ಗೋಣಿಚೀಲದಿಂದ ಮಾಡಿಕೊಂಡ ಸಾಧನ, ಗೋಮಟೆ

ಕನ್ನಡ[ಸಂಪಾದಿಸಿ]

ಗೊರಟೆ

 1. ಗೋರಂಟೆ ಗಿಡ, ಗೋರಂಟಿ, ಮೆಹಂದಿ

ಕನ್ನಡ[ಸಂಪಾದಿಸಿ]

ಗೊರಗು

 1. ಮಳೆಯಲ್ಲಿ ನೆನೆಯದಂತೆ ಮಾಡಿರುವ ತೆಂಗಿನ ಮಟ್ಟೆಯ ಗೊಪ್ಪೆ

ಕನ್ನಡ[ಸಂಪಾದಿಸಿ]

ಗೊರೆ

 1. ಗೊರಕೆ

ಕನ್ನಡ[ಸಂಪಾದಿಸಿ]

ಗ್ರಾಚಾರ

 1. ಹಣೆಬರಹ, ಅಣೆಬರ, ಗ್ರಹಚಾರ, ದುರಾದೃಶ್ಟ

ಕನ್ನಡ[ಸಂಪಾದಿಸಿ]

ಗುಡ್’ಗುಡಿ

 1. ಹುಕ್ಕಾ

ಕನ್ನಡ[ಸಂಪಾದಿಸಿ]

ಗುಡ್ಡೆ

 1. ರಾಶಿ

ಕನ್ನಡ[ಸಂಪಾದಿಸಿ]

ಗುಡಾಣ

 1. ಧಾನ್ಯ ತುಂಬಲು ಮಾಡಿದ ಮಣ್ಣಿನ ದೊಡ್ಡ ಸಾಧನ, a godown

ಕನ್ನಡ[ಸಂಪಾದಿಸಿ]

ಗುಡಮೋಣಿ

 1. (ಬೈಗುಳ) ಬಜಾರಿ ಹೆಂಗಸು

ಕನ್ನಡ[ಸಂಪಾದಿಸಿ]

ಗುಡಿಕಾರ

 1. ಬಣ್ಣಗಾರ, ಚಿತ್ರಕಾರ

ಕನ್ನಡ[ಸಂಪಾದಿಸಿ]

ಗುಳ್ಳೆ ಲಕ್ಕ

 1. ಗುಳ್ಳೆ ನರಿ

ಕನ್ನಡ[ಸಂಪಾದಿಸಿ]

ಗುಳಕಾಯಿ

 1. ಸಾರಿಗೆ ಉಪಯೋಗಿಸುವ ಒಂದು ರೀತಿ ಗುಂಡಾಗಿರುವ ಕಾಯಿ

ಕನ್ನಡ[ಸಂಪಾದಿಸಿ]

ಗುಂಡೂರ್ಗೆ

 1. ದುಂಡಗೆ, ಗೋಳಾಕಾರ

ಕನ್ನಡ[ಸಂಪಾದಿಸಿ]

ಗುಂಡಿ

 1. ಗುಳಿ, ಹಳ್ಳ

ಕನ್ನಡ[ಸಂಪಾದಿಸಿ]

ಗುಂಡಿಗೆ

 1. ಹೃದಯ, ಧೈರ್ಯ, ಎದೆಗಾರಿಕೆ

ಕನ್ನಡ[ಸಂಪಾದಿಸಿ]

ಗುಂಡು

 1. ಕಲ್ಲಿನ/ಕಬ್ಬಿಣದ ಗುಂಡು, a sphere

ಕನ್ನಡ[ಸಂಪಾದಿಸಿ]

ಗುಂಚಕ್ಕಿ

 1. ಗುಬ್ಬಿ, ಗುಬ್ಬಚ್ಚಿ

ಕನ್ನಡ[ಸಂಪಾದಿಸಿ]

ಗುಂಡಕಲ್ಲು

 1. ಕಾರ ಅರೆಯುವ ದುಂಡನೆಯ ಕಲ್ಲು

ಕನ್ನಡ[ಸಂಪಾದಿಸಿ]

ಗುಂಗರಿಸು

 1. ಎಳೆದಾಡು

ಕನ್ನಡ[ಸಂಪಾದಿಸಿ]

ಗುಂಗುರು

 1. ಸೊಳ್ಳೆಯಂತಿರುವ ಕೀಟ

ಕನ್ನಡ[ಸಂಪಾದಿಸಿ]

ಗುಂಜಿ

 1. ಒಂದು ಕಾಳಿನ ತೂಕ, ಗುಲಗುಂಜಿ

ಕನ್ನಡ[ಸಂಪಾದಿಸಿ]

ಗುಣಿ

 1. ಗುಳಿ

ಕನ್ನಡ[ಸಂಪಾದಿಸಿ]

ಗುಟರೆ

 1. ಗೂಳಿಯ ಆರ್ಭಟ

ಕನ್ನಡ[ಸಂಪಾದಿಸಿ]

ಗುದ್ದ

 1. ಗುಳಿ

ಕನ್ನಡ[ಸಂಪಾದಿಸಿ]

ಗುದ್ದಲಿ

 1. ಅಗೆಯಲು ಬಳಸುವ ಕಬ್ಬಿಣದ ಸಾಧನ

ಕನ್ನಡ[ಸಂಪಾದಿಸಿ]

ಗುದ್ದು

 1. ಮುಟ್ಟಿಯಿಂದ ಹೊಡೆಯುವಿಕೆ, a punch, to punch

ಕನ್ನಡ[ಸಂಪಾದಿಸಿ]

ಗುದಿಗೆ

 1. ದಡಿ, ಬಡಿಗೆ

ಕನ್ನಡ[ಸಂಪಾದಿಸಿ]

ಗುಗ್ಗೆ

 1. ಗುಗ್ಗಳ, ಕಿವಿಯಲ್ಲಿನ ಕಸ/ಕೊಳೆ

ಕನ್ನಡ[ಸಂಪಾದಿಸಿ]

ಗುಗ್ಗುರಿ

 1. ಧಾನ್ಯಗಳನ್ನು ಹುರಿದು ಮಾಡಿದ ತಿಂಡಿ

ಕನ್ನಡ[ಸಂಪಾದಿಸಿ]

ಗುಜ್ಜು

 1. ಕೂಚು

ಕನ್ನಡ[ಸಂಪಾದಿಸಿ]

ಗುಲ್ಲು

 1. ಗಲಾಟೆ, hubbub

ಕನ್ನಡ[ಸಂಪಾದಿಸಿ]

ಗುಮಾನಿ

 1. ಅನುಮಾನ, ಸಂಶಯ, a hint, a clue

ಕನ್ನಡ[ಸಂಪಾದಿಸಿ]

ಗುಮಾನಿಲ್ಲ

 1. (ಎಲ್ಲಿದೆ ಎನ್ನುವ ಬಗ್ಗೆ) ಗುಮಾನಿಯೂ ಸಹ ಇಲ್ಲದ, hintless, clueless

ಕನ್ನಡ[ಸಂಪಾದಿಸಿ]

ಗುಮ್ಮಗಟ್ಟು

 1. ಗುಂಪುಗಟ್ಟು, ಸಂದಣಿಯಲ್ಲಿ ಸೇರು

ಕನ್ನಡ[ಸಂಪಾದಿಸಿ]

ಗುಮ್ಮು

 1. ತಿವಿ, to pound

ಕನ್ನಡ[ಸಂಪಾದಿಸಿ]

ಗುತ್ತಿಗೆ

 1. ಜಮೀನು ಇತ್ಯಾದಿಗಳನ್ನು ಪೂರ್ಣ ಸ್ವಾಧೀನಕ್ಕೆ ತಂದುಕೊಳ್ಳುವುದು, contract

ಕನ್ನಡ[ಸಂಪಾದಿಸಿ]

ಗ್ವಳ್ಳೆ

 1. ಗೊಳ್ಳೆ, ಗುದದ್ವಾರ, ಮುಕುಳಿ ಕುಡಿ

ಕನ್ನಡ[ಸಂಪಾದಿಸಿ]

ಗ್ಯಾನ

 1. ಜ್ಞಾನ, ಎಚ್ಚರ, ಸುತ್ತಮುತ್ತಲ ಪರಿವು

ಕನ್ನಡ[ಸಂಪಾದಿಸಿ]

ಹೇಳಿಗೆ

 1. ಹಾವಿನ ಕುಕ್ಕೆ, ಪೆಟ್ಟಿಗೆ

ಕನ್ನಡ[ಸಂಪಾದಿಸಿ]

ಹೇವ

 1. ಅಸಹ್ಯ, ಅಸಂಯ್ಯ

ಕನ್ನಡ[ಸಂಪಾದಿಸಿ]

ಹೀಚು

 1. ಹಣ್ಣಾಗದಿರುವ ಕಸುಗಾಯಿ

ಕನ್ನಡ[ಸಂಪಾದಿಸಿ]

ಹೋಟೆ

 1. ಪೋಟೆ, ಮರದ ಪೊಟರೆ

ಕನ್ನಡ[ಸಂಪಾದಿಸಿ]

ಹೂಡೇವು

 1. ಬತೇರಿ, ಕೋಟೆ

ಕನ್ನಡ[ಸಂಪಾದಿಸಿ]

ಹೂಣು

 1. ಹೂಳು

ಕನ್ನಡ[ಸಂಪಾದಿಸಿ]

ಹಡಪ

 1. ಸಣ್ಣ ಚೀಲ

ಕನ್ನಡ[ಸಂಪಾದಿಸಿ]

ಹಡಿಕೆ

 1. ಕೆಟ್ಟ ನಾತ

ಕನ್ನಡ[ಸಂಪಾದಿಸಿ]

ಹಳಸ್ಕೋತು

 1. ಹಳಸಿಕೊಂಡಿತು, ಕೆಟ್ಟು ಹೋಯಿತು

ಕನ್ನಡ[ಸಂಪಾದಿಸಿ]

ಹಂಗಾಮ

 1. ಬರಗಾಲ, ಕ್ಷಾಮ

ಕನ್ನಡ[ಸಂಪಾದಿಸಿ]

