ಅಷ್ಟಾಶೀತಿ

ವಿಕ್ಷನರಿದಿಂದ

ನಾಮಪದ[ಸಂಪಾದಿಸಿ]

  • ಅಷ್ಟಾಶೀತಿ;
  1. .ಹದಿನೆಂಟು ಸಾವಿರ. (ಹದಿನೆಂಟು ?- ಅಷ್ಟ- ಎಂಟು: ಶೀತಿ- ಶತ?- +ಸಾವಿರ?
ಷಡುರಸಾನ್ನದಲಾದರಣೆಯಿ೦
ದುಡುಗೊರೆಗಳಿ೦ತುಷ್ಠಿ ಬಡಿಸಿದ
ಪೊಡವಿಪಾಲಕ ಋಷಿಗಳಷ್ಟಾಶೀತಿ ಸಾವಿರವ |
ಕಡುಸುಖದ ಸ೦ನ್ಯಾಸಿ ವೇಷದ
ಮೃಡನು ಮುದದಲಿ ಕೌರವನ ಮೈ
ದಡವಿ ಮೆಚ್ಚಿದೆ ಮಗನೆ ಬೇಡೊಲಿದುದನು ನಿನಗೆ೦ದ || ೬ ||ಕು.ವ್ಯಾ.ಭಾರತ,ಅರಣ್ಯ ಪರ್ವ;16 neya ಸಂಧಿ.
  • ಋಷಿಗಳ+ ಅಷ್ಟಾಶೀತಿ ಸಾವಿರವ(ಎಂಭತ್ತೆಂಟು ಸಾವಿರ)
ಪದವಿಭಾಗ-ಅರ್ಥ: ಷಡುರಸ (ಷಟ್+ ರಸ- ಷಡ್ರಸ- ಆರು ರುಚಿ)+ ಅನ್ನದಲಿ(ಊಟ)+ ಅದರಣೆಯಿ೦ದ+ ಉಡುಗೊರೆಗಳಿ೦ ತುಷ್ಠಿ(ಹೆಚ್ಚು) ಬಡಿಸಿದ ಪೊಡವಿಪಾಲಕ(ಭೂಮಿ ಒಡೆಯ- ರಾಜ) ಋಷಿಗಳ+ ಅಷ್ಟಾಶೀತಿ ಸಾವಿರವ(ಎಂಭತ್ತೆಂಟು ಸಾವಿರ) ಕಡುಸುಖದ (ಕಡು- ಅತಿ) ಸ೦ನ್ಯಾಸಿ ವೇಷದ ಮೃಡನು(ಶಿವ) ಮುದದಲಿ ಕೌರವನ ಮೈದಡವಿ ಮೆಚ್ಚಿದೆ ಮಗನೆ ಬೇಡು+ ಒಲಿದುದನು(ಇಷ್ಟವಾದುದನ್ನು) ನಿನಗೆ+ ಎ೦ದ.

ಉಲ್ಲೇಖ[ಸಂಪಾದಿಸಿ]

  1. ಸಿರಿಗನ್ನಡ ಅರ್ಥ ಕೋಶ