ಅಕ್ಷೋಹಿಣಿ

ವಿಕ್ಷನರಿದಿಂದ

ಅಕ್ಷೋಹಿಣಿ[ಸಂಪಾದಿಸಿ]

  1. ೨೧೮೭೦ ಆನೆಗಳು + ೨೧೮೭೦ ರಥಗಳು + ೬೫೬೧೦ ಕುದುರೆಗಳು + ೧೦೯೩೫೦ ಕಾಲಾಳುಗಳಿರುವ ಸೈನ್ಯ ಸಮೂಹ. [೧]
  2. ಅಕ್ಷೋಹಿಣಿ, ಕ್ಷೋಣಿ 17 ಅಂಕಿಗಳನ್ನೊಳಗೊಂಡ ಸಂಖ್ಯೆಯ (ಸೇನೆ)?, ಭೀಷ್ಮ ಪರ್ವ,2,21; [೨](. ಅಕ್ಷೋಹಿಣಿ: ಗದಾಪರ್ವದ 2 ಸಂಧಿಯ 8ನೆಯ, ಪದ್ಯದ ಟಿಪ್ಪಣಿಯನ್ನು ನೋಡಿ. ನಾರೀನಿಕರ, ಗದಾ ಪರ್ವ,9,41)

ಅಕ್ಷೌಹಿಣಿ[ಸಂಪಾದಿಸಿ]

  1. ೨೧೮೭೦ ಆನೆಗಳು + ೨೧೮೭೦ ರಥಗಳು + ೬೫೬೧೦ ಕುದುರೆಗಳು + ೧೯೮೩೫೯ ಕಾಲಾಳುಗಳಿರುವ ಸೈನ್ಯ ಸಮೂಹ.[೩]

ವಿವರ[ಸಂಪಾದಿಸಿ]

  1. 5 ಜನ ಕಾಲ್ದಳ, 1 ಆನೆ, 1 ರಥ ಹಾಗೂ 3 ಕುದುರೆ = ಒಂದು ಪತ್ತಿ.
  2. 3 ಪತ್ತಿಗಳು ಸೇರಿದರೆ ಒಂದು ಸೇನಾಮುಖ. = 3 ರಥ, 3 ಆನೆ 9 ಕುದುರೆ ಹಾಗೂ 15 ಜನ ಕಾಲ್ದಳ ಸೇರಿದರೆ ಒಂದು ಸೇನಾಮುಖ.
  3. 3 ಸೇನಾಮುಖ ಸೇರಿದರೆ 1 ಕುಲ್ಮ; = 9 ರಥ, 9 ಆನೆ, 27 ಕುದುರೆ ಹಾಗೂ 45 ಜನ ಕಾಲ್ದಳ ಸೇರಿದರೆ ಒಂದು ಕುಲ್ಮ;
  4. 3 ಕುಲ್ಮ‌ ಸೇರಿದರೆ 1 ಗಣ; = 27 ರಥ, 27 ಆನೆ 81 ಕುದುರೆ ಹಾಗೂ 135 ಜನ‌ ಕಾಲ್ದಳ = ಒಂದು ಗಣ;
  5. 3 ಗಣ ಸೇರಿದರೆ ಒಂದು ವಾಹಿನಿ; = ಅಂದರೆ 81 ರಥ, 81 ಆನೆ, 243 ಕುದುರೆ ಹಾಗೂ 405 ಜನ ಕಾಲ್ದಳ;
  6. 3 ವಾಹಿನಿ‌‌ ಸೇರಿದರೆ ಒಂದು ವೃತನ; = 243 ರಥ, 243 ಆನೆ, 729 ಕುದು ರೆ ಹಾಗೂ 1215 ಜನ‌ ಕಾಲ್ದಳ‌ ಸೇರಿದರೆ ಒಂದು ವೃತನ;
  7. 3 ವೃತನ ಸೇರಿದರೆ ಒಂದು ಚಮುವು; =729 ರಥ, 729 ಆನೆ, 2187 ಕುದುರೆ ಹಾಗೂ 3645 ಜನ‌ ಕಾಲ್ದಳ;
  8. 3 ಚಮುವು ಸೇರಿದರೆ ಒಂದು ಅನಿಕಿನಿ‌; = 2387 ರಥ, 2387 ಆನೆ, 6561 ಕುದುರೆ ಹಾಗೂ 10355 ಜನ‌ ಕಾಲ್ದಳ;
  9. 10 ಅನಿಕಿನಿ‌ ಸೇರಿದರೆ ಒಂದು ಅಕ್ಷೋಹಿಣಿ ಸೈನ್ಯ; =ಒಂದು ಅಕ್ಷೋಹಿಣಿ ಸೈನ್ಯ ಎಂದರೆ 21870 ರಥ , 21870 ಆನೆ, 65610 ಕುದುರೆ ಹಾಗೂ 109350 ಜನ ಕಾಲ್ದಳ. [೪]

ಉಲ್ಲೇಖ[ಸಂಪಾದಿಸಿ]

  1. ದಾಸ ಸಾಹಿತ್ಯ ನಿಘಂಟು
  2. ಗದುಗಿನ ಭಾರತ ಪದಕೋಶ - ಅ. ಆ.
  3. ಸಿರಿಗನ್ನಡ ಅರ್ಥಕೋಶ
  4. ಮಹಾಭಾರತ.