ಹಂಗಾಮಿ

 1. ಪುಕ್ಕಟೆಯಾಗಿ ಪಡೆದದ್ದು

ಕನ್ನಡ[ಸಂಪಾದಿಸಿ]

ಹಂಗೆ

 1. ಹಾಗೆ, ಬಿಟ್ಟಿ, ಪುಕ್ಸಟ್ಟೆ, ಪುಕ್ಕಟ್ಟೆ, ಪುಕ್ಸಾಟೆ

ಕನ್ನಡ[ಸಂಪಾದಿಸಿ]

ಹಂತಿ

 1. ಪಂತಿ, ಪಂಕ್ತಿ, ಸಾಲು

ಕನ್ನಡ[ಸಂಪಾದಿಸಿ]

ಹಣಸು

 1. ಎತ್ತಿನ ಕೊಂಬೆಗೆ ಸಿಕ್ಕಿಸುವ ಕೊಳವೆ

ಕನ್ನಡ[ಸಂಪಾದಿಸಿ]

ಹಾಳೆ

 1. ಎಲೆ, ಕಾಗದ, ಪೇಪರ್ರು

ಕನ್ನಡ[ಸಂಪಾದಿಸಿ]

ಹಾಗ

 1. ಎರಡು ಕಾಸು

ಕನ್ನಡ[ಸಂಪಾದಿಸಿ]

ಹಾಲಿನಂವ

 1. ಹಾಲಿನವ, ಮನೆಗೆ ಹಾಲು ತಂದು ಕೊಡುವವ, ಹಾಲುಮಾರುವವ, ಗೊಲ್ಲ, ಗೌಳಿಗ

ಕನ್ನಡ[ಸಂಪಾದಿಸಿ]

ಹಾನೆ

 1. ಗಡಿಗೆ, ಮಡಕೆ, ಪಾನಿ, ಬಾನಿ

ಕನ್ನಡ[ಸಂಪಾದಿಸಿ]

ಹಾಸ

 1. ಹೊರಕಿವಿಯಲ್ಲಿನ ಕೆಳ ಭಾಗ

ಕನ್ನಡ[ಸಂಪಾದಿಸಿ]

ಹಾಯಿ

 1. ಕಿವಿ

ಕನ್ನಡ[ಸಂಪಾದಿಸಿ]

ಹಚ್ಚಡ

 1. ಹೊದಪು

ಕನ್ನಡ[ಸಂಪಾದಿಸಿ]

ಹದಬೆದೆ

 1. ಬಿತ್ತಲು ಬೆಳೆಯಲು ಹದ ಮತ್ತು ಅನುಕೂಲಕರವಾದ ಸ್ಥಿತಿ

ಕನ್ನಡ[ಸಂಪಾದಿಸಿ]

ಹದಗಟ್ಟು

 1. ಎಲ್ಲವನ್ನು ಸರಿಪಡಿಸು, ಹೊಂದಿಸು, ಹದ ಏರ್ಪಡು

ಕನ್ನಡ[ಸಂಪಾದಿಸಿ]

ಹದಗೆಡು

 1. ಹದ ಕೆಡುವಿಕೆ

ಕನ್ನಡ[ಸಂಪಾದಿಸಿ]

ಹಗೇವು

 1. ಹಗ, ಧವಸ ಧಾನ್ಯಗಳನ್ನು ತುಂಬಲು ನೆಲದಲ್ಲಿ ಮಾಡಿದ ಗುಳಿ, ನೆಲಮಾಳಿಗೆ

ಕನ್ನಡ[ಸಂಪಾದಿಸಿ]

ಹಗಲು

 1. ಸೂರ್ಯ ಆಕಾಶದಲ್ಲಿ ಕಂಗೊಳಿಸುವಷ್ಟು ಕಾಲ, ನಾಳು, ದಿಸ, ದಿವಸ, ದಿನ, daylight, daytime, a day, ॑: ಒಂದು ಹಗಲು, ಒಂದು ರಾತ್ರಿ

ಕನ್ನಡ[ಸಂಪಾದಿಸಿ]

ಹಗರಣ

 1. ಕಲಹ

ಕನ್ನಡ[ಸಂಪಾದಿಸಿ]

ಹೈಲಾಟ

 1. ಐಲಾಟ, ಹುಡುಗಾಟ

ಕನ್ನಡ[ಸಂಪಾದಿಸಿ]

ಹಜಾರ

 1. ಪಡಸಾಲೆ, ಅಂಗಳ

ಕನ್ನಡ[ಸಂಪಾದಿಸಿ]

ಹಕ್ಕಲು

 1. ಫಸಲು ಕಟಾವಾದ ಮೇಲೆ ಬಿದ್ದ ತೆನೆಗಳು

ಕನ್ನಡ[ಸಂಪಾದಿಸಿ]

ಹಲ್ಲಂಡೆ ಆಗು

 1. ಅಲ್ಲಂಡೆ ಆಗು, ಕೆಟ್ಟು ಹೋಗು

ಕನ್ನಡ[ಸಂಪಾದಿಸಿ]

ಹಲ್ಲುಜಿರಕ

 1. ಎಮ್ಮೆ

ಕನ್ನಡ[ಸಂಪಾದಿಸಿ]

ಹಲ್ಮುರಿ ಕಚ್ಚು

 1. ಕೋಪದಿಂದ ಹಲ್ಲು ಕಡಿಯುವಿಕೆ

ಕನ್ನಡ[ಸಂಪಾದಿಸಿ]

ಹಪ್ಪು

 1. ಮಾಂಸದ ತುಂಡು, ಹಬ್ಬು

ಕನ್ನಡ[ಸಂಪಾದಿಸಿ]

ಹರಬ್ಬ

 1. ದುಂದುಗಾರಿಕೆ

ಕನ್ನಡ[ಸಂಪಾದಿಸಿ]

ಹರಬಿ

 1. ಕೊಡ, ಹರವಿ, ಗಡಿಗೆ

ಕನ್ನಡ[ಸಂಪಾದಿಸಿ]

ಹರಿರಾಗಿ

 1. ಕೊಯ್ದು ಹಾಕಿದ ತೆನೆರಾಗಿ

ಕನ್ನಡ[ಸಂಪಾದಿಸಿ]

ಹರಿಸಾವೆ

 1. ಹರಿ ಸೇವೆ, ದೇವರ ಸೇವೆ

ಕನ್ನಡ[ಸಂಪಾದಿಸಿ]

ಹರುಬು

 1. ಪರ್ವ, ಹಬ್ಬ

ಕನ್ನಡ[ಸಂಪಾದಿಸಿ]

ಹರುಕ

 1. ಚಿಂದಿ ಉಟ್ಟವ, ಜಗಳಗಂಟ

ಕನ್ನಡ[ಸಂಪಾದಿಸಿ]

ಹಸೀಟು

 1. ಬೀಸಿದ ರಾಗಿ ಹಿಟ್ಟು

ಕನ್ನಡ[ಸಂಪಾದಿಸಿ]

ಹಸ

 1. ಹಸನು, ಹಸನಾದದ್ದು, ಸುಂದರವಾದದ್ದು, neat and clean

ಕನ್ನಡ[ಸಂಪಾದಿಸಿ]

ಹಸನಣ್ಣು

 1. ಹಲಸಿನ ಹಣ್ಣು

ಕನ್ನಡ[ಸಂಪಾದಿಸಿ]

ಹಸಿ

 1. ಎಳಸು, ಅಪಕ್ವ

ಕನ್ನಡ[ಸಂಪಾದಿಸಿ]

ಹೌದೆ

 1. ಅಂಬಾರಿ, howdah

ಕನ್ನಡ[ಸಂಪಾದಿಸಿ]

ಹವಣು

 1. ಅಳತೆ, ಮಿತಿ

ಕನ್ನಡ[ಸಂಪಾದಿಸಿ]

ಹವನ

 1. ಹೋಮ, ಯಜ್ಞ್ನ

ಕನ್ನಡ[ಸಂಪಾದಿಸಿ]

ಹಯನು

 1. ಹಸು

ಕನ್ನಡ[ಸಂಪಾದಿಸಿ]

ಹೆಡಗೆ

 1. ಹೆಡಿಗೆ, ಬಿದರಿನ ದೊಡ್ಡ ಪುಟ್ಟಿ

ಕನ್ನಡ[ಸಂಪಾದಿಸಿ]

ಹೆಡತಲೆ

 1. ತಲೆಯ ಹಿಂಭಾಗ, ಹಿಂದೆಲೆ

ಕನ್ನಡ[ಸಂಪಾದಿಸಿ]

ಹೆಣ್ಣೈಕಳು

 1. ಹೆಣ್ಣು ಹೈಕಳು, ಹೆಣ್ಣು ಹುಡುಗಿಯರು

ಕನ್ನಡ[ಸಂಪಾದಿಸಿ]

ಹೆಬಗ

 1. ಹೆಣ್ಣಿಗ್

ಕನ್ನಡ[ಸಂಪಾದಿಸಿ]

ಹೆಬ್ಬಾಕ್ಲು

 1. ಹೆಬ್ಬಾಗಿಲು, ಊರ ಹೊರಗಿನ ದೊಡ್ಡ ಬಾಗಿಲು, ಊರಬಾಕ್ಲು

ಕನ್ನಡ[ಸಂಪಾದಿಸಿ]

ಹೆದರಿ ಹೆಪ್ಪಳಿಸು

 1. ಹೆದರಿಕೆಯಿಂದ ಹೆಪ್ಪುಗಟ್ಟಿ ಹೋಗಿ

ಕನ್ನಡ[ಸಂಪಾದಿಸಿ]

ಹೆಗಲುಗೇಡು

 1. ಹೆಗಲು ಹಾಳು, ವೃಥಾ ಶ್ರಮ

ಕನ್ನಡ[ಸಂಪಾದಿಸಿ]

ಹೆರಕು

 1. ಹೆಕ್ಕು, ಕೂಡಿಸು

ಕನ್ನಡ[ಸಂಪಾದಿಸಿ]

ಹೆರವ

 1. ಅನ್ಯ, ಹೊರಗಿನವನು, ಹೊರಬಿಗ

ಕನ್ನಡ[ಸಂಪಾದಿಸಿ]

ಹೆರೆ

 1. ಹಾವಿನ ಪರೆ, ಹಾವಿನ ಪೊರೆ

ಕನ್ನಡ[ಸಂಪಾದಿಸಿ]

ಹಿಡಿ

 1. ಆಯುಧಗಳ ಕೈ ಹಿಡಿಯುವ ಭಾಗ, ಕಾವು, ಮುಂಡಿ

ಕನ್ನಡ[ಸಂಪಾದಿಸಿ]

ಹಿಂಡೆಕೂಳು

 1. ಶ್ರಾದ್ಧದ ಅನ್ನ

ಕನ್ನಡ[ಸಂಪಾದಿಸಿ]

ಹಿಂಟೆ

 1. ಹೆಂಟೆ, ಮಣ್ಣಿನ ಗಡ್ಡೆ

ಕನ್ನಡ[ಸಂಪಾದಿಸಿ]

ಹಿಬ್ಬಳಿಸು

 1. ಇಬ್ಬಳಿಸು, ವಿಭಾಗಿಸು

ಕನ್ನಡ[ಸಂಪಾದಿಸಿ]

ಹಿಗ್ಗಲಿಸು

 1. ಅಗಲವಾಗುವಂತೆ ಮಾಡು

ಕನ್ನಡ[ಸಂಪಾದಿಸಿ]

ಹಿಕಮತ್ತು

 1. ಚತುರತೆ, ತಂತ್ರ

ಕನ್ನಡ[ಸಂಪಾದಿಸಿ]

ಹಿಕ್ಕೆ

 1. ಆಡು ಕುರಿಗಳ ಸಗಣಿ

ಕನ್ನಡ[ಸಂಪಾದಿಸಿ]

ಹಿಮಗಾನ

 1. ಹೆಚ್ಚು ಹಿಮ ಸುರಿಯುವಿಕೆ, ಹೆಚ್ಚು ಹಿಮ ಕಾರಿರುವಿಕೆ

ಕನ್ನಡ[ಸಂಪಾದಿಸಿ]

ಹಿಪ್ಪಡಿ

 1. ಇರ್ಪಡಿ, ಎರಡು ಪಡಿ

ಕನ್ನಡ[ಸಂಪಾದಿಸಿ]

ಹಿತ್ತಲು

 1. ಮನೆಯ ಹಿಂಭಾಗ, back yard

ಕನ್ನಡ[ಸಂಪಾದಿಸಿ]

ಹೊಡಕೆ

 1. ಕೆರೆಕಟ್ಟೆಗಳಲ್ಲಿ ಬೆಳೆದಿರತಕ್ಕ ಆನೆಹುಲ್ಲು

ಕನ್ನಡ[ಸಂಪಾದಿಸಿ]

ಹೊಳ್ಳಂದೊಳ್ಳೆ ಸ್ವಾಮಿ

 1. ಅತ್ತಲೂ ಸರಿ ಇತ್ತಲು ಸರಿ ಎಂದು ನಡೆದುಕೊಳ್ಳುವವನು

ಕನ್ನಡ[ಸಂಪಾದಿಸಿ]

ಹೊಂಬಾಳೆ

 1. ತೆಂಗಿನ ಮರದಲ್ಲಿ ಬಿಡುವ ಹೂವು

ಕನ್ನಡ[ಸಂಪಾದಿಸಿ]

ಹೊಂಗರಕ

 1. ಯಾವಾಗಲೂ ಹಸಿರಾಗಿರುವ ಗಿಡ

ಕನ್ನಡ[ಸಂಪಾದಿಸಿ]

ಹೊಟ್ಟೆ ಕಳತ

 1. loose motion

ಕನ್ನಡ[ಸಂಪಾದಿಸಿ]

ಹೊಟ್ಟೆ ಮುರಿತ

 1. stomach cramps

ಕನ್ನಡ[ಸಂಪಾದಿಸಿ]

ಹೊಟ್ಟೆಗಾರ

 1. ಉದರಪೋಷಕ

ಕನ್ನಡ[ಸಂಪಾದಿಸಿ]

ಹೊಟ್ಟು

 1. ಬತ್ತದ ಸಿಪ್ಪೆ

ಕನ್ನಡ[ಸಂಪಾದಿಸಿ]

ಹೊಟ್ಟುರಿ

 1. ಹೊಟ್ಟೆ ಉರಿ, ಹೊಟ್ಟೆ ಕಿಚ್ಚು, ಕರುಬು

ಕನ್ನಡ[ಸಂಪಾದಿಸಿ]

ಹೊಚ್ಚಹೊಸ

 1. ನವನವೀನ, brand new

ಕನ್ನಡ[ಸಂಪಾದಿಸಿ]

ಹೊದು

 1. ಹೊದಿಕೆ, ಬಟ್ಟೆ

ಕನ್ನಡ[ಸಂಪಾದಿಸಿ]

ಹೊಲಬಾಳು

 1. ಹೊಲಸು ಬಾಳು

ಕನ್ನಡ[ಸಂಪಾದಿಸಿ]

ಹೊಲೆ

 1. ಹೆಂಗಸರ ಮುಟ್ಟು

ಕನ್ನಡ[ಸಂಪಾದಿಸಿ]

ಹೊರೇವು

 1. ಹೊರೆ, ಕೆಲಸ, load

ಕನ್ನಡ[ಸಂಪಾದಿಸಿ]

ಹೊರಿಸು

 1. ಹೇರು, ಭಾರ ಹಾಕು

ಕನ್ನಡ[ಸಂಪಾದಿಸಿ]

ಹೊಯಿಗೆ

 1. ಮರಳು

ಕನ್ನಡ[ಸಂಪಾದಿಸಿ]

ಹುಡೋ ಗಿಡ್ಡ

 1. ಉಳುವ ಎತ್ತುಗಳು

ಕನ್ನಡ[ಸಂಪಾದಿಸಿ]

ಹುಳೀತಾವೆ

 1. ಹರಿದಾಡುತ್ತಿವೆ

ಕನ್ನಡ[ಸಂಪಾದಿಸಿ]

ಹುಳ್ಳುಳಗೆ

 1. ಅನುಮಾನಾಸ್ಪದ, ಹುಳ್ಳುಹುಳ್ಳಗೆ, ಮುಜುಗರದಿಂದ ತನ್ನ ತಪ್ಪನ್ನು ಮರೆ ಮಾಚುವಿಕೆ, to be fraught with uncertainity

ಕನ್ನಡ[ಸಂಪಾದಿಸಿ]

ಹುಳಿಕಿ

 1. ಹುಳ ಹೊಡೆದಿರುವ, ಗಾಯದ

ಕನ್ನಡ[ಸಂಪಾದಿಸಿ]

ಹುಚ್ಚುತೊರೆ

 1. ಹುಚ್ಚಾಪಟ್ಟೆ ನೀರು ಏರಿ ಹರಿಯುವ ತೊರೆ

ಕನ್ನಡ[ಸಂಪಾದಿಸಿ]

ಹುಗ್ಗಿ

 1. ಪೊಂಗಲು, ಕಿಚ್ಚಡಿ ಅನ್ನ

ಕನ್ನಡ[ಸಂಪಾದಿಸಿ]

ಹುಲುಮಲಾಗಿ

 1. ಸಮೃದ್ಧವಾಗಿ

ಕನ್ನಡ[ಸಂಪಾದಿಸಿ]

ಹ್ಯಾಪ ಮ್ವಾರೆ

 1. ಹ್ಯಾಪ ಮೋರೆ, ಪೆಚ್ಚು ಮೋರೆ

ಕನ್ನಡ[ಸಂಪಾದಿಸಿ]

ಹ್ಯಾಪಾಯಿ

 1. ಬೆಪ್ಪ, ಹ್ಯಾಪ

ಕನ್ನಡ[ಸಂಪಾದಿಸಿ]

ಇಡು

 1. ಹೊಡೆ

ಕನ್ನಡ[ಸಂಪಾದಿಸಿ]

ಇಳ್ಳು

 1. ಇರುಳು, ರಾತ್ರಿ

ಕನ್ನಡ[ಸಂಪಾದಿಸಿ]

ಇಳಂಪರ್ತಿ

 1. ಇಳಂಪ್ರತಿ, ಪ್ರತಿರಾತ್ರಿ, ಪ್ರತಿ ಇರುಳು

ಕನ್ನಡ[ಸಂಪಾದಿಸಿ]

ಇಳಿತರ

 1. ಕಡಿಮೆಯಾಗುವಿಕೆ, ಅಗ್ಗ

ಕನ್ನಡ[ಸಂಪಾದಿಸಿ]

ಇಂಬು

 1. ಆಶ್ರಯ

ಕನ್ನಡ[ಸಂಪಾದಿಸಿ]

ಇಂಗ್ಲಿಕ್ಕು

 1. ಉಪಚರಿಸು, ಸತ್ಕರಿಸು

ಕನ್ನಡ[ಸಂಪಾದಿಸಿ]

ಇಂಕರ ಇಂಕರಾಗಿ

 1. ಇಷ್ಟಿಷ್ಟಾಗಿ, ಸ್ವಲ್ಪಸ್ವಲ್ಪವಾಗಿ

ಕನ್ನಡ[ಸಂಪಾದಿಸಿ]

ಇಷ್ಟೊಪ್ಪ

 1. ಇಷ್ಟು ದಪ್ಪ, ಸ್ವಲ್ಪ, ಇಷ್ಟು ಅಣಕವಾಗಿ

ಕನ್ನಡ[ಸಂಪಾದಿಸಿ]

ಇಚ್ಚಿಚ್ಚೆ

 1. ಇತ್ತಿತ್ತ, ಹತ್ತಿರ, ಸಮೀಪ

ಕನ್ನಡ[ಸಂಪಾದಿಸಿ]

ಇಗ್ಗಡ

 1. ಅನಾರೋಗ್ಯ

ಕನ್ನಡ[ಸಂಪಾದಿಸಿ]

ಇಕ್ಕಿರಾದು

 1. ತೊಟ್ಟಿರುವುದು, ತೊಡಿಸಿರುವುದು

ಕನ್ನಡ[ಸಂಪಾದಿಸಿ]

ಇಕ್ಕು

 1. ಬಡಿಸು

ಕನ್ನಡ[ಸಂಪಾದಿಸಿ]

ಇಪ್ಪಣ

 1. ೯ಆಣೆ ಮತ್ತು ೪ಪೈಸೆ

ಕನ್ನಡ[ಸಂಪಾದಿಸಿ]

ಇರವಾರ

 1. ಚಿಕ್ಕಜಾಗ, ಬಿಕ್ಕಟ್ಟಿನ ಜಾಗ, ಎರಡು ತೀರ (ಇರು+ಪಾರ)

ಕನ್ನಡ[ಸಂಪಾದಿಸಿ]

ಇರವಾರ

 1. ಎರಡು ಪಟ್ಟು, ಹೆಚ್ಚಾಗಿ

ಕನ್ನಡ[ಸಂಪಾದಿಸಿ]

ಇರಿರ್ತ

 1. ಇರುಇರುತ್ತ/ಲೆ, ಬರುಬರುತ್ತ, ಕಾಲಕ್ರಮೇಣ, ॑: ಇರಿರ್ತ ಅವನ ಮಕ್ಕಳೆಲ್ಲ ಅವನಿಂದ ದೂರಾದರು

ಕನ್ನಡ[ಸಂಪಾದಿಸಿ]

ಇರುಕಿಸಿಕೊ

 1. ಮನದೊಳಗೆ ಅಡಗಿಸಿಕೊಳ್ಳು, ಬಚ್ಚಿಟ್ಟುಕೊ

ಕನ್ನಡ[ಸಂಪಾದಿಸಿ]

ಇಸ

 1. ವಿಷ, ವಿಪರೀತ ಕಹಿ

ಕನ್ನಡ[ಸಂಪಾದಿಸಿ]

ಜೀಮ

 1. ಜೀವ

ಕನ್ನಡ[ಸಂಪಾದಿಸಿ]

ಜೀನಬಾಯಿ

 1. ತಿನ್ನದೆ/ಬಾಯಿಕಟ್ಟಿ ಜಿಪುಣತನದಿಂದ ಹಣ ಸಂಪಾದಿಸುವ/ಉಳಿಸುವ ವ್ಯಕ್ತಿ

ಕನ್ನಡ[ಸಂಪಾದಿಸಿ]

ಜೀನಗಾರ

 1. ಜಿಪುಣ

ಕನ್ನಡ[ಸಂಪಾದಿಸಿ]

ಜೀನಸು

 1. ಜಿನಸು, ತಿನಸು, ತೀನಿ, ತಿಂಡಿ

ಕನ್ನಡ[ಸಂಪಾದಿಸಿ]

ಜೀತ

 1. ದುಡಿಮೆ, ಕೂಲಿ, ದಾಸ್ಯ

ಕನ್ನಡ[ಸಂಪಾದಿಸಿ]

ಜೀತಗಾರ

 1. ಗುಲಾಮ, ಕೂಲಿ ಮಾಡುವವ

ಕನ್ನಡ[ಸಂಪಾದಿಸಿ]

ಜೀವಣಿಸು

 1. ಜೀವಕೆ ತಂದುಕೊ, ಬೆಲೆಕೊಡು

ಕನ್ನಡ[ಸಂಪಾದಿಸಿ]

ಜೋಡು

 1. ಎಕ್ಕಡ, ಚಪ್ಪಲಿ, ಮೋಚೆ

ಕನ್ನಡ[ಸಂಪಾದಿಸಿ]

ಜೋಳಿಗೆ

 1. ಕಂಕುಳಲ್ಲಿ ನೇತುಹಾಕುವ ಭಿಕ್ಷೆಯ ಚೀಲ

ಕನ್ನಡ[ಸಂಪಾದಿಸಿ]

ಜೋಕು

 1. ಠೀವಿ, ಜಂಬ, haughty manner, conceited manner, swagger, conceit

ಕನ್ನಡ[ಸಂಪಾದಿಸಿ]

ಜೋಲಿಗಾರ

 1. ಕಾಲಕಳೆಯುವವ, ತಿರುಗಾಡುವವ

ಕನ್ನಡ[ಸಂಪಾದಿಸಿ]

ಜೋಪಡಿ

 1. ಗುಡಿಸಲು

ಕನ್ನಡ[ಸಂಪಾದಿಸಿ]

ಜೂಗಲ ಮೋರೆ

 1. ಜೋತುಬಿದ್ದ ಮೋರೆ, ಸೋಮಾರಿ

ಕನ್ನಡ[ಸಂಪಾದಿಸಿ]

ಜಡಾಯ್ಸು

 1. ಸಿಕ್ಕಾಬಟ್ಟೆ ಚುಚ್ಚು ಮಾತಾಡು

ಕನ್ನಡ[ಸಂಪಾದಿಸಿ]

ಜಡಿತ

 1. ಚೆನ್ನಾಗಿ ಮಿದಿಯುವಿಕೆ, ಒಳಸೇರಿಸುವಿಕೆ, ಪೆಟ್ಟುಗಳ ಸುರಿಮಳೆ

ಕನ್ನಡ[ಸಂಪಾದಿಸಿ]

ಜಂಬರ

 1. ಕಾರ್ಯ, ಕೆಲಸ

ಕನ್ನಡ[ಸಂಪಾದಿಸಿ]

ಜಂತಿ

 1. ಮನೆಗೆ ಆಧಾರವಾಗಿ ಹಾಕಿದ ಅಡ್ಡ ತೊಲೆಗಳು

ಕನ್ನಡ[ಸಂಪಾದಿಸಿ]

ಜಾಡಗಿತ್ತಿ

 1. ನೇಕಾರನ ಹೆಂಡತಿ

ಕನ್ನಡ[ಸಂಪಾದಿಸಿ]

ಜಾಗಟೆ

 1. ಚಕ್ರಾಕಾರವಾಗಿರುವ ಲೋಹವಾದ್ಯ, ಪೂಜಾಕಾಲದ ಪಂಚವಾದ್ಯ ಗಳಲ್ಲಿ ಒಂದು

ಕನ್ನಡ[ಸಂಪಾದಿಸಿ]

ಜಾಲಿಸು

 1. ನೀರಿನಲ್ಲಿ ಅದ್ದಿ ತೊಳೆ, to rinse

ಕನ್ನಡ[ಸಂಪಾದಿಸಿ]

ಜಾಪಾಳ

 1. ಬೇದಿ ಮಾತ್ರೆ

ಕನ್ನಡ[ಸಂಪಾದಿಸಿ]

ಜಾತಿಮರಿ

 1. ಒಳ್ಳೆಯ ತಳಿಯ ಮರಿ, ಒಳ್ಳೆಯ ವಂಶದ ಮರಿ

ಕನ್ನಡ[ಸಂಪಾದಿಸಿ]

ಜಗ್ಗಸಿ

 1. ಎಳೆದು

ಕನ್ನಡ[ಸಂಪಾದಿಸಿ]

ಜಲ್ಲು

 1. ದೋಣಿಯ ಕಂಬ, ಜಲ್ಲೆ

ಕನ್ನಡ[ಸಂಪಾದಿಸಿ]

ಜಪಾತಿ

 1. ಸಮಾನವಾಗಿ, ಆ ಮಟ್ಟದಲ್ಲಿ

ಕನ್ನಡ[ಸಂಪಾದಿಸಿ]

ಜಪ್ಪಿ

 1. ಮೊಂಡಗಾತಿ

ಕನ್ನಡ[ಸಂಪಾದಿಸಿ]

ಜರೆ

 1. ಮುಪ್ಪು

ಕನ್ನಡ[ಸಂಪಾದಿಸಿ]

ಜವ

 1. ಜಾವ, ಒಂದು ತಾಸು

ಕನ್ನಡ[ಸಂಪಾದಿಸಿ]

ಜವನ

 1. ದವನ, ಸುವಾಸನೆ ಎಲೆಯುಳ್ಳ ಒಂದು ಗಿಡ

ಕನ್ನಡ[ಸಂಪಾದಿಸಿ]

ಜಿಡ್ಡರಾಗಿ

 1. ಗಿಡ್ಡರಾಗಿ

ಕನ್ನಡ[ಸಂಪಾದಿಸಿ]

ಜಿಲ್ಲಾರಿ

 1. ಹರಕಿ/ಹರಕ, ಹರಕು ಬಟ್ಟೇ ಉಟ್ಟವರು

ಕನ್ನಡ[ಸಂಪಾದಿಸಿ]

ಜಿನ್ನದೇವ

 1. ಜಿನದೇವ, ತೀರ್ಥಂಕರ

ಕನ್ನಡ[ಸಂಪಾದಿಸಿ]

ಜಿರಿಜಿಟ್ಟಿ

 1. ಗಿರಿಗಟ್ಟಲೆ

ಕನ್ನಡ[ಸಂಪಾದಿಸಿ]

ಜಿಯಿಕ

 1. ಜುನಕ, ಹುರುಳಿ/ಕಡಲೆಹಿಟ್ಟಿನಿಂದ ಮಾಡುವ ಒಂದು ಬಗೆಯ ವ್ಯಂಜನ

ಕನ್ನಡ[ಸಂಪಾದಿಸಿ]

ಜೊಂಡು

 1. ಕೆರೆಯ ಶೀತ ಪ್ರದೇಶದಲ್ಲಿ ಬೆಳೆಯುವ ಒಂದು ತರದ ಹುಲ್ಲು/ಪಾಚಿ

ಕನ್ನಡ[ಸಂಪಾದಿಸಿ]

ಜೊಲ್ಲೆ

 1. ಗಳ, ಕಬ್ಬಿನ ಜಲ್ಲೆ

ಕನ್ನಡ[ಸಂಪಾದಿಸಿ]

ಜೊತ್ತಿಗೆ

 1. ನೊಗಕ್ಕೆ ಎತ್ತುಗಳನ್ನು ಹೂಡಲು ಉಪಯೋಗಿಸುವ ಹಗ್ಗದ ಜೊತೆ

ಕನ್ನಡ[ಸಂಪಾದಿಸಿ]

ಜುಂಗಲ ಮುಸುಕು

 1. ನಾರಿನ ಮುಸುಕು

ಕನ್ನಡ[ಸಂಪಾದಿಸಿ]

ಜುಂಗು

 1. ಗುಂಜು, ತೆಂಗಿನ ನಾರು

ಕನ್ನಡ[ಸಂಪಾದಿಸಿ]

ಜುಗಾರು

 1. ಜೂಜು

ಕನ್ನಡ[ಸಂಪಾದಿಸಿ]

ಜುಮ್‍ಜುಮ

 1. ಜುಮುಜುಮು, ಜುಮಗುಟ್ಟುವಿಕೆ, ರೋಮಾಂಚನದ ಅನುಭವ

ಕನ್ನಡ[ಸಂಪಾದಿಸಿ]

ಜುಮ್ಮುಗಾರ

 1. ಜೂಜುಗಾರ

ಕನ್ನಡ[ಸಂಪಾದಿಸಿ]

ಕೇಡುಗಾಲ

 1. ಕೆಟ್ಟ ಕಾಲ, ಭವಿಷ್ಯ ಮಂಕಾಗಿರುವ ಕಾಲ

ಕನ್ನಡ[ಸಂಪಾದಿಸಿ]

ಕೇಮೆ

 1. ಗೇಮೆ, ಕೆಲಸ

ಕನ್ನಡ[ಸಂಪಾದಿಸಿ]

ಕೇರಿ

 1. ಕಾಲೋನಿ

ಕನ್ನಡ[ಸಂಪಾದಿಸಿ]

ಕೇರು

 1. ಹೊಟ್ಟು ಮುಂತಾದ ಧೂಳು ಹೊರಗೆ ಹಾಕಲು ಮೊರದಲ್ಲಿ ಕಾಳನ್ನು ಹಾಕಿ ಮೊರವನ್ನು ಕೇರುವುದು, ಮೊರದಲ್ಲಿ ಧವಸ ಧಾನ್ಯಗಳನ್ನು ಇಟ್ಟು ಹೊಟ್ಟು ತೂರಿ ಕಸ ಕಡ್ಡಿಗಲನ್ನು ಬೇರ್ಪಡಿಸುವ ವಿಧಾನ, to winnow

ಕನ್ನಡ[ಸಂಪಾದಿಸಿ]

ಕೇತಿ

 1. ಕ್ಯಾತೆ ತೆಗೆಯುವವಳು, ಜಗಳಗಂಟಿ

ಕನ್ನಡ[ಸಂಪಾದಿಸಿ]

ಕೀಳಗೆಟ್ಟ

 1. ಕೀಳಾದ, ಗಮನಾರ್ಹ ವಲ್ಲದ

ಕನ್ನಡ[ಸಂಪಾದಿಸಿ]

ಕೀಳು

 1. ಕಡಿಮೆ ಬೆಲೆಯ, ಕೀಳಾದ

ಕನ್ನಡ[ಸಂಪಾದಿಸಿ]

ಕೀಚಕ

 1. ದುಷ್ಟ, ಲಂಪಟ

ಕನ್ನಡ[ಸಂಪಾದಿಸಿ]

ಕೋಡಗ

 1. ಕಪಿ

ಕನ್ನಡ[ಸಂಪಾದಿಸಿ]

ಕೋಡಿ

 1. ಕೆರೆ ಕಟ್ಟೆಗಳಲ್ಲಿ ಹೆಚ್ಚಿಗೆ ನೀರು ಹೊರಗೆ ಹೋಗುವಂತೆ ಮಾಡಿರುವ ಇಳಿಜಾರು ಜಾಗ

ಕನ್ನಡ[ಸಂಪಾದಿಸಿ]

ಕೋಳ್ಮುರುಕಿ

 1. ಕೋಳಿ ಕಳ್ಳಿ, ಕೋಳಿ ಕದಿಯುವವಳು

ಕನ್ನಡ[ಸಂಪಾದಿಸಿ]

ಕೋಣೆ

 1. ಕೊಟಡಿ

ಕನ್ನಡ[ಸಂಪಾದಿಸಿ]

ಕೋಲ

 1. ಬಟ್ಟೆಬರಿ, ಸಿಂಗಾರ

ಕನ್ನಡ[ಸಂಪಾದಿಸಿ]

ಕೋರ‍್ಹುಡುಗ

 1. ಕೋರ, ಹರೆಯದ ಹುಡುಗ, ಪ್ರಾಯದ ಹುಡುಗ, ಪಡ್ಡೆ ಹುಡುಗ, ಹೈದ, ಕುಮಾರ

ಕನ್ನಡ[ಸಂಪಾದಿಸಿ]

ಕೋರಾಟ

 1. ಹರೆಯದ ಚೆಲ್ಲಾಟ

ಕನ್ನಡ[ಸಂಪಾದಿಸಿ]

ಕೋರಿ

 1. ಹರೆಯದ ಹುಡುಗಿ, ಕುಮಾರಿ, a lady

ಕನ್ನಡ[ಸಂಪಾದಿಸಿ]

ಕೋರಿ

 1. ಕಂಬಳಿಯಿಂದ ಮಾಡಿದ ಹಾಸಿಗೆ

ಕನ್ನಡ[ಸಂಪಾದಿಸಿ]

ಕೂಡಿಕೆ

 1. ಮರುಮದುವೆ, ಉಡಿಕೆ

ಕನ್ನಡ[ಸಂಪಾದಿಸಿ]

ಕೂಡ್ಕೊಂಡು

 1. ಕೂಡಾವಳಿ ಮಾಡಿಕೊಂಡು, ಕೂಡಿಕೆ, ವಿಧವೆ/ವಿಧುರ ಎರಡನೆ ಮದುವೆ ಮಾಡಿಕೊಳ್ಳುವುದು

ಕನ್ನಡ[ಸಂಪಾದಿಸಿ]

ಕೂಟೆ

 1. ಕೂಡೆ, ಕುಟ್ಟೆ, ಒಂದಿಗೆ, ಒಟ್ಟಿಗೆ, ಜೊತೆಗೆ

ಕನ್ನಡ[ಸಂಪಾದಿಸಿ]

ಕೂಚು

 1. ತೊಲೆಗೆ ಆಧಾರವಾದ ಗೋಡೆಯ ಮೇಲಿನ ಕಂಬ

ಕನ್ನಡ[ಸಂಪಾದಿಸಿ]

ಕೂದಿ

 1. ಕೊಯ್ದು

ಕನ್ನಡ[ಸಂಪಾದಿಸಿ]

ಕೂಗಟೆ ಹುಣ್ಣು

 1. ಕಿವಿಯಲ್ಲಿ ಗುಗ್ಗೆಯಿಂದ ಆಗುವ ಹುಣ್ಣು

ಕನ್ನಡ[ಸಂಪಾದಿಸಿ]

ಕೂಮ

 1. ಪೀಚಾಳು, ಮೈಗಳ್ಳ

ಕನ್ನಡ[ಸಂಪಾದಿಸಿ]

ಕೂಪ್ರು

 1. ಅವರಿವರು, ಅಕ್ಕಪಕ್ಕದವರು

ಕನ್ನಡ[ಸಂಪಾದಿಸಿ]

ಕೂಸು

 1. ಮಗು, ಹೆಣ್ಣುಮಗಳು

ಕನ್ನಡ[ಸಂಪಾದಿಸಿ]

ಕಡ

 1. ಸಾಲ, ಬಿಡುವು

ಕನ್ನಡ[ಸಂಪಾದಿಸಿ]

ಕಡ

 1. ಸಾಲ, loan

ಕನ್ನಡ[ಸಂಪಾದಿಸಿ]

ಕಡಾಸು

 1. ಚರ್ಮ, ತೊವಲು

ಕನ್ನಡ[ಸಂಪಾದಿಸಿ]

ಕಡಾಯ

 1. ನೀರನ್ನು ಶೇಖರಿಸಿಡುವ ದೊಡ್ಡ ಪಡಗ/ಪಾತ್ರೆ

ಕನ್ನಡ[ಸಂಪಾದಿಸಿ]

ಕಡದೋದ

 1. ಕಡಿದು ಹೋದ, ಹರಿದು ಹೋದ

ಕನ್ನಡ[ಸಂಪಾದಿಸಿ]

ಕಡಗೋಲು

 1. ಮೊಸರನ್ನು ಕಡೆಯುವ ಕೋಲು, ಮಂತು

ಕನ್ನಡ[ಸಂಪಾದಿಸಿ]

ಕಡಗ

 1. ಕೈಗೆ ತೊಟ್ಟಿಕೊಳ್ಳುವ (ಬೆಳ್ಳಿಯ) ಬಳೆ, ತೋಳಿಗೆ ತೊಟ್ಟಿಕೊಳ್ಳುವ ಹೆಂಗಸರ ಬೆಳ್ಳಿಯ ಆಭರಣ

ಕನ್ನಡ[ಸಂಪಾದಿಸಿ]

ಕಡಗು

 1. ಬಾಳೆ ಗಿಡಕ್ಕೆ ಮಾಡಿದ ಸಣ್ಣ ಕಾಲುವೆ

ಕನ್ನಡ[ಸಂಪಾದಿಸಿ]

ಕಡಕು

 1. ಅಥಡಕು, ಹತ್ಕಡಕು, ಹತ್ತಕಡಕು, ಹರಳು ಕಟ್ಟಿದ ಗಂಡಸರ ಕಿವಿಯ ಆಭರಣ

ಕನ್ನಡ[ಸಂಪಾದಿಸಿ]

ಕಡಸು

 1. ಪ್ರಾಯದ ಹಸು, ಎಳೆಯ ಹಸು

ಕನ್ನಡ[ಸಂಪಾದಿಸಿ]

ಕಡತಿ

 1. ಸಣ್ಣ

ಕನ್ನಡ[ಸಂಪಾದಿಸಿ]

ಕಡೆಯೆ

 1. ಕಡಿಮೆಯೇ, ನಿಕೃಷ್ಟವಾದುದೇ

ಕನ್ನಡ[ಸಂಪಾದಿಸಿ]

ಕಳಿ

 1. ಬಿಚ್ಚು

ಕನ್ನಡ[ಸಂಪಾದಿಸಿ]

ಕಳ್ಳೆ

 1. ಕಳ್ಳಿ, ಕಳುವು ಮಾಡುವವಳು

ಕನ್ನಡ[ಸಂಪಾದಿಸಿ]

ಕಳ

 1. ಕಣ, ರಾಗಿ ಬತ್ತ ಮೊದಲಾದವುಗಳನ್ನು ಒಕ್ಕುವ ಜಾಗ

ಕನ್ನಡ[ಸಂಪಾದಿಸಿ]

ಕಳೆ

 1. ಹೊಲ ಗದ್ದೆಗಳಲ್ಲಿ ಬೆಳೆಯುವ ಹುಲ್ಲು

ಕನ್ನಡ[ಸಂಪಾದಿಸಿ]

ಕಳೆ

 1. ಕಸ, ಕಾಂತಿ, ತೇಜಸ್ಸು

ಕನ್ನಡ[ಸಂಪಾದಿಸಿ]

ಕಳಿಸ್ದ

 1. ಕಳಿಸಿದ, ಬಿಚ್ಚಿಸಿದ

ಕನ್ನಡ[ಸಂಪಾದಿಸಿ]

ಕಳುಗಿ ಬಾ

 1. ಕಳುಹಿಸಲು ಜೊತೆಗೆ ಬಾ

ಕನ್ನಡ[ಸಂಪಾದಿಸಿ]

ಕಂಡೋರ

 1. ಬೇರೆಯವರ

ಕನ್ನಡ[ಸಂಪಾದಿಸಿ]

ಕಂಡಾಡು

 1. ನೋಡಿ ಮಾತಾಡು

ಕನ್ನಡ[ಸಂಪಾದಿಸಿ]

ಕಂಡಿ

 1. ರಂದ್ರ, ಕಂಡು, ನೋಡಿ

ಕನ್ನಡ[ಸಂಪಾದಿಸಿ]

ಕಂಟ

 1. ಕರಟ, ತೆಂಗಿನಕಾಯಿ ಚಿಪ್ಪು

ಕನ್ನಡ[ಸಂಪಾದಿಸಿ]

ಕಂಬಳ

 1. ಕೋಣಗಲನ್ನು ಕೆಸರಿನಲ್ಲಿ ಓಡಿಸುವ ಆಟ

ಕನ್ನಡ[ಸಂಪಾದಿಸಿ]

ಕಂದ್ಲು

 1. ಮಚ್ಚು, ಕಡಿಕತ್ತಿ

ಕನ್ನಡ[ಸಂಪಾದಿಸಿ]

ಕಂತು

 1. ಅವಧಿ, ಗಡವು

ಕನ್ನಡ[ಸಂಪಾದಿಸಿ]

ಕಣ್ಣುರಿ

 1. ಕಣ್ಣು ಉರಿ, ಹೊಟ್ಟೆ ಉರಿ, ಕುರುಬು, ಅಸೂಯೆ ಪಡುವುದು, ಬೇರೆಯವರ ಏಳ್ಗೆ ಕಂಡು ಕಣ್ಣು-ಕೀಸರು ಪಡುವಿಕೆ, ಬೇರೆಯವರ ಒಡವೆ ಕಂಡು ಕಣ್ಣು-ಬೆಳ್ಳಗಾಗುವಿಕೆ

ಕನ್ನಡ[ಸಂಪಾದಿಸಿ]

ಕಣಜ

 1. ಕಡಜ, ಕಡಿಯುವ ಜಾತಿಗೆ ಸೇರಿದ ಕಡಜೀರಿಗೆ/ಕಣಜೀರಿಗೆ ಹುಳ

ಕನ್ನಡ[ಸಂಪಾದಿಸಿ]

ಕಣಕಪ್ಪು

 1. ಕಣ್ಕಪ್ಪು, ಕಾಡಿಗೆ, ಅಂಜನ, ಸುರಮ (ಹಿಂದಿ)

ಕನ್ನಡ[ಸಂಪಾದಿಸಿ]

ಕಣಿ

 1. ಶಾಸ್ತ್ರ ಕೇಳುವಿಕೆ, ಭವಿಷ್ಯ

ಕನ್ನಡ[ಸಂಪಾದಿಸಿ]

ಕಣಿಗಲೆ

 1. ಒಂದು ಜಾತಿಯ ಹೂವು

ಕನ್ನಡ[ಸಂಪಾದಿಸಿ]

ಕಣಿಕಾ

 1. ಗೋಧಿ ಹಿಟ್ಟು, ಗೋದಿ ಹಿಟ್ಟು

ಕನ್ನಡ[ಸಂಪಾದಿಸಿ]

ಕಟ್ಟಣ

 1. ಮನೆ

ಕನ್ನಡ[ಸಂಪಾದಿಸಿ]

ಕಟ್ಟಾಣಿ

 1. ಕಟ್ಟುಮಸ್ತಾದ ಮೈಕಟ್ಟಿನ/ವ/ಳು, ರತ್ನ-ಮುತ್ತಿನಂತವಳು, ಮುತ್ತು, ರತ್ನ

ಕನ್ನಡ[ಸಂಪಾದಿಸಿ]

ಕಟ್ಟಿ

 1. ಜೊತೆ ಮಾಡಿ, ಒಟ್ಟಿಗೆ ಸೇರಿಸಿ

ಕನ್ನಡ[ಸಂಪಾದಿಸಿ]

ಕಟಪಟೆ

 1. ಕಾಟಾಚಾರದ

ಕನ್ನಡ[ಸಂಪಾದಿಸಿ]

ಕಠಾರಿ

 1. ಕತ್ತಿ

ಕನ್ನಡ[ಸಂಪಾದಿಸಿ]

ಕಟಿ

 1. ನಡು, ಸೊಂಟ, ಟೊಂಕ

ಕನ್ನಡ[ಸಂಪಾದಿಸಿ]

ಕಾಡವ್ವ

 1. ಭೂಮಿತಾಯಿ

ಕನ್ನಡ[ಸಂಪಾದಿಸಿ]

ಕಾಶಿರೋಗ

 1. ಕ್ಷಯರೋಗ, ಕಾಂಸ್‍ನ(= ಕೆಮ್ಮುವಿಕೆ(ಹಿಂದಿಯಲ್ಲಿ))+ರೋಗ, ಸವಕಲು ರೋಗ, ಕೆಮ್ಮಿದಾಗ ರಕ್ತ ಬೀಳುವ ರೋಗ

ಕನ್ನಡ[ಸಂಪಾದಿಸಿ]

ಕಾಟ

 1. ಕಿರುಕುಳ, ತೊಂದರೆ

ಕನ್ನಡ[ಸಂಪಾದಿಸಿ]

ಕಾಟನಾಯಕ

 1. ಕಾಡಿನ ನಾಯಕ, ಕಾಡಿನ ಮುಖ್ಯಸ್ತ

ಕನ್ನಡ[ಸಂಪಾದಿಸಿ]

ಕಾಟಿ

 1. ಕಾಡುಕೋಣ

ಕನ್ನಡ[ಸಂಪಾದಿಸಿ]

ಕಾಟಿಪೋಟಿ ಮಾಡಿ

 1. ತುಂಬಾ ಪ್ರಯಾಸ ಪಟ್ಟು

ಕನ್ನಡ[ಸಂಪಾದಿಸಿ]

ಕಾದ ಮನೆ

 1. ಜಗಳವಾಡಿದ ಮನೆ

ಕನ್ನಡ[ಸಂಪಾದಿಸಿ]

ಕಾಗಿನ ಬಣ್ಣ

 1. ಗಾಢವಾದ ಹೊಳಪುಳ್ಳ ಕಪ್ಪಿನ ಸೀರೆ, ಕಪ್ಪು ಬಣ್ಣ

ಕನ್ನಡ[ಸಂಪಾದಿಸಿ]

ಕಾಕು

 1. ಕೊಂಕು ಮಾತು, ವಕ್ರ

ಕನ್ನಡ[ಸಂಪಾದಿಸಿ]

ಕಾಲ್ದಸಿ

 1. ಕಲುಗಳ ಕೆಳಗೆ, ಕಾಲುಗಳ ಬಳಿ, ಕಾಲುಗಳ ದೆಸೆಯಲ್ಲಿ ಇರುವ

ಕನ್ನಡ[ಸಂಪಾದಿಸಿ]

ಕಾಲುಜಿರಕ

 1. ಹಸು, ದನ

ಕನ್ನಡ[ಸಂಪಾದಿಸಿ]

ಕಾರ‍್ಯೇವು

 1. ಕಾರ‍್ಯ, ಕೆಲಸ

ಕನ್ನಡ[ಸಂಪಾದಿಸಿ]

ಕಾಸ್ತಾರ

 1. ಕುದುರೆಯ ಚಾಕರ

ಕನ್ನಡ[ಸಂಪಾದಿಸಿ]

ಕಾವಲಿ

 1. ದೋಸೆಕಲ್ಲು, ಪದಾರ್ಥಗಳನ್ನು ಹುರಿಯಲು ಉಪಯೋಗಿಸುವ ಸಾಧನ

ಕನ್ನಡ[ಸಂಪಾದಿಸಿ]

ಕಾವು

 1. ಕೊಡಲಿ ಮುಂತಾದವುಗಳ ಮರದ ಹಿಡಿ

ಕನ್ನಡ[ಸಂಪಾದಿಸಿ]

ಕಾಯಕ

 1. ಕೆಲಸ, ಗೇಯ್ಮೆ

ಕನ್ನಡ[ಸಂಪಾದಿಸಿ]

ಕಾಯಿ ಪಲ್ಯೆ

 1. ಕಾಯಿಕರಿ, ತರಕಾರಿ

ಕನ್ನಡ[ಸಂಪಾದಿಸಿ]

ಕಬ್ಬಾರ

 1. ಕಬ್ಬು ಅರೆಯುವವ, ಕಬ್ಬರಸ

ಕನ್ನಡ[ಸಂಪಾದಿಸಿ]

ಕಬ್ಬಲಿಗ

 1. ಬೆಸ್ತ

ಕನ್ನಡ[ಸಂಪಾದಿಸಿ]

ಕಚ್ಚೆ

 1. ಸೊಂಟಕ್ಕೆ ಕಟ್ಟುವ ಬಟ್ಟೆ, ಲಂಗೋಟಿ

ಕನ್ನಡ[ಸಂಪಾದಿಸಿ]

ಕದ

 1. ಬಾಗಿಲು, ಬಾಕಿಲು, ಬಾಕ್ಲ, ಅ ದೂರ್

ಕನ್ನಡ[ಸಂಪಾದಿಸಿ]

ಕದನ್ನ

 1. ಕೆಟ್ಟ ಅನ್ನ

ಕನ್ನಡ[ಸಂಪಾದಿಸಿ]

ಕಗ್ಗಪ್ಪು

 1. ದಟ್ಟ ಕಪ್ಪು, ಕಡು ಕಪ್ಪು

ಕನ್ನಡ[ಸಂಪಾದಿಸಿ]

ಕಜೆ

 1. ಕಜ್ಜ, ಕದನ, ರಚ್ಚೆ

ಕನ್ನಡ[ಸಂಪಾದಿಸಿ]

ಕಜ್ಜಿ

 1. ಹೆಚ್ಚು ತುರಿಕೆಯಾಗುವ, ಹರಡುತ್ತಾ ಹೋಗುವ ಒಂದು ಬಗೆಯ ಚರ್ಮ ರೋಗ

ಕನ್ನಡ[ಸಂಪಾದಿಸಿ]

ಕಕ್ಕುಲತೆ

 1. ಚಿಂತೆ

ಕನ್ನಡ[ಸಂಪಾದಿಸಿ]

ಕಲಗಚ್ಚು

 1. ಮುಸುರೆ ನೀರು, ಅಕ್ಕಿ ತೊಳೆದ ನೀರು

ಕನ್ನಡ[ಸಂಪಾದಿಸಿ]

ಕಲಕೇತಿ

 1. ಕೆಟ್ಟವಳು, ಕಲ ಕಲ ಬಾಯಿ ಮಾಡೀ ಜಗಳ(ಕ್ಯಾತೆ) ತೆಗೆಯುವವಳು, ಚಂಡಿ ಹಿಡಿಯುವವಳು

ಕನ್ನಡ[ಸಂಪಾದಿಸಿ]

ಕಲಕಾಲ

 1. ಎಲ್ಲಾಕಾಲ

ಕನ್ನಡ[ಸಂಪಾದಿಸಿ]

ಕಲಕು

 1. ಕದಡು

ಕನ್ನಡ[ಸಂಪಾದಿಸಿ]

ಕಲಸು

 1. ಬೆರಸು

ಕನ್ನಡ[ಸಂಪಾದಿಸಿ]

ಕಲಿ

 1. ವಿದ್ಯೆ, ॑: ಏನು ಕಲಿ ಕಲ್ತವನೋ

ಕನ್ನಡ[ಸಂಪಾದಿಸಿ]

ಕಲಿಮನೆ

 1. ಶಾಲೆ

ಕನ್ನಡ[ಸಂಪಾದಿಸಿ]

ಕಲಿನಿಲಯ

 1. ವಿದ್ಯಾಲಯ

ಕನ್ನಡ[ಸಂಪಾದಿಸಿ]

ಕಮ್ಮರಿಸು

 1. ತಿಂದು ಹಾಕು, ಕಬಳಿಸು, ಕಪ್ಪಡಿಸು

ಕನ್ನಡ[ಸಂಪಾದಿಸಿ]

ಕಪ್ಪಡಿಸು

 1. ಅತಿಯಾಗಿ ತಿನ್ನು, ಮಿತಿಮೀರಿ ತಿನ್ನು, ಗಬಗಬನೆ ತಿನ್ನು

ಕನ್ನಡ[ಸಂಪಾದಿಸಿ]

ಕನವರಿಸು

 1. ನಿದ್ದೆಯಲ್ಲಿ ಬಡಬಡಿಸು

ಕನ್ನಡ[ಸಂಪಾದಿಸಿ]

ಕಪ್ಪು ನೀಲಿ

 1. ಕಡು ನೀಲಿ, dark blue colour

ಕನ್ನಡ[ಸಂಪಾದಿಸಿ]

ಕರ

 1. ಕರು, ತೆರಿಗೆ

ಕನ್ನಡ[ಸಂಪಾದಿಸಿ]

ಕರಡ

 1. ಒಣಗಿದ ಹುಲ್ಲು

ಕನ್ನಡ[ಸಂಪಾದಿಸಿ]

ಕರಾವು

 1. ಹಾಲುಕೊಡುವ ಹಸು, ಕಾಮಧೇನು

ಕನ್ನಡ[ಸಂಪಾದಿಸಿ]

ಕರಮೀನು

 1. ಸಣ್ಣ ಅಥವಾ ಪುಡಿ ಮೀನು

ಕನ್ನಡ[ಸಂಪಾದಿಸಿ]

ಕರಿ

 1. ಕಪ್ಪು, ಕರೆಯುವಿಕೆ

ಕನ್ನಡ[ಸಂಪಾದಿಸಿ]

ಕರ್ರಂದು

 1. ಕಪ್ಪನೆಯ

ಕನ್ನಡ[ಸಂಪಾದಿಸಿ]

ಕರುಬು

 1. ಹೊಟ್ಟೆ ಕಿಚ್ಚು, ಹೊಟ್ಟುರಿ

ಕನ್ನಡ[ಸಂಪಾದಿಸಿ]

ಕಸೀನ ಮಂಕ್ರಿ

 1. ಕಸ ಸುರಿಯುವ ಮಂಕರಿ, ಕಸದ ಬುಟ್ಟಿ, a dust bin

ಕನ್ನಡ[ಸಂಪಾದಿಸಿ]

ಕಸೀನ ಮುಂಡಿ

 1. ಕಸಬರಕೆ, ಪೊರಕೆ, ಬರಲು

ಕನ್ನಡ[ಸಂಪಾದಿಸಿ]

ಕಸಬರಿಕೆ

 1. ಬರಲು, ಪೊರಕೆ, ಪರಕೆ, ಕಸ ಗುಡಿಸುವ ಸಾಧನ

ಕನ್ನಡ[ಸಂಪಾದಿಸಿ]

ಕಸಿ

 1. ಸೆಳೆ, ಬಿಚ್ಚು, snatch away

ಕನ್ನಡ[ಸಂಪಾದಿಸಿ]

ಕಸಿರಿಪಿಸಿರಿ

 1. ಹಾಳುಮೂಳು

ಕನ್ನಡ[ಸಂಪಾದಿಸಿ]

ಕಸ್ತಿ

 1. ಜಗಳ, ಗಲಾಟೆ

ಕನ್ನಡ[ಸಂಪಾದಿಸಿ]

ಕತಿ

 1. ಖತಿ, ಕೋಪ, ಕ್ವಾಪ

ಕನ್ನಡ[ಸಂಪಾದಿಸಿ]

ಕತ್ತು

 1. ಹೊತ್ತಿಕೊಂಡು, ಕದ್ದು

ಕನ್ನಡ[ಸಂಪಾದಿಸಿ]

ಕತ್ತು

 1. ಕುತ್ತಿಗೆ

ಕನ್ನಡ[ಸಂಪಾದಿಸಿ]

ಕತ್ತುರಗಿ

 1. ಕತ್ತು ಓರೆಯಾಗಿರುವವಳು

ಕನ್ನಡ[ಸಂಪಾದಿಸಿ]

ಕೌಚು

 1. ಕವುಚು, ಹಿಡಿದು (ಒಂದೆಡೆಗೆ) ಕೊಡು

ಕನ್ನಡ[ಸಂಪಾದಿಸಿ]

ಕೌದಿ

 1. ಎತ್ತಿಗೆ ಹೊದಿಸುವ ಗೋಣಿಯ ತಟ್ಟು

ಕನ್ನಡ[ಸಂಪಾದಿಸಿ]

ಕವಡೆ

 1. ದಾಳ, ಲೆತ್ತ

ಕನ್ನಡ[ಸಂಪಾದಿಸಿ]

ಕವಕ್ಕನೆ

 1. ಕೂಡಲೆ, ಕವಕನೆ

ಕನ್ನಡ[ಸಂಪಾದಿಸಿ]

ಕವೆಗೋಲು

 1. ಕವಲಾಗಿರುವ ಕೋಲು, ಹಿಟ್ಟನ್ನು ಓನಿಸಲು ಉಪಯೋಗಿಸುವ ಕೋಲು

ಕನ್ನಡ[ಸಂಪಾದಿಸಿ]

ಕವುಚು

 1. ಕೌಚು, ಕೋಲಿಗಳನ್ನು ಪಂಜರ ಅಥವಾ ಮಂಕರಿಯಲ್ಲಿ ಕೂಡಿ ಹಾಕುವುದು

ಕನ್ನಡ[ಸಂಪಾದಿಸಿ]

ಕವುದಿ

 1. ಎತ್ತಿಗೆ ಹೊದಿಸುವ ಗೋಣಿಯ ತಟ್ಟು

ಕನ್ನಡ[ಸಂಪಾದಿಸಿ]

ಕವುರುಕೆ

 1. ಸಸಲ್ಪ (ಸ್ವಲ್ಪ ಸ್ವಲ್ಪವಾಗಿ) ಹಲ್ಲಿನಿಂದ ಕಚ್ಚಿ ಕೆರೆದು ತಿನ್ನುವಿಕೆ

ಕನ್ನಡ[ಸಂಪಾದಿಸಿ]

ಕಯಿ

 1. ಕಯ್ಯಿ, ಕಹಿ

ಕನ್ನಡ[ಸಂಪಾದಿಸಿ]

ಕೆಡಗು

 1. ಬೀಳಿಸು

ಕನ್ನಡ[ಸಂಪಾದಿಸಿ]

ಕೆಡಕಿ

 1. ಕೆಟ್ಟವಳು, ಕೆಟ್ಟವಳು ಎನ್ನುವ ಬಿರುದು

ಕನ್ನಡ[ಸಂಪಾದಿಸಿ]

ಕೆಡಿಕೊಳ್ಳು

 1. ತಾನೆ ಬೀಳಿಸಿಕೊಳ್ಳು

ಕನ್ನಡ[ಸಂಪಾದಿಸಿ]

ಕೆಂಬೂತ

 1. ನವಿಲನ್ನು ಅನುಕರಣೆ ಮಾಡುವ ಕಾಗೆ ಜಾತಿಯ ಪಕ್ಷಿ

ಕನ್ನಡ[ಸಂಪಾದಿಸಿ]

ಕೆಂದ

 1. ಕೆಂಪು ಬಣ್ಣ, ಕೆಂಚು

ಕನ್ನಡ[ಸಂಪಾದಿಸಿ]

ಕೆಂಪೀನ

 1. ಕೆಂಪಗಿರುವ

ಕನ್ನಡ[ಸಂಪಾದಿಸಿ]

ಕೆಟ್ಟಮುಟ್ಟೋರು

 1. ಕಷ್ಟದಲ್ಲಿರುವ ಜನ, ಒಳ್ಳೆಯ ದಿನಗಳನ್ನು ಕಂಡರಿಯದವರು

ಕನ್ನಡ[ಸಂಪಾದಿಸಿ]

ಕೆಬ್ಬೆ

 1. ಸಿಪ್ಪೆ

ಕನ್ನಡ[ಸಂಪಾದಿಸಿ]

ಕೆಲಸದಾಕೆ

 1. ತೊತ್ತಿ, ಮನೆಗೆಲಸದವಳು

ಕನ್ನಡ[ಸಂಪಾದಿಸಿ]

ಕೆರಾ

 1. ಚಪ್ಪಲಿ, ಮೋಚೆ

ಕನ್ನಡ[ಸಂಪಾದಿಸಿ]

ಕೆರಿ

 1. ಕೆದರು, ಪರಚು

ಕನ್ನಡ[ಸಂಪಾದಿಸಿ]

ಕೆತ್ತ

 1. ಚಕ್ಕೆ, ಚೂರು

ಕನ್ನಡ[ಸಂಪಾದಿಸಿ]

ಕೆತ್ತು

 1. ಸುಲಿ, ಕೊಚ್ಚಿ ತೆಗೆ, ಹೆರೆದು ತೆಗೆ

ಕನ್ನಡ[ಸಂಪಾದಿಸಿ]

ಕಿಳ್ಳು

 1. ಸಂಧಿ, ಸಂಪು

ಕನ್ನಡ[ಸಂಪಾದಿಸಿ]

ಕಿಂದರಿ

 1. ಕಿನ್ನರಿ, ಒಂದು ಜಾನಪದ ವಾದ್ಯ, a type of music instrument
 2. ಕಿನ್ನುಡಿ, music

ಕನ್ನಡ[ಸಂಪಾದಿಸಿ]

ಕಿಟ್ಟ

 1. ಗಜ್ಜುಗ

ಕನ್ನಡ[ಸಂಪಾದಿಸಿ]

ಕಿಬ್ಬರಿ

 1. ಪಕ್ಕೆಯ ಕೆಳ ಭಾಗ

ಕನ್ನಡ[ಸಂಪಾದಿಸಿ]

ಕಿಜ್ರ

 1. ಅಸೂಯೆ, ಹೊಟ್ಟೆಕಿಚ್ಚು, ಹೊಟ್ಟುರಿ

ಕನ್ನಡ[ಸಂಪಾದಿಸಿ]

ಕಿಲಬು

 1. ಕೊಳೆ

ಕನ್ನಡ[ಸಂಪಾದಿಸಿ]

ಕಿರಾತ

 1. ಬೇಡ, ವ್ಯಾಧ, ಕ್ರೂರಿ

ಕನ್ನಡ[ಸಂಪಾದಿಸಿ]

ಕಿರಿ

 1. ಗಿರಿ, ಗಿಂಜು, to grin

ಕನ್ನಡ[ಸಂಪಾದಿಸಿ]

ಕಿರಿದಿ

 1. ಶಾನುಭೋಗರ ಲೆಕ್ಕದ ಪುಸ್ತಕ

ಕನ್ನಡ[ಸಂಪಾದಿಸಿ]

ಕಿಸಬಾಯಿ

 1. ಕಿಸಿದ ಬಾಯಿ, ಅಗಲವಾಗಿ ತೆರೆದ ಬಾಯಿ, ಹಲ್ಲುಗಿಂಜಿದ ಬಾಯಿ

ಕನ್ನಡ[ಸಂಪಾದಿಸಿ]

ಕಿಸವಾಯಿ

 1. ಕಿಸಬಾಯಿ, ಕಿಸಿದಬಾಯಿ, ಹಲ್ಲುಗಿಂಜಿದ ಬಾಯಿ, grinned mouth

ಕನ್ನಡ[ಸಂಪಾದಿಸಿ]

ಕಿಸೆ

 1. ಜೇಬು, ಜೋಬು, ಬೊಕ್ಕಣ

ಕನ್ನಡ[ಸಂಪಾದಿಸಿ]

ಕಿಸಿ

 1. ಅಗಲಿಸು, ಎರಡಾಗಿಸು
 2. ಹಲ್ಲುಗಿಂಜು, ಹಲ್ಲು ಕಿಸಿ, to grin

ಕನ್ನಡ[ಸಂಪಾದಿಸಿ]

ಕಿಸ್ತಾಟ

 1. ಅಳು, ದುಕ್ಕ

ಕನ್ನಡ[ಸಂಪಾದಿಸಿ]

ಕೊಡದೋರು

 1. ಕೊಡದವರು

ಕನ್ನಡ[ಸಂಪಾದಿಸಿ]

ಕೊಡಮಗ

 1. ದೊಡ್ಡಮಗ, ಹಿರಿಯ ಮಗ, ಮದುವೆ ವಯಸ್ಸಿಗೆ ಬಂದ ಮಗ

ಕನ್ನಡ[ಸಂಪಾದಿಸಿ]

ಕೊಡತಿ

 1. ಬಡಿಯಲು ಉಪಯೋಗಿಸುವ ಮರದ ಅಥವಾ ಕಬ್ಬಿಣದ ಸಾಧನ

ಕನ್ನಡ[ಸಂಪಾದಿಸಿ]

ಕೊಡಿಯಾಲ

 1. ಒಂದು ಊರಿನ ಹೆಸರು

ಕನ್ನಡ[ಸಂಪಾದಿಸಿ]

ಕೊಳ್ಳಿ

 1. ಬೆಂಕಿ ಹೊತ್ತಿಸಿದ ಸೌದೆ ತುಂಡು (ಯಾರಾದರೂ ಸತ್ತರೆ, ಹೆಣವನ್ನು ಒಯ್ಯುವಾಗ ಇದನ್ನು ಹಿಡಿಯುತ್ತಾರೆ)

ಕನ್ನಡ[ಸಂಪಾದಿಸಿ]

ಕೊಳಬಡ್ಡಿ

 1. ಕೊಳಕಿ, ಕೊಳಕಾಗಿರುವ ಹೆಂಗಸು, ಕೊಳಕು ಮನಸ್ಸಿನವಳು

ಕನ್ನಡ[ಸಂಪಾದಿಸಿ]

ಕೊಳಕೆ

 1. ಕೆರೆಯಲ್ಲಿ ಬೆಳೆದ ವಿಷಪೂರಿತ ಮುಳ್ಳಿನ ಗಿಡ, ಬತ್ತದ ಮೂರನೆ ಬೆಳೆ

ಕನ್ನಡ[ಸಂಪಾದಿಸಿ]

ಕೊಂಡ

 1. ಹಬ್ಬದಲ್ಲಿ ದೇವರ ಗುಡಿಯ ಮುಂದೆ ಉದ್ದಕೆ ಹಾಕಿರುವ ಕೆಂಡದ ಗುಂಡಿ, ದೇವರ ಗುಡಿಯ ಮುಂದೆ ಇರುವ ನೀರಿನ(ತೀರ್ಥ-ಜಲದ) ತೊಟ್ಟಿ

ಕನ್ನಡ[ಸಂಪಾದಿಸಿ]

ಕೊಂಟು

 1. ಗಂಟು ಗಂಟಾದ

ಕನ್ನಡ[ಸಂಪಾದಿಸಿ]

ಕೊಂಚ

 1. ಅಲ್ಪ, ಸ್ವಲ್ಪ, ತುಸ, ಒಸಿ, ಕೀಳು ಮನುಷ್ಯ

ಕನ್ನಡ[ಸಂಪಾದಿಸಿ]

ಕೊಂಪೆ

 1. ಸಣ್ಣ ಹಳ್ಳಿ

ಕನ್ನಡ[ಸಂಪಾದಿಸಿ]

ಕೊಣ

 1. ಕೊಳ, a pond

ಕನ್ನಡ[ಸಂಪಾದಿಸಿ]

ಕೊಣಮಿಣಿ

 1. ಒಂದು ಜಾನಪದ ವಾದ್ಯ

ಕನ್ನಡ[ಸಂಪಾದಿಸಿ]

ಕೊಟ್ಟ ಮನೆ

 1. ಮದುವೆಯಾದ ಮನೆ, ಗಂಡನ ಮನೆ

ಕನ್ನಡ[ಸಂಪಾದಿಸಿ]

ಕೊಟ್ಟಣ

 1. ಬತ್ತವನ್ನು ಒನಕೆಯಿಂದ ಕುಟ್ಟುವುದು

ಕನ್ನಡ[ಸಂಪಾದಿಸಿ]

ಕೊಟ್ಟಿಗೆ

 1. ದನಗಳನ್ನು ಕಟ್ಟಿಹಾಕುವ ಜಾಗ

ಕನ್ನಡ[